ಗುಂಡು ಹಾರಿಸಿ ಮಾಜಿ ಶಾಸಕನ ಪುತ್ರನ ಕೊಲೆ ಮಾಡೊದ ಘಟನೆ ಬೆಳಗಾವಿ ತಾಲೂಕಿನ ಧಾಮಣೆ ಬಳಿ ನಡೆದಿದೆ. ನಗರದ ವಡಗಾವಿಯ ನಿವಾಸಿ ಅರುಣ ನಂದಿಹಳ್ಳಿ ಕೊಲೆಯಾದ ದುರ್ದೈವಿಯಾಗಿದ್ದಾರೆ.
ಅರುಣ ನಂದಿಹಳ್ಳಿ ಮಾಜಿ ಶಾಸಕ ಪರಶುರಾಮ ಬಾವು ಪುತ್ರ ಎಂದು ಹೇಳಲಾಗುತ್ತಿದ್ದು. ಶಿಕ್ಷಕರಾಗಿದ್ದ ಅರುಣ ತಡರಾತ್ರಿ ಕಾರಿನಲ್ಲಿ ತಮ್ಮ ಮನೆಗೆ ತೆರಳುತ್ತಿದ್ದಾಗ ಅರುಣ ಕಾರ ಅಡ್ಡಗಟ್ಟಿ ಎದೆಗೆ ಗುಂಡು ಹಂತಕ ಹಾಕಿದ್ದಾನೆ.
ಈ ಹತ್ಯೆಗೆ ಹಣಕಾಸಿನ ವ್ಯವಹಾರದ ಎಂದು ಪೊಲೀಸ್ ಪ್ರಾಥಮಿಕ ತನಿಖೆಯಲ್ಲಿ ದೃಢಪಟ್ಟಿದೆ. ಅರುಣ ನೌಕರಿ ಕೊಡಿಸುವುದಾಗಿ ಹಣ ಪಡದಿದ್ದನು. ಆ ಹಣ ಮರಳಿ ಕೊಡುವ ವಿಚಾರದಲ್ಲಿ ಗಲಾಟೆ ಇತ್ತು. ಈ ಕಾರಣದಿಂದ ನಿನ್ನೆ ತಡರಾತ್ರಿ ಅರುಣ ಎದೆಗೆ ಗುಂಡು ಹಾರಿಸಿ ಹಂತಕರು ಪರಾರಿಯಾಗಿದ್ದಾರೆ.