ಟೀಮ್ ಇಂಡಿಯಾದ ಮಾಜಿ ಕ್ಯಾಪ್ಟನ್ ರಾಹುಲ್ ದ್ರಾವಿಡ್ ಅವರು ಟೀಮ್ ಇಂಡಿಯಾಕ್ಕೆ ಎಚ್ಚರಿಕೆ ಪಾಠ ಮಾಡಿದ್ದಾರೆ.
ಭ್ರಮೆ ಬಿಟ್ಟು ಉತ್ತಮ ರೀತಿಯಲ್ಲಿ ಆಟ ಆಡಿ ಎಂದು ಕಿವಿ ಹಿಂಡಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಟಿ20, ಏಕದಿನ ಸರಣಿಯನ್ನು ಸೋತಿದ್ದು ಪಾಠ. ಆರಾಮಾಗಿ ವರ್ಲ್ಡ್ ಕಪ್ ಗೆಲ್ತೀವಿ ಎನ್ನುವ ಭ್ರಮೆ ಬಿಡಬೇಕು. ಅತ್ಯುತ್ತಮ ಪ್ರದರ್ಶನ ನೀಡಬೇಕು. ವರ್ಲ್ಡ್ ಕಪ್ ನಲ್ಲಿ ತೀವ್ರ ಪೈಪೋಟಿ ಇರುತ್ತದೆ. ಉತ್ತಮ ಆಟ ಆಡಿದರೆ ಮಾತ್ರ ಗೆಲುವು. ಸುಲಭದಲ್ಲಿ ಕಪ್ ಎತ್ತಿ ಹಿಡಿಯುತ್ತೇವೆ ಎಂಬ ನಿರೀಕ್ಷೆ ಬೇಡ ಎಂದಿದ್ದಾರೆ.
ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ಇತ್ತೀಚೆಗೆ ತವರಿನಲ್ಲಿ ನಡೆದ ಟಿ20 ಮತ್ತು ಏಕದಿನ ಸರಣಿಯಲ್ಲಿ ಸೋಲುಕಂಡಿತ್ತು.
ಎರಡೂ ಟಿ20 ಮ್ಯಾಚ್ ಗಳನ್ನು ಸೋತು, ಏಕದಿನ ಸರಣಿಯಲ್ಲಿ ಮೊದಲ ಎರಡು ಪಂದ್ಯಗಳನ್ನು ಗೆದ್ದು ಸರಣಿ ಗೆಲುವಿನ ನಿರೀಕ್ಷೆ ಹುಟ್ಟು ಹಾಕಿತ್ತು. ಆದರೆ , ಉಳಿದ ಮೂರು ಪಂದ್ಯಗಳಲ್ಲಿ ಸೋತಿದೆ.
ಮೇ 30ರಿಂದ ಜುಲೈ 14ರವರೆಗೆ ವರ್ಲ್ಡ್ ಕಪ್ ನಡೆಯಲಿದೆ. ಇಂಗ್ಲೆಂಡ್ ಮತ್ತು ವೇಲ್ಸ್ ನಲ್ಲಿ ವಿಶ್ವಕಪ್ ಟೂರ್ನಿ ನಡೆಯುತ್ತದೆ.
ಭ್ರಮೆ ಬಿಟ್ಟು ಆಟ ಆಡಿ ಎಂದು ಕೊಹ್ಲಿ ಪಡೆಗೆ ದ್ರಾವಿಡ್ ಪಾಠ..!
Date: