ಲೋಕಸಭಾ ಚುನಾವಣೆಗೆ ಬಿಜೆಪಿಯಿಂದ ಕಣದಲ್ಲಿರುವ ಮಾಜಿ ಸಚಿವ ಎ.ಮಂಜು ತನ್ನ ಹಳೇ ಪಕ್ಷದ ಗುಂಗಿನಿಂದ ಹೊರ ಬಂದಿಲ್ಲ. ಬಿಜೆಪಿ ಸಭೆಯಲ್ಲಿ ತಾನು ಕಾಂಗ್ರೆಸ್ ನನ್ನು ಗೆಲ್ಲಿಸುತ್ತೇನೆ ಎಂದು ಪ್ರತಿಜ್ಞೆ ಮಾಡಿದ್ದಾರೆ.
ಬೇಲೂರಲ್ಲಿ ಬಿಜೆಪಿ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಎ. ಮಂಜು…2022 ರಲ್ಲಿ ನಾನು ಹಾಸನ ಎಲ್ಲಾ 8 ವಿಧಾನಸಭಾ ಕ್ಷೇತ್ರಗಳಲ್ಲೂ ಕಾಂಗ್ರೆಸ್ ಅನ್ನು ಗೆಲ್ಲಿಸುತ್ತೇನೆ ಎಂದು ಶಪಥ ಮಾಡಿದ್ದಾರೆ. ಹಾಸನದಲ್ಲಿ ಕಾಂಗ್ರೆಸ್ ಗೆಲ್ಲಿಸುವುದು ನನ್ನ ಜವಬ್ದಾರಿ ಅಂತ ಹೇಳಿಕೊಂಡಿದ್ದಾರೆ. ಬಿಜೆಪಿಯನ್ನು ಗೆಲ್ಲಿಸುವುದಾಗಿ ಹೇಳುವ ಬದಲು ಗಡಿಬಿಡಿಯಲ್ಲಿ ಮಂಜು ಈ ಯಡವಟ್ಟಿನ ಹೇಳಿಕೆ ನೀಡಿದ್ದಾರೆ.
ಎ. ಮಂಜು ಇತ್ತೀಚೆಗೆ ಬಿಜೆಪಿ ಸೇರಿದ್ದಾರೆ. ಹಾಸನದಲ್ಲಿ ಬಿಜೆಪಿ ಕ್ಯಾಂಡಿಡೇಟ್ ಆಗಿ ಜೆಡಿಎಸ್ ನ ಪ್ರಜ್ವಲ್ ರೇವಣ್ಣ ಎದುರು ತೊಡೆ ತಟ್ಟಿದ್ದಾರೆ..!
ಅರೆರೇ…..ಕಾಂಗ್ರೆಸ್ ಗೆಲ್ಲಿಸ್ತೀನಿ ಎಂದು ಬಿಜೆಪಿ ಸಭೆಯಲ್ಲೇ ಶಪಥ ಮಾಡಿದ ಕಮಲ ಕಲಿ…!
Date: