ಪ್ರೀತಿಸಿ ಮದುವೆಯಾಗಲು ಹೊರಟಿದ್ದ ಪ್ರೇಮಿಗಳಿಗೆ ಅಡ್ಡಿಯಾದ ಹುಡುಗಿಯ ಚಿಕ್ಕಪ್ಪನನ್ನು ಸುಪಾರಿ ಕೊಟ್ಟು ಕೊಲೆ ಮಾಡಿಸಿ ಶವವನ್ನು ಕಲ್ಲಿನ ಕ್ವಾರಿಯ ಹೊಂಡದಲ್ಲಿ ಬೀಸಾಡಿದ ಘಟನೆ ನಿಪ್ಪಾಣಿಯಲ್ಲಿ ನಡೆದಿದೆ.
ನಿಪ್ಪಾಣಿಯ ಜೋಡಿಯೊಂದು ಪ್ರೀತಿಸಿ ಮದುವೆ ಮಾಡಿಕೊಳ್ಳಲು ಮುಂದಾಗಿದ್ದರು. ಆದರೆ ಹುಡುಗಿಯ ಚಿಕ್ಕಪ್ಪ ಮದುವೆಗೆ ಒಪ್ಪಲಿಲ್ಲ ಮದುವೆಗೆ ಅಡ್ಡಿ ಬಂದ ಚಿಕ್ಕಪ್ಪನ ಕೊಲೆಗೆ ಸುಪಾರಿ ಕೊಟ್ಟು ಖತಂ ಮಾಡಿದ ಭೂಪರೀಗ ಪೊಲೀಸರ ಅತಿಥಿಯಾಗಿದ್ದಾರೆ.
ತಲೆಯ ಮೇಲೆ ಕಲ್ಲು ಹಾಕಿ ವ್ಯಕ್ತಿಯ ಬರ್ಬರ ಹತ್ಯೆ ಮಾಡಿ ಕಲ್ಲು ಕ್ವಾರಿಯಲ್ಲಿ ಶವ ಬಿಸಾಕಿದ್ದ ದುರುಳರು ಇದೀಗ ಸರಳುಗಳ ಹಿಂದಿದ್ದಾರೆ. ಅರವಿಂದ ಫೋಳ್ (40) ಕೊಲೆಯಾದ ದುರ್ದೈವಿಯಾಗಿದ್ದಾನೆ.
ನಿಪ್ಪಾಣಿ ನಗರದಲ್ಲಿ ನಿನ್ನೆ ಸಂಜೆ ಕೊಲೆ ಮಾಡಿ ಶವವನ್ನು ಕ್ವಾರಿಯಲ್ಲಿ ಬಿಸಾಕಿದ್ದು. ವಿಎಸ್‍ಎಮ್ ಕಾಲೇಜು ಬಳಿ ಇರುವ ಕ್ವಾರಿಯಲ್ಲಿ ಶವಕ್ಕಾಗಿ ಕಾರ್ಯಾಚರಣೆ ಮುಂದುವರೆದಿದೆ.
ಸತೀಶ್, ರವಿ, ಶೀತಲ್, ಮತ್ತು ಶುಭಂ ಬಂಧಿತ ಆರೋಪಿಗಳಾಗಿದ್ದಾರೆ. ಓರ್ವ ಮಹಿಳೆ ಸೇರಿ ನಾಲ್ವರನ್ನು ವಶಕ್ಕೆ ಪಡೆದ ಪೊಲೀಸರು ಕಲ್ಲುಕ್ವಾರಿಯಲ್ಲಿ ಬಿಸಾಕಿದ್ದ ಶವಕ್ಕಾಗಿ ಅಗ್ನಿ ಶಾಮಕ ಸಿಬ್ಬಂಧಿ ಶೋಧ ಕಾರ್ಯ ನಡೆಸಿದ್ದಾರೆ.
ಎಸ್ ಪಿ ಸುಧೀರ್ ಕುಮಾರ ರೆಡ್ಡಿ, ಹೆಚ್ಚುವರಿ ಎಸ್ ಪಿ ಡಾ ರಾಮಲಕ್ಷ್ಮಣ ಅರಸಿದ್ದಿ, ಚಿಕ್ಕೋಡಿಯ ಎಎಸ್ ಪಿ ಮಿಥುನಕುಮಾರ, ನಿಪ್ಪಾಣಿ ಸಿಪಿಐ ಕರುಣೇಶಗೌಡ, ಪಿಎಸ್‍ಐ ಎಚ್.ಡಿ. ಮುಲ್ಲಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಸವೇಶ್ವರ ಚೌಕ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.