ಹೆಚ್.ಡಿ. ಕುಮಾರಸ್ವಾಮಿ ಅವರು ಬಳಸುವ ಕಾರು 2 ಬಾರಿ ಸಂಚಾರ ನಿಯಮ ಉಲ್ಲಂಘಿಸಿದ ಹಿನ್ನೆಲೆಯಲ್ಲಿ ಕೇಸ್ ದಾಖಲಿಸಲಾಗಿದೆ. ಸಿಎಂ ಬಳಸುವ ರೇಂಜ್ ರೋವರ್ ಕಾರು ಫೆಬ್ರವರಿ 10 ಮತ್ತು ಫೆಬ್ರವರಿ 22 ರಂದು ಸಂಚಾರ ನಿಯಮ ಉಲ್ಲಂಘಿಸಿದೆ ಎಂದು ಹೇಳಲಾಗಿದೆ.
ಫೆಬ್ರವರಿ 10 ರಂದು ಕಾರ್ ಡ್ರೈವಿಂಗ್ ಮಾಡುವ ಸಂದರ್ಭದಲ್ಲಿ ಮೊಬೈಲ್ ಬಳಕೆ ಮಾಡಲಾಗಿದ್ದು, 100 ರೂ. ದಂಡ ವಿಧಿಸಲಾಗಿದೆ. ಫೆಬ್ರವರಿ 22 ರಂದು ಮಧ್ಯಾಹ್ನ ಬಸವೇಶ್ವರ ಸರ್ಕಲ್ ಬಳಿ ಓವರ್ ಸ್ಪೀಡ್ ಕಾರಣಕ್ಕೆ 300 ರೂ. ದಂಡ ಹಾಕಲಾಗಿದೆ.
ಸಂಚಾರ ನಿಯಮ ಉಲ್ಲಂಘನೆ ಕಾರಣಕ್ಕೆ ಮುಖ್ಯಮಂತ್ರಿ ಅವರ ಕಾರಿಗೂ ಪೊಲೀಸರು ಕೇಸ್ ಹಾಕಿ ದಂಡ ವಿಧಿಸುವುದು ಮೆಚ್ಚುಗೆಗೆ ಪಾತ್ರವಾಗಿದೆ. ಆದರೆ ನೋಟಿಸ್ ನೀಡಿದ್ದರೂ ಸಿಎಂ ದಂಡ ಕಟ್ಟಿಲ್ಲವೆಂದು ಹೇಳಲಾಗಿದೆ.