ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ನೇತೃತ್ವದ ಕೇಂದ್ರಸರ್ಕಾರ ಹಳೇ 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯ ಮಾಡಿ ಎರಡು ವರ್ಷಗಳಾಗಿವೆ.
ಕೇಂದ್ರಸರ್ಕಾರ ಈ ಮಹತ್ವದ ನಿರ್ಧಾರವನ್ನು ತೆಗೆದುಕೊಂಡಾಗ ನೋಟು ಎಕ್ಸ್ ಚೇಂಜ್ ದಂಧೆ ಜೋರಾಗಿ ನಡೆದಿತ್ತು.
ಆದರೆ, ಈಗಲೂ ಆ ದಂಧೆ ಮುಂದುವರೆದಿರುವುದು ಆಶ್ಚರ್ಯ.
ಹಳೆಯ ನೋಟನ್ನ ಪರಿವರ್ತನೆ ಮಾಡಲು ಯತ್ನಿಸುತ್ತಿದ್ದ ಐವರನ್ನು ಬೆಂಗಳೂರಿನ ಸದಾಶಿವನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಬಂಧಿತರು 1 ಕೋಟಿಯಷ್ಟು ₹500, ₹1000 ರೂಪಾಯಿ ನೋಟುಗಳನ್ನ ವೈಟ್ ಮಾಡಲು ಯತ್ನಿಸುತ್ತಿದ್ದರು. ಮತ್ತೆ ಹಳೆ ನೋಟುಗಳು ಚಲಾವಣೆಗೆ ಬರುತ್ತವೆ ಎಂದು ನಂಬಿಸಿದ್ದರು ಎಂದು ತಿಳಿದುಬಂದಿದೆ.
1ಕೋಟಿ ಹಳೆ ನೋಟಿಗೆ ₹25 ಲಕ್ಷದಷ್ಟು ಹೆಚ್ಚು ಹಣ ಬರುತ್ತೆ ಎಂದು ವಂಚನೆ ಮಾಡುತ್ತಿದ್ದರು ಎನ್ನಲಾಗಿದೆ.