ಒಂದೆರಡು ದಿನ ಪ್ರಚಾರ ಮಾಡಿ ಹೋಗ್ತಾರಾ ಅಥವಾ ಫುಲ್ ಟೈಂ ಪ್ರಚಾರ ಮಾಡ್ತಾರಾ ಎಂಬ ಪ್ರಶ್ನೆಗೆ ಉತ್ತರಿಸಿದ ದರ್ಶನ್ ಗೆಸ್ಟ್ ರೋಲ್ ಮಾಡೋಕೆ ಬಂದಿಲ್ಲ..! ಫುಲ್ ಟೈಮ್ ಪ್ರಚಾರ ಮಾಡ್ತೀವಿ ಎಂದು ಸಿನಿಮೀಯ ರೀತಿಯಲ್ಲೆ ಉತ್ತಿಸಿದ್ರು.
ಇಂದು ಬೆಂಗಳೂರಿನಲ್ಲಿ ಸುಮಲತಾ ಅಂಬರೀಶ್ ಸುದ್ದಿಗೋಷ್ಠಿ ನಡೆಸಿದರು. ಈ ವೇಳೆ ನಟ ಯಶ್ ಮತ್ತು ದರ್ಶನ್ ಕೂಡ ಸುಮಲತಾ ಜೊತೆಯಲ್ಲಿದ್ದರು. ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಘೋಷಿಸಿದ ಸುಮಲತಾ ಅವರಿಗೆ, ಸಂಪೂರ್ಣ ಬೆಂಬಲ ನೀಡುವುದಾಗಿ ದರ್ಶನ್ ಹೇಳಿದರು. ಇನ್ನು ಅದೇ ಕ್ಷೇತ್ರದಲ್ಲಿ ನಿಖಿಲ್ ಕುಮಾರ್ ಕೂಡ ಸ್ಪರ್ಧೆ ಮಾಡುತ್ತಿದ್ದಾರೆ ಎಂದು ಕೇಳಿದ್ದಕ್ಕೆ ದರ್ಶನ್ ತಮ್ಮದೇ ಸ್ಟೈಲ್ ನಲ್ಲಿ ಪ್ರತಿಕ್ರಿಯೆ ನೀಡಿ ಗೊಂದಲಕ್ಕೆ ಬ್ರೇಕ್ ಹಾಕಿದರು.
ಅಷ್ಟಕ್ಕೂ, ಸುದ್ದಿಗೋಷ್ಠಿಯಲ್ಲಿ ದಾಸ ಏನಂದ್ರು? ಹೇಗಿರುತ್ತೆ ಸುಮಲತಾ ಅವರ ಪರ ಡಿ ಬಾಸ್ ಪ್ರಚಾರ? ‘ನಾನು ಸ್ಟಾರ್ ಆಗಿ ಇಲ್ಲಿಗೆ ಬಂದಿಲ್ಲ. ಸ್ಟಾರ್ ಆಗಿದ್ರೆ ಮೇಕಪ್ ಹಾಕ್ಕೊಂಡು, ಸನ್ ಗ್ಲಾಸ್ ಹಾಕ್ಕೊಂಡು ಕೂಲ್ ಆಗಿರಬಹುದು. ನಾನಿಲ್ಲಿ ಮನೆ ಮಗನಾಗಿ ಬಂದಿದ್ದೇನೆ” ಎಂದು ಹೇಳುವ ಮೂಲಕ ನಟ ದರ್ಶನ್ ಅವರು ಸುಮಲತಾ ಅವರ ಸ್ಪರ್ಧೆಯನ್ನ ಸಮರ್ಥಿಸಿಕೊಂಡರು. ಈಗ ಅಪ್ಪಾಜಿ ಇಲ್ಲ. ಅಮ್ಮನ ಹಿಂದೆ ನಾನು ಅಪ್ಪಾಜಿ ಅವರನ್ನ ನೋಡುತ್ತಿದ್ದೇನೆ” ಎಂದು ದರ್ಶನ್ ಹೇಳಿದ್ರು. ಈಗ ಸಿಂಪತಿ ಇದೆ ಅಂತ ಹೋಗ್ತಿಲ್ಲ. ಅಂಬರೀಶ್ ಅವರು ಮಂಡ್ಯ ಜನಕ್ಕೆ ಮಾಡಿರುವ ಕೆಲಸಗಳು, ಅವರು ನೀಡಿರುವ ಕೊಡುಗೆಗಳನ್ನ ಮುಂದಿಟ್ಟುಕೊಂಡು ನಾವು ಹೋಗ್ತೀವಿ.
ಎಲ್ಲರಿಗೂ ಒಳ್ಳೆಯದಾಗಲಿ ಎಂದು ಪ್ರೀತಿಯಿಂದ ಮಾಡ್ತೀವಿ, ಯಾವುದೇ ವಿವಾದ ಅಥವಾ ಇನ್ನೊಂದು ಆಗಲಿ ಎಂದು ಯೋಚನೆ ಮಾಡಲ್ಲ” ”ಅಭಿಮಾನಿಗಳಿಗೆ ಹೀಗೆ ಮಾಡಿ ಎಂದು ಅಧಿಕಾರ ತೋರಿಸುವ ಯೋಗ್ಯತೆ ನಮಗೆ ಇಲ್ಲ. ನಾವು ಹೀಗೆ ಮಾಡಿದ್ರೆ ಒಳ್ಳೆಯದಾಗುತ್ತೆ ಎಂದು ಕೇಳಿಕೊಳ್ಳಬಹುದು ಅಷ್ಟೇ. ಅದಕ್ಕೂ ಮೀರಿ ಅವರ ಇಷ್ಟ ಅದು. ಅಂಬರೀಶ್ ಅವರ ಕೆಲಸಗಳು ಮುಂದುವರಿಯಿಲಿ ಎಂಬ ಆಸೆ ಅಷ್ಟೇ” ಅಂಬರೀಶ್ ಅವರು ಇದ್ದಾಗ, ಅವರು ಹೇಳಿದ ವ್ಯಕ್ತಿಗಳಿಗೆ ನಾನು ಪ್ರಚಾರ ಮಾಡಿ ಬಂದಿದ್ದೀನಿ.
ಆ ವ್ಯಕ್ತಿ ಯಾರು, ಅವನ ಕೆಲಸ ಏನು ಎಂದು ನಾನು ನೋಡಿಲ್ಲ. ಯಾಕಂದ್ರೆ, ಅಪ್ಪಾಜಿ ಅವರ ಮೇಲೆ ಇದ್ದ ಅಭಿಮಾನ” ಎಂದು ದಾಸ ಹೇಳಿದ್ರು.