ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮಂಡ್ಯ ಲೋಕಸಭಾ ಕ್ಷೇತ್ರದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿರುವುದು ಜೆಡಿಎಸ್ ಮತ್ತು ಸಿಎಂ ಕುಮಾರಸ್ವಾಮಿ ಅವರ ಕೆಂಗಣ್ಣಿಗೆ ಗುರಿಯಾಗಿದೆ. ಹೀಗಾಗಿ ದರ್ಶನ್ ಅವರ ಮೇಲೆ ಸಾಕಷ್ಟು ಆಪಾದನೆಗಳು ಬರುತ್ತಿವೆ. ಬಹಳಷ್ಟು ಮಾತುಗಳನ್ನು ಡಿ.ಬಾಸ್ ಕೇಳಬೇಕಾಗಿದೆ. ಇದು ದರ್ಶನ್ ಅವರ ಅಭಿಮಾನಿಗಳನ್ನು ಕೆರಳಿಸಿದೆ.
ಆದ್ದರಿಂದ ದರ್ಶನ್ ತನ್ನ ಅಭಿಮಾನಿಗಳಿಗೆ ಶಾಂತಿಯಿಂದ ಇರುವಂತೆ ಕರೆ ನೀಡಿದ್ದಾರೆ. ಆಪಾದನೆಗಳ ವಿರುದ್ಧ ಯಾವ್ದೇ ಪೋಸ್ಟ್ ಮಾಡಬೇಡಿ. ಕಿವಿಗೊಡಬೇಡಿ. ಶಾಂತಿಯಿಂದ ಇರಿ. ಇವೆಲ್ಲಾ ಚುನಾವಣಾ ಸಮಯದಲ್ಲಿ ಸಾಮಾನ್ಯ. ನೀವು ಆರಾಮಾಗಿರಿ ಎಂದು ದರ್ಶನ್ ಟ್ವೀಟ್ ಮಾಡಿದ್ದಾರೆ.
ದರ್ಶನ್ ವಿರುದ್ಧ ಸಿಎಂ ಪದೇ ಪದೇ ವಾಗ್ದಾಳಿ ನಡೆಸುತ್ತಲೇ ಇದ್ದಾರೆ. ದರ್ಶನ್ ಡಿ.ಬಾಸ್ ಆದ್ರೆ ನನ್ನ ಮಗ ಯುವರಾಜ. ಡಿ.ಬಾಸ್ ಎಂದು ಬಿರುದು ಕೊಟ್ಟಿರುವುದು ನಾಲ್ಕು ಜನ..ಇಡೀ ರಾಜ್ಯದ 6ಕೋಟಿ ಜನ ಅಲ್ಲ. ನನ್ನ ಮಗನನ್ನು ಯುವರಾಜ ಎಂಬ ಬಿರುದಿನಿಂದ ಕರೆಯುತ್ತಿದ್ದಾರೆ.ಹಾಗೆಂದರೆ ನನ್ನ ಮಗ ಯುವರಾಜನ ಎಂದಿದ್ದಾರೆ.