ಬೆಂಗಳೂರು, ಮಂಡ್ಯ, ಹಾಸನ, ಚಿಕ್ಕಬಳ್ಳಾಪುರದಲ್ಲಿ ಅಭ್ಯರ್ಥಿಗಳ ಆಯ್ಕೆ ಕುರಿತು ನಿನ್ನೆ ರಾತ್ರಿ ಯಡಿಯೂರಪ್ಪ ಅವರ ಮನೆಯಲ್ಲಿ ಎರಡು ಗಂಟೆಗಳ ಕಾಲ ಸಭೆ ನಡೆಸಲಾಯ್ತು.ಯಡಿಯೂರಪ್ಪ ಮನೆಯಲ್ಲಿ ನೀಡಿದ ಸಭೆಯಲ್ಲಿ ಹೆಚ್ಚಾಗಿ ಮಂಡ್ಯ ಲೋಕಸಭಾ ಚುನಾವಣೆಯ ಬಗ್ಗೆ ಪ್ರಸ್ತಾಪವಾಯಿತು .
ಆರ್.ಅಶೋಕ್, ಪ್ರೀತಂ ಗೌಡ, ಚಿ.ನಾ.ರಾಮು ಸೇರಿದಂತೆ ಹಲವು ನಾಯಕರುಗಳ ಜೊತೆ ಯಡಿಯೂರಪ್ಪ ಸಭೆ ನಡೆಸಿದ್ರು. ಬೆಂಗಳೂರು ದಕ್ಷಿಣಕ್ಕೆ ತೇಜಸ್ವಿನಿ ಅನಂತಕುಮಾರ್ ಅವ್ರಿಗೆ ಟಿಕೇಟ್ ನೀಡುವುದರ ಕುರಿತು ಚರ್ಚೆ ಮಾಡಲಾಗಿದೆ.
ಅಲ್ಲದೇ ಹಾಸನ, ಮಂಡ್ಯ, ಚಿಕ್ಕಬಳ್ಳಾಪುರದಲ್ಲಿ ಯಾವ ಅಭ್ಯರ್ಥಿಗಳನ್ನ ಕಣಕ್ಕೆ ಇಳಿಸಬೇಕು ಅನ್ನುವುದರ ಕುರಿತು ಚರ್ಚೆ ನಡೆದಿದೆ. ಸಭೆಯ ಬಳಿಕ ಮಾತನಾಡಿದ ಆರ್.ಅಶೋಕ್ ಜೆಡಿಎಸ್ ವಿರುದ್ಧ ಹರಿಹಾಯ್ದರು, ಜೆಡಿಎಸ್ ನ ಕುಟುಂಬ ರಾಜಕಾರಣದಿಂದ ಮಂಡ್ಯ ಜನತೆ ಬೆಸತ್ತಿದ್ದಾರೆ, ಈ ಬಾರಿ ಈ ಬಾರಿ ಸುಮಲತಾ ಪಕ್ಷೇತರವಾಗಿ ಸ್ಪರ್ಧಿಸಿದಲ್ಲಿ ಬಿಜೆಪಿ ಕಡೆಯಿಂದ ಅವರಿಗೆ ಪರೋಕ್ಷವಾಗಿ ಸಹಕಾರವಿದೆ .
ಕುಟುಂಬ ರಾಜಕಾರಣ ಮಾಡುತ್ತಿರುವ ಜೆಡಿಎಸ್ ಗೆ ಈ ಬಾರಿ ಮಂಡ್ಯದಲ್ಲಿ ತಕ್ಕ ಪಾಠ ಕಲಿಸುತ್ತಾರೆ .ಹಾಗೆ ಮಂಡ್ಯದಲ್ಲಿ ಸುಮಲತಾ ಅವರ ಬೆಂಬಲಕ್ಕೆ ಯಶ್ ಹಾಗೂ ದರ್ಶನ್ .ಇವರಿಬ್ಬರ ಬೆಂಬಲ ಸುಮಲತಾ ಅವರಿಗೆ ಆನೆ ಬಲ ಇದ್ದಂತೆ ಪಕ್ಷೇತರವಾಗಿ ನಿಂತು ಸಮರ್ಪಿಸಿದರೆ ಬಿಜೆಪಿ ಕೂಡ ಅವರಿಗೆ ಸಹಕಾರ ಮಾಡುತ್ತದೆ ಎಂದು ಹೇಳಲಾಗುತ್ತಿದೆ.