ಕೊಪ್ಪಳ : ‘ಚುನಾವಣೆ ಮುಗಿದ ಬಳಿಕ ಸಿಎಂ ಕುಮಾರಸ್ವಾಮಿ ನೆಗೆದು ಬೀಳ್ತಾರೆ’ ಎಂದು ಹೇಳುವ ಮೂಲಕ ಬಿಜೆಪಿ ಮುಖಂಡ ಕೆಎಸ್ ಈಶ್ವರಪ್ಪ ವಿವಾದವನ್ನು ಸೃಷ್ಠಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಒಂದೂ ಕ್ಷೇತ್ರದಲ್ಲೂ ಗೆಲ್ಲುವುದಿಲ್ಲ, ಎಚ್‌ಡಿ ದೇವೇಗೌಡ ಅವರ ಕುಟುಂಬದ ನಾಲ್ಕೂ ಜನರೂ ಕೂಡ ಹೋದಲ್ಲಿ ಬಂದಲ್ಲಿ ಬರೀ ಕಣ್ಣೀರು ಹಾಕುತ್ತಾರೆ.
ಈ ನಾಟಕ ಬಹಳ ದಿನ ನಡೆಯುವುದಿಲ್ಲ ಎಂದು ಹೇಳುವುದರ ಮೂಲಕ. ಸರ್ಕಾರ ಪತನಗೊಳ್ಳುತ್ತದೆ ಎನ್ನುವ ಬದಲು ಕುಮಾರಸ್ವಾಮಿಯವರೇ ಸಾಯುತ್ತಾರೆ ಎಂದು ಹೇಳಿ ವಿವಾದವನ್ನು ಮೈಮೇಲೆ ಎಳೆದುಕೊಂಡಿದ್ದಾರೆ.