ಆಸ್ಟ್ರೇಲಿಯಾ ವಿರುದ್ಧ ಟಿ20 ಸರಣಿಯನ್ನು ಸೋತಿದ್ದ ವಿರಾಟ್ ಕೊಹ್ಲಿ ನೇತೃತ್ವದ ಟೀಮ್ ಇಂಡಿಯಾ ಏಕದಿನ ಸರಣಿಯನ್ನೂ ಕೈಚೆಲ್ಲಿದೆ.
ಹೊಸದಿಲ್ಲಿಯ ಫಿರೋಜ್ ಶಾ ಕೋಟ್ಲಾ ಮೈದಾನದಲ್ಲಿ ನಡೆದ 5 ನೇ ಒಡಿಐನಲ್ಲಿ ಟಾಸ್ ಗೆದ್ದು ಮೊದಲು ಬ್ಯಾಟಿಂಗ್ ಮಾಡಿದ ಫಿಂಚ್ ನೇತ್ರತ್ವದ ಆಸೀಸ್ ನಿಗಧಿತ 50 ಓವರ್ ಗಳಲ್ಲಿ 9 ವಿಕೆಟ್ ಕಳೆದುಕೊಂಡು 272 ರನ್ ಗಳ ಸವಾಲಿನ ಗುರಿ ನೀಡಿತು. ಖವಾಜ ಶತಕ (100), ಹ್ಯಾಂಡ್ಸ್ ಕುಂಬ್ ಅರ್ಧ ಶತಕ (52) ಆಸೀಸ್ ಪರ ಉತ್ತಮ ಆಟವಾಡಿದ್ರು.
ಗುರಿ ಬೆನ್ನತ್ತಿದ ಭಾರತ 50 ಓವರ್ ಬ್ಯಾಟಿಂಗ್ ಮಾಡಿತಾದರೂ ಕೇವಲ 237 ರನ್ ಗಳಿಗೆ ಆಲೌಟ್ ಆಯಿತು. ಭಾರತದ ಪರ ರೋಹಿತ್ ಶರ್ಮಾ 56 ರನ್ ಬಾರಿಸಿದ್ದು ಬಿಟ್ಟರೆ ಉಳಿದ ಯಾವ ಬ್ಯಾಟ್ಸ್ ಮನ್ ಗಳೂ ಉತ್ತಮ ಆಟ ಆಡಿಲ್ಲ. ಇದರಿಂದ ಸೋಲಬೇಕಾಯಿತು.
ಮೊದಲ 2 ಪಂದ್ಯಗಳನ್ನು ಗೆದ್ದಿದ್ದ ಭಾರತ ಸತತ 3 ಪಂದ್ಯಗಳನ್ನು ಸೋತು ಸರಣಿ ಕಳೆದುಕೊಂಡಿತು.
ಕೋಟ್ಲಾ ಕ್ಲೈಮ್ಯಾಕ್ಸ್ ನಲ್ಲೂ ಆಸೀಸ್ ಗೆ ಗೆಲುವು.!
Date: