ಪರೋಪಕಾರದಲ್ಲೇ ಸಂತೋಷ ಕಾಣೋ ಜನ ನಮ್ಮ ಸುತ್ತ ಇದ್ದಾರೆ..! ಅವರನ್ನ ಗುರುತಿಸುವ ಪ್ರಯತ್ನ ನಾವು ಮಾಡಲ್ಲ..! ಎಷ್ಟೋಜನ ಒಳ್ಳೆಯ ಹುದ್ದೆ, ಸಂಬಳವನ್ನೆಲ್ಲಾ ಬಿಟ್ಟು ಜನರ ಸೇವೆ ಮಾಡ್ತಾ ಇರ್ತಾರೆ..! ಅವರಲ್ಲಿ ಈ ಸೇವಾಮನೋಭಾವನೆ ಹುಟ್ಟಿನಿಂದಲೇ ಬಂದಿರುತ್ತೆ ಅಂತ ಹೇಳೋಕಾಗಲ್ಲ..! ಕೆಲವರ ಜೀವನದಲ್ಲಾದ ಒಂದು ಸಣ್ಣ ಘಟನೆ ಅವರನ್ನು ಸಂಪೂರ್ಣ ಬದಲಾಯಿಸಿರುತ್ತೆ..! ಅವರು ಸಮಾಜಕ್ಕಾಗಿ, ಕಷ್ಟದಲ್ಲಿರೋರಿಗಾಗಿ ಮಿಡಿಯುವಂತೆ ಮಾಡಿರುತ್ತೆ..!
ಅವರು ವಿಜಯ ಠಾಕೂರ್. 11 ಭಾಷೆ ಮಾತಾಡ ಬಲ್ಲರು..! ಈಗ ಅವರಿಗೆ 74 ವರ್ಷ ವಯಸ್ಸು..! ಸ್ವಂತದೊಂದು ಟ್ಯಾಕ್ಸಿ ಇಟ್ಕೊಂಡು ಜೀವನ ನಡೆಸ್ತಾ ಇದ್ದಾರೆ..! ಹಂಗಂತ ಇವರೇನು ಬಡವರೇನಲ್ಲ..! ಅಶಿಕ್ಷಿತರೂ ಅಲ್ಲ..! ಕೆಲಸ ಸಿಕ್ಕಿಲ್ಲ ಅಂತ ಟ್ಯಾಕ್ಸಿ ಓಡಿಸ್ತಾ ಇರೋರ್ ಅಂತೂ ಅಲ್ವೇ ಅಲ್ಲ..! ಇವರೊಬ್ಬ ಮಾಜಿ ಇಂಜಿನಿಯರ್..! `ಲಾರ್ಸೆನ್ ಟೂಬ್ರೊ’ನಲ್ಲಿ 1984ಕ್ಕೆ ಮೊದಲು ಇಂಜಿನಿಯರ್ ಆಗಿ ಸೇವೆ ಸಲ್ಲಿಸ್ತಾ ಇದ್ದವರು…! ಅಲ್ಲಿ ಅವರಿಗೆ ಆಗ ಸಿಗ್ತಾ ಇದ್ದಿದ್ದು 65, 000 ಮಾಸಿಕ ಸಂಬಳ..! ಅಷ್ಟೊಂದು ಒಳ್ಳೆಯ ಕೆಲಸವನ್ನು ಬಿಟ್ಟು 1984ರಿಂದ ಟ್ಯಾಕ್ಸಿ ಓಡಿಸಿಕೊಂಡು ಜೀವನ ನಡೆಸ್ತಾ ಇದ್ದಾರೆ..! ಅದು ಅವರ ದುಡಿಮೆ ಮಾತ್ರವೆಂದಲ್ಲಾ..ತುರ್ತು ಇರುವವರ ಸೇವೆಗಾಗಿ..!
ಇಂಜಿನಿಯರ್ ಕೆಲಸ ಬಿಟ್ಟು ಸ್ಟೈರಿಂಗ್ ಹಿಡಡಿಯುವ ನಿರ್ಧಾರವನ್ನು ವಿಜಯ್ ಠಾಕೂರ್ ಮಾಡಲು ಒಂದು ಘಟನೆ ಕಾರಣ..!
ಒಮ್ಮೆ ಅವರ ಹೆಂಡತಿ ಗರ್ಭಪಾತದಿಂದ ನರಳಲಾರಂಭಿಸಿದ್ರು..! ರಾತ್ರಿ ಇದ್ದಕ್ಕಿದ್ದಂತೆ ಹೊಟ್ಟೆ ನೋವು ಜಾಸ್ತಿ ಆಯ್ತು..! ಆ ರಾತ್ರಿ ಅವರನ್ನು ಆಸ್ಪತ್ರೆಗೆ ಸೇರಿಸಲು ಕ್ಯಾಬ್ ಕೇಳಿದರೇ ಯಾವೊಬ್ಬನೂ ಬರಲಿಲ್ಲ..! ಇದು ಅವರಲ್ಲಿ ತುಂಬಾ ನಿರಾಶೆಯನ್ನುಂಟು ಮಾಡ್ತು..! ಆಗಲೇ ತಿರ್ಮಾನಿಸಿ ಬಿಟ್ಟರು, 65, 000 ರೂ ಸಂಬಳದ ಕೆಲಸವನ್ನು ಬಿಟ್ಟು ಟ್ಯಾಕ್ಸಿ ಓಡಿಸಲು..! ಸಾಮಾನ್ಯ ಗ್ರಾಹಕರಿಂದ ತಿಂಗಳಿಗೆ 10,000ರೂಪಾಯಿ ದುಡಿಯುತ್ತಾರೆ..! ಕಷ್ಟವಿದ್ದರೆ ಅಂಥವರ ಬಳಿಯಲ್ಲಿ ಕಡಿಮೆ ದುಡ್ಡು ತೆಗೆದುಕೊಳ್ತಾರೆ..! ತುರ್ತಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗ ಬೇಕಾದವರಿಗಾಗಿ ಯಾವಾಗಲೂ..ಯಾವ ಸಮಯಕ್ಕೂ ತಯಾರಿರುತ್ತಾರೆ..! ಇವರ ಟ್ಯಾಕ್ಸಿಯನ್ನು ಯಾರೇ ಹತ್ತಿದರು ಅವರಿಗೆ ತಮ್ಮ ಕಾರ್ಡ್ ಕೊಟ್ಟು ಎಮರ್ಜೆನ್ಸಿ ಇದ್ದರೆ ಬೆಳಿಗ್ಗೆ 3ಗಂಟೆಗಾದರೂ ಕರೆ ಮಾಡಿ ಬರುತ್ತೇನೆಂದು ಹೇಳಿಯೇ ಪ್ಯಾಸೆಂಜರ್ನ್ನು ತಲುಪಬೇಕಾದ ಸ್ಥಳಕ್ಕೆ ತಲುಪಿಸೋದು..!
ಒಮ್ಮೆ ಟ್ಯಾಕ್ಸಿಯಲ್ಲಿ ಹೋಗ್ತಾ ಇರುವಾಗ ಇಬ್ಬರು ಕ್ಯಾಬ್ಗಾಗಿ ಕಾದು ಕಾದು ನಿರಾಶರಾಗಿರೋದು ಠಾಕೂರ್ ಕಣ್ಣಿಗೆ ಬೀಳುತ್ತೆ..! ಅವರು ತಕ್ಷಣ ತನ್ನ ಟ್ಯಾಕ್ಸಿಯನ್ನು ನಿಲ್ಲಿಸಿ ಅವರ ಬಳಿ ಹೋದಾಗ ಗೊತ್ತಾಗುತ್ತೆ, ಅಲ್ಲೊಬ್ಬಳು ಮಹಿಳೆಯೂ ಇರುತ್ತಾರೆ..! ಅವಳು ಸಾವು ಬದುಕಿನ ನಡುವೆ ಹೋರಾಡ್ತಾ ಇರ್ತಾರೆ..! ಅವರ ದೇಹ ಶೇ75ರಷ್ಟು ಸುಟ್ಟು ಹೋಗಿತ್ತು..! ಯಾವೊಬ್ಬ ಟ್ಯಾಕ್ಸಿ ಡ್ರೈವರ್ ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಮುಂದೆ ಬರಲಿಲ್ಲ..! ವಿಜಯ್ ಠಾಕೂರ್ ಅವರಿಗೆ ಕಾರಿನಲ್ಲಿದ್ದ ಬ್ಲಾಂಕೇಟ್ ಕೊಟ್ಟು, ಅದನ್ನು ಆ ಮಹಿಳೆಗೆ ಸುತ್ತುವಂತೆ ಆಕೆಯೊಡನಿದ್ದ ವ್ಯಕ್ತಿಗಳಿಗೆ ಹೇಳಿ, ತನ್ನ ಟ್ಯಾಕ್ಸಿಯಲ್ಲಿ ಹತ್ತಿರ ಆಸ್ಪತ್ರೆಗೆ ಕರ್ಕೊಂಡು ಹೋಗ್ತಾರೆ..! ಕೆಲವು ದಿನಗಳ ನಂತರ ಆಕೆ ಸುಧಾರಿಸಿದ್ದಾರೋ ಇಲ್ಲವೋ ಎಂದು ನೋಡಲು ಆಸ್ಪತ್ರೆಗೆ ಹೋಗ್ತಾರೆ..! ಆಕೆ ಚೇತರಿಸಿಕೊಂಡಿರುತ್ತಾರೆ..! ವಿಜಯ ಠಾಕೂರ್ಗೆ ಧನ್ಯವಾದಗಳನ್ನೂ ಹೇಳ್ತಾರೆ..!
ಇದು ವಿಜಯ್ ಠಾಕೂರ್ ರಕ್ಷಿಸಿದ ಒಬ್ಬ ಮಹಿಳೆ ಕಥೆ ಅಷ್ಟೇ..! ಇನ್ನೂ ಅದೆಷ್ಟೋ ಜನರಿಗೆ ಸಹಾಯ ಮಾಡಿದ್ದಾರೋ ಲೆಕ್ಕದಲ್ಲಿಟ್ಟವರ್ಯಾರು..!
ಕಷ್ಟದಲ್ಲಿರೋರಿಗಾಗಿ ಸದಾ ಸೇವೆಗೆ ಸಿದ್ದರಾಗಿರುವ ವಿಜಯ್ ಠಾಕೂರ್ ಅವರೂ ತುಂಬಾ ನೋವನ್ನು ಅನುಭವಿಸಿದ್ದಾರೆ..! ಒಂದರ ಹಿಂದೆ ಒಂದರಂತೆ ಕಷ್ಟಗಳನ್ನು ಎದುರಿಸಿದ್ದಾರೆ..! 1999ರಲ್ಲಿ ಒಬ್ಬನೇ ಮಗ ಕೂಡ 19ನೇ ವಯಸ್ಸಲ್ಲಿ ಶ್ವಾಸಕೋಶದ ಕ್ಯಾನ್ಸರ್ನಿಂದ ಸಾವನ್ನಪ್ಪಿದ್ದು ಇವರಿಗಾದ ದೊಡ್ಡ ಆಘಾತ..! ಅದಾದ ನಾಲ್ಕು ವರ್ಷದ ನಂತರ ಒಂದು ಹೆಣ್ಣು ಮಗುವನ್ನು ದತ್ತು ತೆಗೆದುಕೊಂಡು `ಖುಷಿ’ ಅಂತ ಹೆಸರಿಟ್ಟಿದ್ದಾರೆ. ಆಕೆಗೀಗ 13 ವರ್ಷ. ಇನ್ನಾದರೂ ಪರೋಪಕಾರಿ ವಿಜಯ್ ಠಾಕೂರ್ ಜೀವನ ಖುಷಿ ಖಷಿಯಲಿ ಸಾಗಲಿ..! ಮಗನ ಅಗಲುವಿಕೆಯ ನೋವನ್ನು ಮರೆಯುವ ದೊಡ್ಡ ಶಕ್ತಿಯನ್ನು ಇವರಿಗೆ ದೇವರು ಕರುಣಿಸಲಿ..! ಎಲ್ಲರಿಗೂ ಒಳ್ಳೇದನ್ನೇ ಮಾಡುವ ಹೃದಯವಂತ ವಿಜಯ್ ಠಾಕೂರ್ಗೆ ಖಂಡಿತಾ ಒಳ್ಳೇದಾಗುತ್ತೆ. 74 ವರ್ಷವಾದರೂ ಜನ ಸೇವೆಗಾಗಿ ಬದುಕು ಮೀಸಲಿಟ್ಟಿರುವ ಇವರು ಪ್ರತಿಯೊಬ್ಬರಿಗೂ ಮಾದರಿ. ಇವರ ಬಗ್ಗೆ ಎಲ್ಲರಿಗೂ ಗೊತ್ತಾಗುವಂತಾಗ ಬೇಕಷ್ಟೇ..! ಅದಕ್ಕಾಗಿ ನೀವು ಏನ್ ಮಾಡ್ತೀರಾ..?! ಸಿಕ್ಕ ಸಿಕ್ಕಲ್ಲಿ ಶೇರ್ ಮಾಡ್ಬಹುದಲ್ಲಾ..?! ಏನ್ ಮಾಡ್ತೀರಾ.. ಮಾಡಿ..
- ಶಶಿಧರ ಡಿ ಎಸ್ ದೋಣಿಹಕ್ಲು
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಇವನಿಗೆ ಚಪ್ಪಲಿಯೇ ಆಟ ಆಡಿಸ್ತಾ ಇದೆ..! ಇದು ಎಕ್ಕಡದ ಶಾಪವೋ.. ಪರಮಾತ್ಮನ ಆಟವೋ..!?
ಸಾವು ಗೆದ್ದು ಬಂದ ಕನ್ನಡದ ವೀರಯೋಧ..! 25 ಅಡಿ ಆಳದ ಹಿಮರಾಶಿಯಲ್ಲಿ ಜೀವಂತವಾಗಿ ಪತ್ತೆಯಾದ ಯೋಧ..! Video
ಎರಡೂ ಕೈಲಿ ಬೌಲಿಂಗ್ ಮಾಡುವ ಭಾರತದ ಸ್ಪಿನ್ನರ್..! ಇವರು ಎಡಗೈ ಮತ್ತು ಬಲಗೈಲೂ ಬೌಲ್ ಮಾಡ್ತಾರೆ..!
20 ರೂಪಾಯಿ ಎಲ್ಲಿ..? 160 ರೂಪಾಯಿ ಎಲ್ಲಿ..? ಇದು ಹಗಲು ದರೋಡೆ ಅಲ್ಲದೇ ಇನ್ನೇನು..?