ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಪರ ಪ್ರಚಾರಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸಾಥ್ ನೀಡಿರುವ ಬಗ್ಗೆ ಎಲ್ಲರೂ ಬಲ್ಲರು. ಇದು ಜಗಜ್ಜಾಹಿರ.
ದರ್ಶನ್ ಮತ್ತು ಯಶ್ ಅವರು ಸುಮಲತಾ ಪರ ನಿಂತಿರುವುದಕ್ಕೆ ಕೆಲವರು ಇಷ್ಟು ದಿನ ಇಬ್ಬರು ಹಾವು-ಮುಂಗುಸಿಗಳಂತೆ ಇದ್ದರು.ಈಗ ಒಂದಾಗಿದ್ದಾರೆ ಎಂದು ಹೇಳುತ್ತಿದ್ದಾರೆ, ಕಾಲೆಳೆಯುತ್ತಿದ್ದಾರೆ.ಅನಗತ್ಯವಾಗಿ ಮಾತಾಡುತ್ತಿದ್ದಾರೆ. ಇದು ಯಶ್ ಅವರ ಕಿವಿಗೂ ಬಿದ್ದಿದೆ.
ಇಂದು ಮಂಡ್ಯದಲ್ಲಿ ಸುಮಲತಾ ಅವರ ಸಮಾವೇಶದಲ್ಲಿ ಮಾತಾಡುವಾಗ ಈ ವಿಷಯವನ್ನು ಪ್ರಸ್ತಾಪಿಸಿದರು.
ನಾನು ಎಲ್ಲಿಯೋ ಕೇಳಿದೆ ಹಾವು -ಮುಂಗುಸಿ ತರ ಇದ್ದವರು ಈಗ ಒಂದಾಗಿ ದ್ದಾರೆ ಅಂತ ಮಾತಾಡಿದ್ದಾರೆ. ಒಂದು ಮಾತು ಹೇಳ್ತೀನಿ, ನಾವು ಹಗಲು ರಾತ್ರಿ ಬದಲಾಗುವ ಜನರಲ್ಲ.. ಸಿನಿಮಾದವರನ್ನು ಹಗುರವಾಗಿ ಪರಿಗಣಿಸಬೇಡಿ. ನಮ್ ನಮ್ ಹೊಟ್ಟೆಪಾಡು ನಾವು ನೋಡ್ತಾ ಇದ್ದೀವಿ. ಸುಮ್ಮನೆ ಏನೂ ಹೇಳಬೇಡಿ. ನಾಡಿನ ಜನ ಯೋಗ್ಯತೆ ಇಲ್ಲದವರನ್ನು ತಲೆ ಮೇಲೆ ಕೂರಿಸಿಕೊಂಡು ಮೆರೆಯಲ್ಲ. ನಮಗೆ ಅಲ್ಪ ಸ್ವಲ್ಪ ಯೋಗ್ಯತೆ ಇರುವುದರಿಂದಲೇ ಜನ ಪ್ರೀತಿಕೊಟ್ಟಿರುವುದು.ಜನ ದಡ್ಡರಲ್ಲ. ಇಲ್ಲಿಗೆ ಬಂದವರು ಹಣ ನೋಡಿ ಬಂದಿಲ್ಲ. ಪ್ರೀತಿಯಿಂದ ಬಂದಿದ್ದಾರೆ ಎಂದು ಟಾಂಗ್ ಕೊಟ್ಟರು.
ಇಷ್ಟು ದಿನ ಹಾವು-ಮುಂಗಿಸಿ ಆಗಿದ್ದ ದರ್ಶನ್-ಯಶ್ ಇವತ್ತು ಒಂದಾಗಿದ್ದಾರೆ ಎಂದವರಿಗೆ ರಾಕಿಭಾಯ್ ಕೊಟ್ಟ ತಿರುಗೇಟು ಗೊತ್ತಾದ್ರೆ ವ್ಹಾವ್ ಅಂತೀರಾ…!
Date: