ನೀವು ಟಿಕ್ ಟಾಕ್ ಪ್ರಿಯರಾಗಿದ್ದೀರಾ..? ನೀವು ಮಿಸ್ ಮಾಡದೇ ಓದಲೇ ಬೇಕಾದ ಸ್ಟೋರಿ. ಆದರೆ, ಬೇಸರದ ಸಂಗತಿ ಎಂದರೆ ನಿಮಗೆ ಇದು ಬಿಗ್ ಶಾಕಿಂಗ್ ನ್ಯೂಸ್.
ವಿಷ್ಯ ಏನು ಅಂದ್ರೆ, ಕರ್ನಾಟಕದಲ್ಲಿ ಟಿಕ್ ಟಾಕ್ ಆ್ಯಪ್ ಬ್ಯಾನ್ ಆಗುವ ಸಾಧ್ಯತೆ ಇದೆ. ರಾಜ್ಯ ಮಹಿಳಾ ಆಯೋಗ ಈ ಆ್ಯಪ್ ಅನ್ನು ನಿಷೇಧ ಮಾಡುವಂತೆ ಕೋರ್ಟ್ ಮೊರೆ ಹೋಗಲು ನಿಶ್ಚಯಿಸಿ, ಚಿಂತನೆ ನಡೆಸುತ್ತಿದೆ, ರಾಜ್ಯ ಮಹಿಳಾ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮೀ ಬಾಯಿ ಈ ಸಂಗತಿಯನ್ನು ಬಹಿರಂಗ ಪಡಿಸಿದ್ದಾರೆ.
ಮಹಿಳೆಯ ವಿಡಿಯೋಗಳನ್ನು ಅಸಭ್ಯವಾಗಿ ಬಳಸಿಕೊಳ್ಳಲಾಗುತ್ತಿದ್ದು, ಈ ಬಗ್ಗೆ ಮಹಿಳಾ ಆಯೋಗಕ್ಕೆ ಸಿಕ್ಕಾಪಟ್ಟೆ ದೂರುಗಳು ಬರುತ್ತಿರುವ ಹಿನ್ನಲೆಯಲ್ಲಿ ಈ ಮಹಿಳಾ ಆಯೋಗ ನ್ಯಾಯಾಲಯದ ಮೆಟ್ಟಿಲು ಏರಲು ಮುಂದಾಗಿದೆ. ಆದ್ದರಿಂದ ಕೋರ್ಟ್ ಇದನ್ನು ಗಂಭೀರವಾಗಿ ಪರಿಗಣಿಸಿ ಟಿಕ್ ಟಾಕ್ ಆ್ಯಪ್ ಅನ್ನು ಬ್ಯಾನ್ ಮಾಡಲು ಮುಂದಾಗುವ ಸಾಧ್ಯತೆ ದಟ್ಟವಾಗಿದೆ.
ನೀವು ಟಿಕ್ ಟಾಕ್ ಪ್ರಿಯರೇ..? ನಿಮಗಿದು ಬಿಗ್ ಶಾಕಿಂಗ್ ನ್ಯೂಸ್..!
Date: