ಹಾಸನ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಡಾ. ಎ.ಎನ್ ಪ್ರಕಾಶ್ ಗೌಡ ಅವರನ್ನು ಸರ್ಕಾರ ಚುನಾವಣೆ ಆಯೋಗದ ನಿರ್ದೇಶನದಂತೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಅವರಿಗೆ ಸ್ಥಳ ನಿಯೋಜನೆ ಗೊಳಿಸದೆ ವರ್ಗಾವಣೆ ಮಾಡಿರುವ ಚುನಾವಣಾ ಆಯೋಗ. ನೂತನ ವರಿಷ್ಠಾಧಿಕಾರಿಯಾಗಿ ಚೇತನ್ ಸಿಂಗ್ ರಾತೋಡ್ ಅವರನ್ನು ನೇಮಕಮಾಡಿದೆ.
ಕಳೆದ 6 ತಿಂಗಳಿನಿಂದ ಹಾಸನದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಎಸ್ಪಿ ಪ್ರಕಾಶ್ ಗೌಡ.ಬಿಜೆಪಿ ಯ ವಿಧಾನ ಪರಿಷತ್ ಮಾಜಿ ಸದಸ್ಯ ಗೊ.ಮದುಸೂದನ್ ನೀಡಿದ ದೂರಿನನ್ವಯ ವರ್ಗಾವಣೆ ಮಾಡಲಾಗಿದೆ ಎಂದು ತಿಳಿದುಬಂದಿದೆ.