ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಅವರಿಗೆ ಬಿಗ್ ಶಾಕ್ ಎದುರಾಗಿದೆ. ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧೆಗಿಳಿದಿರುವ ಸುಮಲತಾ ಅಂಬರೀಶ್ ಅವರ ಪರ ಪ್ರಚಾರದ ಸಾರಥಿಗಳಾಗಿರುವುದರಿಂದ ಇವರಿಬ್ಬರ ವಿರುದ್ಧ ದೂರು ದಾಖಲಾಗುತ್ತಿದೆ.
ನಮ್ಮ ಕರ್ನಾಟಕ ರಕ್ಷಣಾ ವೇದಿಕೆ ಸಂಸ್ಥಾಪಕ ಜಯರಾಜ್ ಅವರು ಚುನಾವಣಾ ಅಧಿಕಾರಿಗಳಿಗೆ ದರ್ಶನ್ ಮತ್ತು ಯಶ್ ವಿರುದ್ಧ ದೂರು ನೀಡುತ್ತಿರುವವರು.
ಸುಮಲತಾ ಅವರ ಜೊತೆ ಪ್ರೆಸ್ಮೀಟ್ನಲ್ಲಿ ಕಾಣಿಸಿಕೊಂಡಿದ್ದ ದರ್ಶನ್ ಮತ್ತು ಯಶ್ ನಾವು ಸುಮಲತಾ ಅವರನ್ನು ಬೆಂಬಲಿಸಿ ಗೆಲ್ಲಿಸುತ್ತೇವೆ ಎಂದಿದ್ದಾರೆ. ಅವರ ಅಭಿಮಾನಿಗಳಿಗೂ ಈ ಬಗ್ಗೆ ಕರೆಕೊಟ್ಟಿದ್ದಾರೆ. ಆದ್ದರಿಂದ ಚುನಾವಣಾ ನೀತಿಸಂಹಿತೆ ಅಡಿಯಲ್ಲಿ ಈ ಅಂಶ ಬರುತ್ತದೆ. ಇವರಿಬ್ಬರ ಸಿನಿಮಾಗಳನ್ನು, ಜಾಹಿರಾತುಗಳನ್ನು ಚುನಾವಣೆ ಮುಗಿಯುವ ತನಕ ನಿಷೇಧ ಮಾಡಬೇಕು ಎಂದು ದೂರು ನೀಡಿದ್ದಾರೆ.
ದರ್ಶನ್, ಯಶ್ಗೆ ಬಿಗ್ ಶಾಕ್..!
Date: