ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ನಿಖಿಲ್ ಕುಮಾರ ಸ್ವಾಮಿ ಮತ್ತು ಸುಮಲತಾ ಅಂಬರೀಶ್ ಅವರ ನಡುವೆ ಸ್ಲರ್ಧೆ ಏರ್ಪಟ್ಟಿದೆ.
ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಾಕಿಂಗ್ ಸ್ಟಾರ್ ಯಶ್ ಸುಮಲತಾ ಅವರ ಪರವಾಗಿ ಪ್ರಚಾರ ಮಾಡುತ್ತಿದ್ದಾರೆ. ನಿಖಿಲ್ ಪರ ಸ್ವತಃ ಅವರ ತಂದೆ , ರಾಜ್ಯದ ಮುಖ್ಯಮಂತ್ರಿಗಳಾದ ಹೆಚ್. ಡಿ ಕುಮಾರಸ್ವಾಮಿ ಅವರೇ ಪ್ರಚಾರ ಮಾಡುತ್ತಿದ್ದಾರೆ.
ಈ ನಡುವೆ ರಾಜಕೀಯ ಕೆಸರೆರೆಚಾಟ ಮಿತಿ ಮೀರುತ್ತಿದೆ. ದರ್ಶನ್ ಅವರ ವಿರುದ್ಧವಂತೂ ಸಿಎಂ ಸಾಹೆಬ್ರು ಫುಲ್ ಗರಂ ಆಗಿದ್ದಾರೆ.
ಡಿ.ಬಾಸ್ ಎನ್ನುವುದು ಜನ ಕೊಟ್ಟ ಬಿರುದು ಎಂದು ಹೇಳಿದ ದರ್ಶನ್ ಗೆ ತಿರುಗೇಟು ನೀಡಿರುವ ಸಿಎಂ, ಡಿ.ಬಾಸ್ ಎಂದು ಬಿರುದು ಕೊಟ್ಟಿರುವುದು ನಾಲ್ಕು ಜನ ರಾಜ್ಯದ 6 ಕೋಟಿ ಜನ ಅಲ್ಲ.
ನನ್ನ ಮಗನಿಗೆ ಯುವರಾಜ ಎಂಬ ಬಿರುದು ಇದೆ. ಹಾಗಾದರೆ ನನ್ನ ಮಗ ಯುವರಾಜನ ಎಂದು ಟಾಂಗ್ ನೀಡಿದರು.