ನಿಖಿಲ್ ಕುಮಾರಸ್ವಾಮಿ…ಮಂಡ್ಯ ಲೋಕಸಭಾ ಕ್ಷೇತ್ರದ ಮೈತ್ರಿ ಅಭ್ಯರ್ಥಿ. 17ನೇ ಲೋಕಸಭಾ ಚುನಾವಣೆ ಮೂಲಕ ರಾಜಕೀಯ ರಂಗದಲ್ಲಿ ತಮ್ಮ ಛಾಪು ಮೂಡಿಸಲು ಮೊದಲ ಹೆಜ್ಜೆಯನ್ನು ಇಟ್ಟಿದ್ದಾರೆ.
ಮುಖ್ಯಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಅವರ ಮಗ ನಿಖಿಲ್. ಇವರು ಸಿನಿಮಾ ನಟ ಕೂಡ. ಸ್ಯಾಂಡಲ್ ವುಡ್ ನ ಯುವರಾಜ. ಜಾಗ್ವಾರ್, ಸೀತಾರಾಮ ಕಲ್ಯಾಣ ಚಿತ್ರಗಳಲ್ಲಿ ನಟಿಸಿದ್ದಾರೆ..ಇವರೆಡೂ ಚಿತ್ರಗಳು ಯಶಸ್ವಿ ಪ್ರದರ್ಶನ ಕಂಡಿವೆ. ಕುರುಕ್ಷೇತ್ರ ಸಿನಿಮಾದಲ್ಲಿ ಅಭಿಮನ್ಯುವಾಗಿ ನಟಿಸಿದ್ದು,ಚಿತ್ರ ರಿಲೀಸ್ ಆಗಬೇಕಿದೆ.
ಇವೆಲ್ಲಾ ಇರಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಿಖಿಲ್ ಅವರಿಗೆ ಕೇಳಿದ್ದೆಲ್ಲಾ ಕೂಡಿಸಿದ್ದಾರೆ. ಆದರೆ, ಒಂದನ್ನು ಮಾತ್ರ ಕೊಡಿಸಿಲ್ಲ.
ಹಾಗಾದ್ರೆ ಕುಮಾರಸ್ವಾಮಿ ನಿಖಿಲ್ ಗೆ ಏನ್ ಕೊಡಿಸಿಲ್ಲ ಗೊತ್ತಾ? ಒಂದೇ ಒಂದು ಬೈಕ್ ಅನ್ನು.
ಅಪ್ಪ ನಂಗೆ ಬೈಕ್ ಮಾತ್ರ ಕೊಡಿಸಿಲ್ಲ. ನಾನು ಕೇಳಿದ್ದೆಲ್ಲಾ ಕೊಡಿಸಿದ್ದಾರೆ ಎಂದು ಸ್ವತಃ ನಿಖಿಲ್ ಹೇಳಿದ್ದಾರೆ. ಖಾಸಗಿವಾಹಿನಿಯೊಂದರಲ್ಲಿ ವಿಶೇಷ ಕಾರ್ಯಕ್ರಮದಲ್ಲಿ ನಿಖಿಲ್ ಈ ಹಿಂದೆ ಈ ವಿಷಯವನ್ನು ಹೇಳಿದ್ದರು. ಬೈಕ್ ಮಾತ್ರ ಕೊಡಿಸಿಲ್ಲ….ಅವರಿಗೆ ನಂಗೆ ಬೈಕ್ ಕೊಡಿಸೋಕೆ ಭಯ ಎಂದಿದ್ದರು.
ನಿಖಿಲ್ ಇಷ್ಟಪಟ್ಟ ಇದೊಂದನ್ನು ಮಾತ್ರ ಕುಮಾರಸ್ವಾಮಿ ಕೊಡಿಸಲೇ ಇಲ್ವಂತೆ..!
Date: