ಲೋಕಸಭೆ ಚುನಾವಣಾ ದಿನಾಂಕ ಪ್ರಕಟವಾದ ಬೆನ್ನಲ್ಲೆ ಎಲ್ಲಡೆ ಚುನಾವಣೇ ಕಾವು ಹೆಚ್ಚಾಗಿದ್ದು ಪ್ರಚಾರ ಕೂಡಾ ಬಿರಿಸಿನಿಂದ ಸಾಗಿದೆ, ಈ ಭಾರಿಯ ಲೋಕಸಭಾ ಚುನಾವಣೆಯಲ್ಲಿ ಬೆಂಗಳೂರು ಸೆಂಟ್ರಲ್ ಕ್ಷೇತ್ರದಿಂದ ಸ್ಪರ್ಧಿಸುತ್ತಿರುವ ಸ್ಟಾರ್ ನಟ ಪ್ರಕಾಶ್ ರಾಜ್ ಅವರ ವಿರುದ್ಧ ಬೆಂಗಳೂರಿನ ನಾಗರೀಕರೊಬ್ಬರು ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸುವುದರ ಮೂಲಕ ಪ್ರಕಾಶ್ ರಾಜ್ ಅವರಿಗೆ ಅಘಾತವನ್ನ ನೀಡಿದ್ದಾರೆ.
ದೂರು ದಾಖಲಿಸಿದ್ದು ಯಾಕೆ..?
ಬೆಂಗಳೂರು ಸೆಂಟ್ರಲ್ ಲೋಕಸಭಾ ಕ್ಷೇತ್ರದಿಂದ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಪ್ರಕಾಶ್ ರಾಜ್ ಅವರು ಮಾರ್ಚ್ 12 ರಂದು ಎಂಜಿ ರಸ್ತೆಯಲ್ಲಿ ಬ್ಯಾನರ್ ಮೀಡಿಯಾ ಮತ್ತು ಅಭಿವ್ಯಕ್ತ ಸ್ವಾತಂತ್ರ್ಯದ ಅಡಿಯಲ್ಲಿ ಪ್ರವೀಣ್ ಕೆ ಮತ್ತು ಅಭಿಲಾಶ್ ಸಿಎಸ್ ಎಂಬುವವರು ಆಯೋಜಿಸಿದ್ದ ಸಾರ್ವಜನಿಕ ಕಾರ್ಯಕ್ರಮವೊಂದರಲ್ಲಿ ಅನುಮತಿ ಇಲ್ಲದೆ ಮೈಕ್ ಉಪಯೋಗಿಸಿ ತಮ್ಮ ಪರವಾಗಿ ಮತ ಹಾಕುವಂತೆ ಪ್ರಚಾರ ಮಾಡುತ್ತಿದ್ದರು,
ಅಲ್ಲದೆ ಈ ಕಾರ್ಯಕ್ರಮದಲ್ಲಿ ಪ್ರಕಾಶ್ ರಾಜ್ ಅವರು ನೀತಿ ಸಂಹಿತೆ ಜಾರಿಯಲ್ಲಿದ್ದರೂ ಸಹ ತಮ್ಮ ಪರ ಚುನಾವಣಾ ಪ್ರಚಾರ ಮಾಡಿಕೊಂಡಿದ್ದಾರೆ ಎಂದು ಆರೋಪಿಸುವುದರ ಮೂಲಕ ಮೂರ್ತಿ ಎಂಬುವರು ಕಬ್ಬನ್ ಪಾರ್ಕ್ ಪೋಲೀಸ್ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ, ಕಬ್ಬನ್ ಪಾರ್ಕ್ ಪೊಲೀಸರು ಕರ್ನಾಟಕ ಪೊಲೀಸ್ ಕಾಯ್ದೆ ಅಡಿಯಲ್ಲಿ ಪ್ರಕಾಶ್ ರಾಜ್ ಅವರ ವುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.