ಮಂಡ್ಯ ಲೋಕಸಭೆ ಕ್ಷೇತ್ರದಲ್ಲಿ ಪಕ್ಷೇತರ ಅಭ್ಯರ್ಥಿಗಳಾಗಿ ಸ್ಪರ್ಧಿಸಿರುವ ಸುಮಲತಾ ಹೆಸರಿನ ನಾಲ್ವರಿಗೆ ಚುನಾವಣಾ ಆಯೋಗದಿಂದ ಚಿಹ್ನೆಗಳನ್ನು ಹಂಚಿಕೆ ಮಾಡಲಾಗಿದೆ.
ಸುಮಲತಾ ಅಂಬರೀಶ್ ಅವರಿಗೆ ‘ಕಹಳೆ’ ಊದುತ್ತಿರುವ ರೈತನ ಚಿಹ್ನೆಯನ್ನು ಚುನಾವಣಾ ಆಯೋಗ ನೀಡಿದೆ. ಕಹಳೆ ಊದುವ ರೈತ, ತೆಂಗಿನ ತೋಟ, ಕಬ್ಬಿನ ಗದ್ದೆಯ ಮುಂದೆ ನಿಂತಿರುವ ರೈತನ ಚಿಹ್ನೆಗಳನ್ನು ಸುಮಲತಾ ಕೇಳಿಕೊಂಡಿದ್ದರು. ಆ ಚಿಹ್ನೆಗಳ ಮಾದರಿ ಚಿಹ್ನೆಗಳನ್ನು ಸುಮಲತಾ ಹೆಸರಿನವರು ಕೂಡ ಕೇಳಿಕೊಂಡಿದ್ದರೆನ್ನಲಾಗಿದೆ.
ಸುಮಲತಾ ಕೇಳಿಕೊಂಡಿದ್ದ ಚಿಹ್ನೆ ಬೇರೆಯವರ ಪಾಲಾಗಿದ್ದವು. ಬಳಿಕ ಚುನಾವಣಾ ಆಯೋಗದೊಂದಿಗೆ ಚಿಹ್ನೆ ಬದಲಾವಣೆ ಕುರಿತಾಗಿ ಸುಮಲತಾ ಸಮಾಲೋಚನೆ ನಡೆಸಿದ್ದು, ಮಂಡ್ಯ ಜಿಲ್ಲಾ ಚುನಾವಣಾ ಅಧಿಕಾರಿ ಮಂಜುಶ್ರೀ ಅವರ ನೇತೃತ್ವದಲ್ಲಿ ಸಭೆ ನಡೆಸಿ ಸುಮಲತಾ ಅವರಿಗೆ ‘ಕಹಳೆ’ ನೀಡಲಾಗಿದೆ.