ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರ ಮನೆ ಮೇಲೆ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಘಟನೆಯಲ್ಲಿ ದರ್ಶನ್ ಅವರ ಕಾರಿನ ಗಾಜು ಪುಡಿಯಾಗಿದೆ. ಅಸಲಿಗೆ ದರ್ಶನ್ ಮನೆ ಮೇಲೆ ಕಲ್ಲು ತೂರಾಟ ನಡೆಸಿರುವುದರ ಹಿಂದೆ ಕೆಟ್ಟ ಕೊಳಕು ರಾಜಕೀಯ ದ್ವೇಷ ಇದೆ ಎಂಬ ಮಾತು ಕೇಳಿಬಂದಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಸುಮಲತಾ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ಇದಕ್ಕೆ ಕೆಲವರಿಂದ ವಿರೋಧ ವ್ಯಕ್ತವಾಗಿದೆ, ಇದೇ ವಿರೋಧದ ಅತಿರೇಕವಾಗಿ ದರ್ಶನ್ ಮನೆ ಮೇಲೆ ಕಲ್ಲುತೂರಾಟ ಮಾಡಲಾಗಿದೆ. ಸುಮಲತಾ ಅವರು ಈ ಬಗ್ಗೆ ಮಂಡ್ಯದಲ್ಲಿ ತಿರುಗೇಟು ನೀಡಿದ್ದಾರೆ. ದರ್ಶನ್ ಹಾಗೂ ಯಶ್ ನನ್ನ ಪರ ಪ್ರಚಾರಕ್ಕೆ ಬಂದಿದ್ದರಿಂದ ಉದ್ದೇಶ ಪೂರ್ವಕವಾಗಿಯೇ ದಾಳಿ ಮಾಡಿದ್ದಾರೆ. ಯಾರು ಏನೇ ಮಾಡಿದ್ರು ಫಲಿತಾಂಶದಲ್ಲಿ ಉತ್ತರ ಸಿಗುತ್ತೆ ಎಂದಿದ್ದಾರೆ ಸುಮಲತಾ.
ಯಶ್ ಕೂಡ ದರ್ಶನ್ ಅವರ ಜೊತೆಗೆ ಸುಮಲತಾ ಪರ ಪ್ರಚಾರಕ್ಕೆ ಸಾಥ್ ನೀಡಿರುವುದರಿಂದ ಮುಂಜಾಗೃತೆಯಿಂದ ಯಶ್ ಮನೆಗೆ ಪೊಲೀಸ್ ಭದ್ರತೆ ಒದಗಿಸಲಾಗಿದೆ.
ದರ್ಶನ್ ಮನೆ ಮೇಲೆ ಕಲ್ಲು ತೂರಾಟದ ಹಿಂದಿನ ಕರಾಳ ಸತ್ಯ ಮತ್ತು ಸುಮಲತಾ ಕೊಟ್ಟ ತಿರುಗೇಟು
Date: