ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಸಿನಿಮಾದ ಆ ಒಂದು ಕಹಿ ಘಟನೆ ನಿಮಗೆ ನೆನಪಿದೆ. ಆ ಘಟನೆಯನ್ನು ಯಾರೂ ಮರೆಯಲು ಸಾಧ್ಯವೂ ಇಲ್ಲ. ಆ ಸಿನಿಮಾದ ಚಿತ್ರೀಕರಣದ ವೇಳೆ ಅನಿಲ್, ಉದಯ್ ಎಂಬ ನಟರಿಬ್ಬರು ಸಾವನ್ನಪ್ಪಿದ್ದರು.
ಇಂದು ಚಿರಂಜೀವಿ ಸರ್ಜಾ ಮತ್ತು ಚೇತನ್ ಅಭಿನಯದ ರಣಂ ಸಿನಿಮಾದ ಶೂಟಿಂಗ್ ಸ್ಥಳದಲ್ಲಿ ತಾಯಿ ಮತ್ತು ಮಗು ಸಾವನ್ನಪ್ಪಿದ್ದಾರೆ.
ಬೆಂಗಳೂರಿನ ಶೆಲ್ ಕಂಪನಿ ಬಳಿ ಚಿತ್ರೀಕರಣದ ವೇಳೆ ಸಿಲಿಂಡರ್ ಸ್ಫೋಟಗೊಂಡು ಅಲ್ಲಿ ಚಿತ್ರೀಕರಣ ನೋಡುತ್ತಿದ್ದ, ಸಮೇರಾ (28) ಮಗು ಅಹೇರಾ (8) ಮೃತಪಟ್ಟಿದ್ದಾರೆ.
ಸುಮೇರಾ ಮತ್ತು ಅಹೇರಾ ಚಿತ್ರೀಕರಣ ವೀಕ್ಷಿಸುತ್ತಿದ್ದರು ಎಂದು ತಿಳಿದುಬಂದಿದೆ.
ಘಟನೆಯಲ್ಲಿ ಚಿತ್ರತಂಡದ ಐವರಿಗೆ ಗಾಯಗಳಾಗಿವೆ. ಅವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ. ಸ್ಥಳದಲ್ಲಿದ್ದ ವಾಹನಗಳು ಜಖಂಗೊಂಡಿವೆ. ಬಾಗಲೂರು ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.
ರಣಂ ಸಿನಿಮಾದ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಯುತ್ತಿತ್ತು. ಬಾಗಲೂರಿನ ಕೈಗಾರಿಕಾ ಪ್ರದೇಶದ ಶೆಲ್ ಪೆಟ್ರೋಲ್ ಬಂಕ್ ಬಳಿ ಕಾರು ಚೇಸಿಂಗ್ ಮಾಡುತ್ತಾ ಸಿಲೆಂಡರ್ ಸ್ಪೋಟಿಸುವ ದೃಶ್ಯ ಚಿತ್ರೀಕರಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.