ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಮೈತ್ರಿ (ಜೆಡಿಎಸ್- ಕಾಂಗ್ರೆಸ್) ಅಭ್ಯರ್ಥಿಯಾಗಿ ಕಣಕ್ಕಿಳಿಯಲು ರೆಡಿಯಾಗಿರುವ ಸಿಎಂ ಕುಮಾರಸ್ವಾಮಿ ಅವರ ಮಗ ನಿಖಿಲ್ ಕುಮಾರಸ್ವಾಮಿ ಅವರಿಗೆ ಚಿತ್ರರಂಗದ ಬೆಂಬಲ ಬೇಕಿಲ್ವಂತೆ…!
ಮಂಡ್ಯದಲ್ಲಿ ಮಾತಾಡಿದ ಅವರೇ ಈ ವಿಷಯವನ್ನು ಹೇಳಿದ್ದಾರೆ.
ಪ್ರಚಾರಕ್ಕೆ ಸಿನಿರಂಗದಿಂದ ಯಾರು ಬರ್ತಾರೆ ಅನ್ನೋ ಮಾತಿಗೆ ನಾನು ಯಾರನ್ನು ಆ ಬಗ್ಗೆ ಸಂಪರ್ಕಕ್ಕೆ ಬಂದಿಲ್ಲ. ನನ್ನನ್ನೂ ಯಾರೂ ಸಂಪರ್ಕಿಸಿಲ್ಲ ಎಂದಿದ್ದಾರೆ.
ಮುಂದುವರೆದು ನಂಗೆ ಚಿತ್ರರಂಗದವರು ಬೇಡ. ಪ್ರಚಾರಕ್ಕೆ ಕಾರ್ಯಕರ್ತರಿದ್ದಾರೆ. ಅವರೇ ನಂಗೆ ಯೋಧರು. ನಾನೊಬ್ಬ ನಟನಾಗಿ ರಾಜಕೀಯಕ್ಕೆ ಚಿತ್ರರಂಗದವರನ್ನು ದುರುಪಯೋಗ ಪಡಿಸಿಕೊಳ್ಳೋಕೆ ಇಷ್ಟ ಇಲ್ಲ ಎಂದಿದ್ದಾರೆ.
ರಾಜಕೀಯದಿಂದ ಸಂಬಂಧಗಳು ಹಾಳಾಗಬಾರದು. ನಾನು ಅದಕ್ಕೆ ಅವಕಾಶ ಕೊಡಲ್ಲ. ಅಭಿಷೇಕ್ ನಂಗೆ ಸ್ನೇಹಿತ. ಇಬ್ಬರೂ ಬ್ಯುಸಿ ಇರೋದ್ರಿಂದ ಇತ್ತೀಚೆಗೆ ಮಾತಾಡಕ್ಕೆ ಆಗಿಲ್ಲ. ಚುನಾವಣೆ ಮುಗಿದ ಮೇಲೆ ಮಾತಾಡ್ತೀವಿ ಎಂದು ಲವಲವಿಕೆಯಿಂದಲೇ ಹೇಳಿದರು.
ಅಸಲಿಗೆ ನಿಖಿಲ್ ‘ನನಗೆ ಚಿತ್ರರಂಗದ ಬೆಂಬಲ ಬೇಕಿಲ್ಲ’ ಎಂದಿದ್ದೇಕೆ?
Date: