ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಭಂಧಿಸಿದಂತೆ ಅಲ್ಲಿಯೇ ಇದ್ದು ತಾವೇ ಸ್ವತಃ ಉಸ್ತುವಾರಿಯನ್ನು ವಹಿಸಿಕೊಳ್ಳುವುದರ ಮೂಲಕ ಸಂಕಷ್ಟದಲ್ಲಿದ್ದ ಜನರಿಗೆ ನೆರವಾಗಿದ್ದ ಸಚಿವ ಶಿವಳ್ಳಿಯವರು ಇಂದು ಮಧ್ಯಾನ ಸುಮಾರು ೨ ಗಂಟೆಯ ಸುಮಾರಿಗೆ ಮೃತಪಟ್ಟಿದ್ದಾರೆ.
ಪೌರಾಡಳಿತ ಸಚಿವ ಸಿಎಸ್ ಶಿವಳ್ಳಿ ಅವರು ತೀವ್ರ ಹೃದಯಾಘಾತದಿಂದ ಬಳಲಿದ್ದರ ಪರಿಣಾಮವಾಗಿ ಹುಬ್ಬಳ್ಳಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆಯನ್ನ ಕೊಡಿಸಲಾಗುತ್ತಿತ್ತು, ಆದರೆ ತೀವ್ರ ಹೃದಯಾಘಾತದಿಂದ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ ಎಂದು ತಿಳಿದುಬಂದಿದೆ.
ಧಾರವಾಡ ಕಟ್ಟಡ ಕುಸಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವರು ಕಾರ್ಯಾಚರಣೆ ನಡೆದ ಸ್ಥಳದಲ್ಲೇ ಕಳೆದ ಎರಡು ದಿನಗಳಿಂದ ಹಾಜರಿದ್ದು ಎಲ್ಲಾ ಕಾರ್ಯದ ಉಸ್ತುವಾರಿಯನ್ನು ಶಿವಳ್ಳಿಯವರೇ ನೋಡಿಕೊಳ್ಳುತ್ತಿದ್ದರು ಗುರುವಾರ ಸಿಎಂ ಕುಮಾರಸ್ವಾಮಿ ಅವರು ಆಗಮಿಸಿದ್ದ ವೇಳೆಯೂ ಸಿಎಂ ಅವರೊಂದಿಗೆ ಇದ್ದು ಈ ಎಲ್ಲ ವಿವರಗಳನ್ನೂ ಸಹ ಕುಮಾರಸ್ವಾಮಿಯವರಿಗೆ ನೀಡಿದ್ದರು ಎಂದು ತಿಳಿದು ಬಂದಿದೆ, ಕಳೆದ 2 ದಿನಗಳಿಂದ ಕಟ್ಟಡ ಕುಸಿತ ಸ್ಥಳದಲ್ಲೇ ಹೆಚ್ಚಿನ ಸಮಯ ಇದ್ದ ಅವರು ಬಳಲಿದ್ದ ಪರಿಣಾಮ ಕಿಮ್ಸ್ ಆಸ್ಪತ್ರೆಯ ವೈದ್ಯರು ಬಳಿ ಚಿಕಿತ್ಸೆ ಪಡೆದಿದ್ದರು.
ಆ ಬಳಿಕ ಸಚಿವರು ಮತ್ತೆ ಕಾರ್ಯಾಚರಣೆ ಬಗ್ಗೆ ಮಾಹಿತಿ ಪಡೆಯಲು ಆಗಮಿಸಿದ್ದರು. ಆದರೆ ಇಂದು ಮಧ್ಯಾಹ್ನ 12 ಗಂಟೆ ಸುಮಾರಿಗೆ ಅವರಿಗೆ ಹೃದಯಾಘಾತ ಸಂಭವಿಸಿದ್ದರ ಪರಿಣಾಮ ಸಾವನ್ನಪ್ಪಿದ್ದಾರೆ.