ಮುಖ್ಯಮಂತ್ರಿ ಹೆಚ್. ಡಿ ಕುಮಾರಸ್ವಾಮಿ ಅವರ ಪುತ್ರ, ಮಂಡ್ಯ ಲೋಕಸಭಾ ಕಣದ ಜೆಡಿಎಸ್ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರನ್ನು ಬಿಜೆಪಿಯವರು ಹುಡುಕುತ್ತಿದ್ದಾರೆ.
ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಬಿಜೆಪಿ ಟ್ವೀಟ್ ಮಾಡಿದೆ. ನಿಖಿಲ್ ಅವರ ಅಭಿನಯದ ಜಗ್ವಾರ್ ಸಿನಿಮಾ ಆಡಿಯೋ ಲಾಂಚ್ ಕಾರ್ಯಕ್ರಮದಲ್ಲಿ ಕುಮಾರಸ್ವಾಮಿ ಅವರು ಎಲ್ಲಿದ್ದಿಯಪ್ಪಾ ನಿಖಿಲ್ ಎಂದು ಕರೆದ ಮಾತು ವೈರಲ್ ಆಗಿದೆ. ಅದು ಈಗ ಟ್ರೋಲ್ ಆಗಿದೆ. ಇದೇ ಸಾಲುಗಳನ್ನು ಬಳಸಿ ಬಿಜೆಪಿ ವ್ಯಂಗ್ಯವಾಡಿದೆ. ನಿಖಿಲ್ ಎಲ್ಲಿದ್ದೀಯಪ್ಪಾ ಎಂದು ಟ್ವೀಟ್ ಮಾಡಿದ ಬಿಜೆಪಿ ಕಾಲೆಳೆದಿದೆ.
ಮಂಡ್ಯ ಅಭ್ಯರ್ಥಿಯಾಗಿ ಇಂದು ನಿಖಿಲ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಲಾಗಿದೆ . ಸಚಿವರಾದ ಪುಟ್ಟರಾಜು, ತಮ್ಮಣ್ಣ ಅವರು ನಿಖಿಲ್ ಅವರ ಹೆಸರನ್ನು ಅಧಿಕೃತವಾಗಿ ಘೋಷಿಸಿದರು.
ನಿಖಿಲ್ ಎಲ್ಲಿದ್ದೀಯಪ್ಪ .. ?
After Hassan the “Art Of Crying” show will shift to Mandya today.
— BJP Karnataka (@BJP4Karnataka) March 14, 2019