ಮಂಡ್ಯ ಲೋಕಸಭಾ ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸಿಎಂ ಕುಮಾರಸ್ವಾಮಿ ಅವರು ಕಣಕ್ಕಿಳಿಯೋದು ಗೊತ್ತೇ ಇದೆ. ಇವರ ಪ್ರತಿಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಅಖಾಡದಲ್ಲಿದ್ದಾರೆ. ಹೀಗಾಗಿ ಮಂಡ್ಯ ರಣಕಣ ಸ್ಟಾರ್ ವಾರ್ ಗೆ ಸಾಕ್ಷಿಯಾಗುತ್ತಿದೆ.
ಆದರೆ, ರಾಜಕೀಯ ಸ್ನೇಹಕ್ಕೆ ಅಡ್ಡಿ ಬರಲ್ಲ ಎನ್ನುತ್ತಿದ್ದಾರೆ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಮತ್ತು ಸುಮಲತಾ ಅವರ ಸುಪುತ್ರ ಅಭಿಷೇಕ್ ಅಂಬರೀಶ್.
ನಾನು ರಾಜಕೀಯದಿಂದ ಸ್ನೇಹ ಹಾಳಗಲು ಬಿಡಲ್ಲ. ನಾನು ಅಭಿಷೇಕ್ ಸ್ನೇಹಿತರು. ಈಗ ಸಿಗಲು ಆಗಿಲ್ಲ. ಎಲೆಕ್ಷನ್ ಮುಗಿದ ಮೇಲೆ ಸಿಗ್ತೀವಿ ಎಂದು ನಿಖಿಲ್ ಪದೇ ಪದೇ ಹೇಳಿದ್ದಾರೆ.
ಇಂದು ನಿಖಿಲ್ ಮತ್ತು ತನ್ನ ಸ್ನೇಹದ ಕುರಿತು ಅಭಿಷೇಕ್ ಅಂಬರೀಶ್ ಮಾತಾಡಿದ್ದಾರೆ.
ನಿಖಿಲ್ ನಂಗೆ ಒಳ್ಳೆಯ ಸ್ನೇಹಿತ. ಈಗ ಅವನೂ ಬ್ಯುಸಿ, ನಾನು ಬ್ಯುಸಿ. ನಾವಿಬ್ಬರು ಫ್ರೆಂಡ್ಸ್ ಆಗಿಯೇ ಇರ್ತೀವಿ ಎಂದು ಹೇಳಿದ್ದಾರೆ. ಇಬ್ಬರ ಸ್ನೇಹ ಚೆನ್ನಾಗಿರಲಿ…ರಾಜಕೀಯದ ಕಥೆ ಏನೇ ಇರಲಿ…ಸ್ನೇಹ ಮುಖ್ಯ…
ನಿಖಿಲ್ ಬಗ್ಗೆ ಅಭಿಷೇಕ್ ಅದೆಂಥಾ ಮಾತಂದ್ರು ಗೊತ್ತಾ?
Date: