ಭಾರತೀಯ ಜನತಾ ಪಾರ್ಟಿ ತನ್ನ ಅಭ್ಯರ್ಥಿಗಳು 16ನೇ ಪಟ್ಟಿಯನ್ನು ರಿಲೀಸ್ ಮಾಡಿದೆ. ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಕಣಕ್ಕಿಳಿಯುವ ಕಮಲ ಕಲಿ ಕೂಡ ಫಿಕ್ಸ್ ಆಗಿದ್ದಾರೆ.
ರಾಯ್ ಬರೇಲಿನಲ್ಲಿ ಸೋನಿಯಾ ಗಾಂಧಿ ವಿರುದ್ಧ ಬಿಜೆಪಿಯು ದಿನೇಶ್ ಪ್ರತಾಪ್ ಸಿಂಗ್ ರನ್ನು ಅಭ್ಯರ್ಥಿಯಾಗಿ ಘೋಷಿಸಿದೆ. ಮೈನ್ ಪುರಿಯಲ್ಲಿ ಸಮಾಜವಾದಿ ಪಕ್ಷದ ದಿಗ್ಗಜ ನಾಯಕ ಮುಲಾಯಂ ಸಿಂಗ್ ಯಾದವ್ ವಿರುದ್ಧ ಪ್ರೇಮ್ ಸಿಂಗ್ ಶಕ್ಯಾ ಅವರನ್ನು ಅಖಾಡಕ್ಕೆ ಇಳಿಸಿದೆ, ಮುಲಾಯಂ ಯಾದವ್ ಪುತ್ರ ಹಾಗೂ ಉತ್ತರ ಪ್ರದೇಶದ ಮುಖ್ಯಮಂತ್ರಿ ಅಖಿಲೇಶ್ ಯಾದವ್ ವಿರುದ್ಧ ಅಜಂಗಡ ಕ್ಷೇತ್ರದಿಂದ ಭೋಜ್ಪುರಿ ಸೂಪರ್ ಸ್ಟಾರ್ ದಿನೇಶ್ ಲಾಲ್ ಯಾದವ್ ‘ನಿರ್ಹುವಾ’ರಿಗೆ ಟಿಕೆಟ್ ಘೋಷಿಸಿದೆ.
ಮುಂಬೈನಲ್ಲಿ ಬಿಜೆಪಿಯ ಹಾಲಿ ಸಂಸದ ಕಿರಿತ್ ಸೋಮಯ್ಯರ ಟಿಕೆಟ್ ತಪ್ಪಿದೆ. ಕಿರತ್ ಸೋಮಯ್ಯರ ಬದಲು ಮನೋಜ್ ಕೋಟಕ್ ರಿಗೆ ಟಿಕೆಟ್ ನೀಡಿದೆ.
ಸೋನಿಯಾ ಗಾಂಧಿ ಅವರ ವಿರುದ್ಧ ಕಣಕ್ಕಿಳಿದ ಬಿಜೆಪಿ ಕಲಿ ಯಾರ್ ಗೊತ್ತಾ?
Date: