ಲೋಕಸಭಾ ಚುನಾವಣಾ ಹತ್ತಿರ ಆಗುತ್ತಿದ್ದಂತೆ ನಾಯಕರ ಮಾತಿನ ಸಮರ ಕೂಡ ತಾರಕಕ್ಕೇರುತ್ತಿದೆ. ಇದೀಗ ಮಾಜಿ ಸಚಿವ ಎ.ಮಂಜು ವಿರುದ್ಧ ಹಾಸನ ಬಿಜೆಪಿ ಜಿಲ್ಲಾಧ್ಯಕ್ಷ ಯೋಗ ರಮೇಶ್ ಕಿಡಿಕಾರಿದ್ದಾರೆ.
ಮಂಜು ಅವರನ್ನು ಯೋಗಾ ರಮೇಶ್ ಕಾಂಗ್ರೆಸ್ನ ಹಳಸಿದ ಅನ್ನ ಎಂದಿದ್ದಾರೆ. ಎ.ಮಂಜು ಕಾಂಗ್ರೆಸ್ ಬಿಟ್ಟು ಬಿಜೆಪಿ ಸೇರಿ, ಪ್ರಜ್ವಲ್ ರೇವಣ್ಣ ಅವರ ವಿರುದ್ಧ ಕಣಕ್ಕಿಳಿಯುತ್ತಾರೆ ಎಂಬ ಮಾತಿಗೆ ಯೋಗಾ ರಮೇಶ್ ಹೀಗೆ ಹೇಳಿದ್ದು.
ಕಾಂಗ್ರೆಸ್ನಲ್ಲೇ ಎ.ಮಂಜು ಹಳಸಿದ್ದ ಅನ್ನ. ಹಳಸಿದ ಅನ್ನವನ್ನು ಬೇರೆ ಯಾರಾದ್ರೂ ತಗೋತಾರಾ? ಬಿಜೆಪಿಗೆ ಅವರನ್ನೇಕೆ ಸೇರಿಸಿಕೊಳ್ಳುತ್ತೇವೆ ಎಂದಿದ್ದಾರೆ. ಬಿಜೆಪಿಯಲ್ಲಿದ್ದು ಹೋದವರು ಅವರು ಅವರನ್ನು ಪಕ್ಷಕ್ಕೆ ಸೇರಿಸಿಕೊಳ್ಳಲ್ಲ ಎಂದಿದ್ದಾರೆ. ಆದರೆ, ಮಂಜು ಬಿಜೆಪಿ ಸೇರ್ತೀನಿ ಅಂದ್ರೆ ಬಿ.ಎಸ್ ಯಡಿಯೂರಪ್ಪ ಅವರೂ ಸ್ವಾಗತಿಲು ರೆಡಿ ಇದ್ದಾರೆ ಎಂದೂ ತಿಳಿದುಬಂದಿದೆ. ಯಾಕಂದರೆ ಪ್ರಜ್ವಲ್ ವಿರುದ್ಧ ಕಣಕ್ಕಿಳಿಯಲು ಒಬ್ಬ ಒಳ್ಳೆಯ ಕ್ಯಾಂಡಿಡೇಟ್ ಸಿಕ್ಕಂತಾಗುತ್ತೆ ಬಿಜೆಪಿಗೆ.
ಕಾಂಗ್ರೆಸ್ನಲ್ಲಿ ಎ.ಮಂಜು ಹಳಸಿದ ಅನ್ನ..! ಹೀಗಂತ ಹೇಳಿದ್ದು ಯಾರ್ ಗೊತ್ತಾ?
Date: