ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಹಾಗು ಮಧು ಬಂಗಾರಪ್ಪ ಅವರ ಪರವಾಗಿ ಪ್ರಚಾರಕ್ಕೆ ಹೋಗುತ್ತಿಲ್ಲ ಎಂದು ನಟ ಶಿವರಾಜ್ ಕುಮಾರ್ ಹೇಳಿದ್ದಾರೆ.
ಅವರು ನನ್ನ ಬೆಂಬಲ ಕೋರಿಲ್ಲ, ಅವರು ಕರೆದರೂ ಪ್ರಚಾರಕ್ಕೆ ಹೋಗುವುದಿಲ್ಲ. ಬಡವ ನೀನು ಮಡಗಿದಂತೆ ಇರು ಎಂದು ದೇವರು ಹೇಳಿದ್ದು, ನಾನು ಹಾಗೆಯೇ ಇರುತ್ತೇನೆ. ರಾಜಕೀಯಕ್ಕೆ ತುಂಬಾ ಬುದ್ಧಿ ಬೇಕು. ನಾನು ಅಷ್ಟೊಂದು ಬುದ್ಧಿವಂತನಲ್ಲ. ಈಗ ಸ್ವಲ್ಪ ಬುದ್ಧಿ ಬಂದಿದ್ದು ಅದನ್ನು ಕಾಪಾಡಿಕೊಳ್ಳುವೆ ಎಂದು ಹೇಳಿದ್ದಾರೆ.
ಶಿವಮೊಗ್ಗದಲ್ಲಿಯೂ ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಮಧು ಬಂಗಾರಪ್ಪ ಅವರ ಪರವಾಗಿ ಗೀತಾ ಪ್ರಚಾರ ನಡೆಸಬಹುದು. ನಾನು ಪ್ರಚಾರಕ್ಕೆ ಹೋಗುವುದಿಲ್ಲ. ಅವರು ಕೂಡ ಅದನ್ನು ಬಯಸುವುದಿಲ್ಲ ಎಂದು ತಿಳಿಸಿದ್ದಾರೆ.
ಕಾವೇರಿ ವಿಚಾರದಲ್ಲಿ ಜನಪ್ರತಿನಿಧಿಗಳು ಸಮಸ್ಯೆ ಬಗೆಹರಿಸಬೇಕು.ನಾವು ಹೋರಾಟಕ್ಕೆ ಕೈಜೋಡಿಸುತ್ತೇವೆ. ಆದರೆ, ಬಂದರೆ ಜನ ಫೋಟೋ, ಸೆಲ್ಫಿ ತೆಗೆಸಿಕೊಳ್ಳಲು ಮುಗಿಬೀಳುತ್ತಾರೆ. ಎಷ್ಟು ಬೈದರೂ, ಕೋಪ ಮಾಡಿಕೊಂಡರೂ ಅವರು ಕೇಳಲ್ಲ. ಪರವಾಗಿಲ್ಲ ನಮಗೆ ಫೋಟೋ ಬೇಕೇ ಬೇಕು ಎಂದು ಹಠ ಮಾಡುತ್ತಾರೆ ಎಂದು ಶಿವಣ್ಣ ಹೇಳಿದ್ದಾರೆ.