ಲೋಕಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ಕಾವೇರುತ್ತಿದೆ. ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡರು ಈ ಬಾರಿ ಸ್ಪರ್ಧಿಸಲ್ಲ ಎಂದು ಹೇಳಲಾಗಿತ್ತು. ಅದಕ್ಕೆ ತಕ್ಕಂತೆ ಹಾಸನವನ್ನು ಮೊಮ್ಮಗ ಪ್ರಜ್ವಲ್ ರೇವಣ್ಣ ಅವರಿಗೆ ಬಿಟ್ಟು ಕೊಟ್ಟಿದ್ದಾರೆ ಗೌಡರು. ಹಾಸನವನ್ನು ಪ್ರಜ್ವಲ್ ಗೆ ಬಿಟ್ಟುಕೊಟ್ಟ ದೊಡ್ಡಗೌಡರು ತುಮಕೂರು, ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸುತ್ತಾರೆ ಎಂದು ಚರ್ಚೆ ಆಗುತ್ತಿದೆ. ಇನ್ನೂ ಒಂದಿಷ್ಟು ಕ್ಷೇತ್ರಗಳಲ್ಲಿ ಗೌಡರ ಹೆಸರು ಕೇಳಿಬರುತ್ತಿದೆ.
ಆದರೆ, ಈಗ ಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸುತ್ತಾರೆ ಎನ್ನುವುದು ಖಚಿತವಾಗಿದೆ. ಗೌಡ್ರು ಬೆಂಗಳೂರು ಉತ್ತರದಿಂದ ಸ್ಪರ್ಧೆ ಮಾಡುವುದು ಬಹುತೇಕ ಕನ್ಫರ್ಮ್ ಆಗಿದೆ.
ದೇವೇಗೌಡರು ಅಕಸ್ಮಾತ್ ಬೆಂಗಳೂರು ಉತ್ತರದಿಂದ ಕಣಕ್ಕಿಳಿಯುವುದು ನಿಶ್ಚಿತವಾದಲ್ಲಿ ಕೇಂದ್ರ ಸಚಿವ ಡಿ.ವಿ ಸದಾನಂದಗೌಡ ಅವರಿಗೆ ಗೆಲವು ಕಷ್ಟವಿದೆ. ದೇವೇಗೌಡರು ಸ್ಪರ್ಧಿಸದರೆ, ಸದಾನಂದ ಗೌಡರು ಬೇರೆ ಕ್ಷೇತ್ರ ನೋಡಿಕೊಂಡರೂ ಅಚ್ಚರಿ ಇಲ್ಲ.
ಮೊಮ್ಮಗನಿಗೆ ಹಾಸನ ಬಿಟ್ಟುಕೊಟ್ಟ ದೇವೇಗೌಡರು ಆಯ್ಕೆ ಮಾಡಿಕೊಂಡ ಕ್ಷೇತ್ರ ಯಾವ್ದು?
Date: