ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಸಚಿವ ಹೆಚ್.ಡಿ ರೇವಣ್ಣ ಕೆಂಡಾಮಂಡಲ ಆಗಿದ್ದಾರೆ.
ಮೋದಿ ಮೇಲಿನ ಕೋಪವನ್ನು ಏಕವಚನದಲ್ಲಿ ಹೊರ ಹಾಕಿದ್ದಾರೆ.
ಅವನ್ಯಾವಾನ್ರೀ ಮೋದಿ ನಾವು ಇದಕ್ಕೆಲ್ಲಾ ಹೆದರಲ್ಲ ಎಂದಿದ್ದಾರೆ.
ಜೆಡಿಎಸ್ ನಾಯಕರ ಮನೆ ಮೇಲಿನ ಐಟಿ ದಾಳಿ ಬಗ್ಗೆ ಪ್ರತಿಕ್ರಿಯೆ ನೀಡಿದ ರೇವಣ್ಣ ಪ್ರಧಾನಿ ಮೋದಿ ಮತ್ತು ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಿದರು.
ಐಟಿ ಅಧಿಕಾರಿಗಳು ಬಿಜೆಪಿ ಏಜೆಂಟ್ ಗಳು ಎಂದು ಆರೋಪ ಮಾಡಿದರು.
ಲೋಕಸಭಾ ಎಲೆಕ್ಷನ್ ವೇಳೆ ಐಟಿ ಇಲಾಖೆಯನ್ನು ಬಿಜೆಪಿ ದುರ್ಬಳಕೆ ಮಾಡಿಕೊಳ್ಳುತ್ತಿದೆ ಎಂದು ಮೈತ್ರಿ ನಾಯಕರು ಆರೋಪ ಮಾಡುತ್ತಿದ್ದಾರೆ.
ನಿನ್ನೆ ಸಿಎಂ ಕುಮಾರಸ್ವಾಮಿ ಅವರು ಐಟಿ ದಾಳಿ ನಡೆಯುತ್ತದೆ ಎಂದು ಭವಿಷ್ಯ ನುಡಿದಿದ್ದರು. ಆ ಭವಿಷ್ಯ ಸತ್ಯವಾಗಿದೆ. ಪಶ್ಚಿಮ ಬಂಗಾಳದ ಸಿಎಂ ರೀತಿ ಪ್ರತಿಭಟನೆ ನಡೆಸುವುದಾಗಿ ಸಿಎಂ ಹೇಳಿದ್ದರು. ಅದೇರೀತಿ ಪ್ರತಿಭಟನೆಗೂ ಮುಂದಾಗಿದ್ದಾರೆ.