ನಟ ರಿಯಲ್ ಸ್ಟಾರ್ ಉಪೇಂದ್ರ ಅವರ ಪಕ್ಷ ಉತ್ತಮ ಪ್ರಜಾಕೀಯ ಪಾರ್ಟಿಯ ಅಭ್ಯರ್ಥಿಗಳು ನಾಮಪತ್ರ ಸಲ್ಲಿಕೆ ಮಾಡಿ ಅಧಿಕೃತವಾಗಿ ಚುನಾವಣಾ ಅಖಾಡಕ್ಕೆ ಇಳಿದೇ ಬಿಟ್ಟಿದ್ದಾರೆ.
ಸ್ಟಾರ್ ವಾರ್, ರಾಜಕೀಯ ಕೆಸರೆರೆಚಾಟದ ನಡುವೆ ಉಪ್ಪಿಯ ಪ್ರಜಾಕೀಯ ಯಶಸ್ವಿ ಆಗುತ್ತಾ…? ಅಟ್ಲೀಸ್ಟ್ ದೊಡ್ಡ ಮಟ್ಟಿನ ಯಶಸ್ಸು ಆರಂಭಕ್ಕೆ ಕಷ್ಟ ಎಂದು ಅನಿಸಿದರೂ ತಕ್ಕಮಟ್ಟಿನ ಪೈಪೋಟಿ ನೀಡಿ ಗೆಲ್ಲುತ್ತಾ ಎಂಬುದನ್ನು ಕಾದು ನೋಡಬೇಕು.
ಯುಪಿಪಿಗೆ ಉಪೇಂದ್ರ ಅವರೇ ಸ್ಟಾರ್ ಕ್ಯಾಂಪೇನರ್. 14 ಕ್ಷೇತ್ರಗಳ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಮುಂದಿನ ಹಂತದಲ್ಲಿ ಉಳಿದ 14 ಕ್ಷೇತ್ರದ ಅಭ್ಯರ್ಥಿಗಳೂ ಕೂಡ ನಾಮಪತ್ರ ಸಲ್ಲಿಸುವ ಮೂಲಕ ರಾಜ್ಯದ ಎಲ್ಲಾ 28 ಕ್ಷೇತ್ರಗಳಲ್ಲಿಯೂ ತಮ್ಮ ಪಕ್ಷದ ಅಭ್ಯರ್ಥಿಗಳು ಸ್ಪರ್ಧೆ ಮಾಡುವರು ಎಂದು ಉಪೇಂದ್ರ ಮತ್ತೊಮ್ಮೆ ಸ್ಪಷ್ಟಪಡಿಸಿದ್ದಾರೆ.
ಉಪೇಂದ್ರ ಚುನಾವಣೆಯಲ್ಲಿ ಸ್ಪರ್ಧಿಸುತ್ತಿಲ್ಲ. ಅವರು ಬಹುಶಃ ಪಕ್ಷವನ್ನು ಬಲಪಡಿಸಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಅಖಾಡಕ್ಕೆ ಇಳಿಯುವ ಯೋಜನೆಯನ್ನು ಹೊಂದಿದ್ದಾರೆ.
ರಾಜಕೀಯ ಪಕ್ಷಗಳ ಅಬ್ಬರದ ನಡುವೆ ಪ್ರಜಾಕೀಯ ಕ್ಲಿಕ್ ಆದರೆ , ಅದೇ ಕಲ್ಪನೆಯಲ್ಲಿ ಸಾಗಿದರೆ ಪ್ರಜಾಪ್ರಭುತ್ವಕ್ಕೆ ನಿಜವಾದ ಅರ್ಥ ಬರಲಿದೆ.
ಉಪ್ಪಿ ‘ಯುಪಿಪಿ’ ಅಭ್ಯರ್ಥಿಗಳು ಅಖಾಡಕ್ಕೆ ಇಳಿದಾಯ್ತು…! ರಾಜಕೀಯದ ಎದುರು ಯಶಸ್ವಿಯಾಗುತ್ತಾ ಪ್ರಜಾಕೀಯ..!
Date: