ಗಂಡ ಸತ್ತು ಒಂದು ತಿಂಗಳಾಗಿಲ್ಲ ಆಗಲೆ ರಾಜಕೀಯ ಬೇಕಾಯ್ತಾ?’ ಎಂದು ಸುಮಲತಾ ಅಂಬರೀಶ್ ಬಗ್ಗೆ ಕೀಳು ಮಟ್ಟದ ಹೇಳಿಕೆ ನೀಡಿದ್ದ ಸಚಿವ ಎಚ್.ಡಿ.ರೇವಣ್ಣ ಅವರ ವಿರುದ್ಧ ಸಾಮಾಜಿಕ ಜಾಲತಾಣ ಸೇರಿ ಇಡೀ ಕರ್ನಾಟಕದಾದ್ಯಂತ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು.
ರೇವಣ್ಣ ಯಾವ ಅರ್ಥದಲ್ಲಿ ಹೇಳಿದ್ದಾರೆ ನಿಜವಾಗಿಯೂ ನನಗೆ ಗೊತ್ತಿಲ್ಲ. ನಾನಾಗಲಿ ನಮ್ಮಪ್ಪ, ಅಮ್ಮ, ಕುಟುಂಬ ಒಳ್ಳೆಯ ನಡತೆಯನ್ನು ಹೇಳಿಕೊಟ್ಟಿದೆ ಎಂದು ಹೇಳುವ ಮೂಲಕ ದೊಡ್ಡಪ್ಪನ ಹೇಳಿಕೆಯ ವಿರುದ್ದ ನೇರವಾಗಿ ಅಸಮಾಧಾನ ವ್ಯಕ್ತಪಡಿಸಿದ್ದರು.
ಇದರ ಬೆನ್ನಲ್ಲೆ
ನಟಿ ಸುಮಲತಾ ಅಂಬರೀಶ್ ಅವರು ವಿಶ್ರಾಂತಿ ಮೊರೆ ಹೋಗಿದ್ದು, ಲೋಕಸಭಾ ಚುನಾವಣೆಯ ಸಮಯದಲ್ಲಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ನಡುವೆ ನಡೆಯುತ್ತಿದ್ದ ಪೈಪೋಟಿಗೆ ತಾತ್ಕಾಲಿಕ ವಿರಾಮ ಸಿಕ್ಕಂತಾಗಿದೆ.
ಸುಮಲತಾ ಅವರು ಕೆಲವು ದಿನಗಳಿಂದ ಮಂಡ್ಯದಲ್ಲಿ ಬಿರುಸಿನ ಪ್ರಚಾರ ನಡೆಸುತ್ತಿದ್ದರು. ಆದರೆ ತೀವ್ರ ಸುತ್ತಾಟ ಮತ್ತು ರಾಜಕೀಯ ಕೆಲ ನಾಯಕರ ಕೆಲ ಹೇಳಿಕೆಗಂಳಿಂದ ಮನನೊಂದಿರುವ ಸುಮಲತಾ ಅಂಬರೀಷ್ ಅವರು ಮಂಡ್ಯದಿಂದ ಬೆಂಗಳೂರಿಗೆ ವಾಪಸ್ಸಾಗಿದ್ದಾರೆ. ಇಂದು ಮತ್ತು ನಾಳೆ ಬೆಂಗಳೂರಲ್ಲೇ ಸುಮಲತಾ ಅವರು ಉಳಿಯುವ ಸಾಧ್ಯತೆ ಇದ್ದು. ಇತ್ತ ನಿಖಿಲ್ ಕುಮಾಸ್ವಾಮಿ ಅವರಿಗೂ ಮಂಡ್ಯದಲ್ಲಿ ಯಾವುದೇ ಕಾರ್ಯಕ್ರಮಗಳಿಲ್ಲ. ಹೀಗಾಗಿ ಮಂಡ್ಯದ ರಾಜಕೀಯದಲ್ಲಿ ಸ್ವಲ್ಪ ಮಟ್ಟಿನ ವಿರಾಮ ಸಿಕ್ಕಿದಂತಾಗಿದೆ. ಕಳೆದು ಒಂದು ವಾರದಿಂದ ಮಂಡ್ಯದಲ್ಲಿ ಸುಮಲತಾ ಅಥವಾ ನಿಖಿಲ್ ಇಬ್ಬರಲ್ಲಿ ಒಬ್ಬರು ಬರುತ್ತಿದ್ದರು. ಚುನಾವಣೆ ದಿನಾಂಕ ಘೋಷಣೆಯಾಗುವ ಮೊದಲೇ ಮಂಡ್ಯದಲ್ಲಿ ಚುನಾವಣೆ ಕಣ ರಂಗೇರಿತ್ತು. ಇತ್ತ ಮಂಡ್ಯದಲ್ಲಿ ಸಾಮಾಜಿಕ ಜಾಲತಾಣಗಳಿಲ್ಲಿ ನಿಖಿಲ್ ಕುಮಾರಸ್ವಾಮಿ ಪರ-ವಿರೋಧವಾಗಿ ಟೀಕೆಗಳು ವ್ಯಕ್ತವಾಗುತ್ತಿದೆ.
ದೇವೇಗೌಡರು ಕ್ರಿಕೆಟ್ ಟೀಂ ಕಟ್ಟುತ್ತಿದ್ದರೆ ಅವರ ಇಡೀ ಕುಟುಂಬ ಟೀಂ ನಲ್ಲಿರುತ್ತಿತ್ತು ಎಂದು ಹೇಳುವಂತಹ ಫೋಟೋವೊಂದು ಇದೀಗ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.
ಒಟ್ಟಾರೆ ಮಂಡ್ಯದ ರಾಜಕಾರಣಕ್ಕೆ ಸ್ವಲ್ಪ ಮಟ್ಟಿನ ಬ್ರೇಕ್ ಸಿಕ್ಕಿದ್ದು ಲೋಕಸಭಾ ಚುನಾವಣಾ ಕಣ ಮುಂದಿನ ದಿನಗಳಲ್ಲಿ ಯಾವ ರೀತಿ ರಂಗೇರಲಿದೆ ಎಂಬುದು ಮುಂದಿನ ದಿನಗಳಲ್ಲಿ ತಿಳಿಯಲಿದೆ.