ಮಂಡ್ಯದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ದೋಸ್ತಿ ಅಭ್ಯರ್ಥಿಯಾಗಿ ಕಣದಲ್ಲಿದ್ದಾರೆ. ಅವರ ಪ್ರಬಲ ಸ್ಪರ್ಧಿಯಾಗಿ ಸುಮಲತಾ ಅಂಬರೀಶ್ ಪಕ್ಷೇತರ ಅಭ್ಯರ್ಥಿಯಾಗಿ ಅಖಾಡಕ್ಕೆ ಇಳಿದಿದ್ದಾರೆ.
ಸುಮಲತಾ ಅಂದರೆ ಜೆಡಿಎಸ್ ಗೆ ಢವಢವ ಆಗುತ್ತಿರ ಬೇಕು. ಅದೇ ಕಾರಣಕ್ಕೆ ಸುಮಲತಾ ಎನ್ನುವ ಮೂವರನ್ನು ಸ್ಪರ್ಧೆಗೆ ಅಣಿಗೊಳಿಸಿದ್ದಾರೆ.…ಜೆಡಿಎಸ್ ಅವರೇ ಕಣಕ್ಕೆ ಇಳಿಸಿರುವುದು ಎನ್ನುವುದಕ್ಕೆ ಸಾಕ್ಷಿ ಜೆಡಿಎಸ್ ಮುಖಂಡರ ಜೊತೆ ಹೋಗಿ ಸುಮಲತಾ ಎನ್ನುವ ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಸುಮಲತಾ ದರ್ಶನ್, ಸುಮಲತಾ ಮಜೇಗೌಡ, ಸುಮಲತಾ ಸಿದ್ದೇಗೌಡ ಎನ್ನುವ ಮೂವರು ನಾಮಪತ್ರ ಸಲ್ಲಿಸಿದ್ದಾರೆ.
ಅಯೋಗ್ಯ ಸಿನಿಮಾದಲ್ಲಿ ನಾಯಕ ನೀನಾಸಂ ಸತೀಶ್ ತನ್ನ ಎದುರಾಳಿ ಬೋರೇಗೌಡ ( ರವಿಶಂಕರ್) ಅವರನ್ನು ಸೋಲಿಲು ಅದೇ ಹೆಸರಿನ ಅನೇಕರನ್ನು ಕಣಕ್ಕೆ ಇಳಿಸಿದ್ದರು. ಅದು ಗ್ರಾಮಪಂಚಾಯತಿ ಚುನಾವಣೆ, ಇದು ಲೋಕಸಭಾ ಚುನಾವಣೆ, ಅದು ರೀಲ್, ಇದು ರಿಯಲ್…!
‘ಅಯೋಗ್ಯ’ ಮಾದರಿ ಅನುಸರಿಸಿತಾ ಜೆಡಿಎಸ್..? ಸುಮಲತಾ ಎಂಬ ಹೆಸರಿನ ಮೂವರು ಅಖಾಡಕ್ಕೆ..!
Date: