ರಾಕಿಂಗ್ ಸ್ಟಾರ್ ಯಶ್ ಮತ್ತು ಚಾಲೆಂಜಿಂಗ್ ಸ್ಟಾರ್ ಯಶ್ ಅವರು ಜೋಡೆತ್ತುಗಳಾಗಿ ಮಂಡ್ಯದ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರ ಪರ ಪ್ರಚಾರ ಮಾಡುತ್ತಿದ್ದಾರೆ. ಸುಮಲತಾ ಅವರ ಪರವಾಗಿ ಪ್ರಚಾರ ಮಾಡುತ್ತಿರುವುದರಿಂದ ಸಿಎಂ ಕುಮಾರಸ್ವಾಮಿ ಅವರು ಸೇರಿದಂತೆ ಅನೇಕರ ಕಂಗೆಣ್ಣಿಗೆ ಈ ಇಬ್ಬರು ನಟರು ಗುರಿಯಾಗಿದ್ದಾರೆ.
ಆದರೆ, ಅದಕ್ಕೆ ತಲೆಕೆಡಿಸಿಕೊಳ್ಳದೆ ಮಾತಿಗೆ ಮೆದು ಮಾತಲ್ಲೇ ತಿರುಗೇಟು ನೀಡಿ ಪ್ರಚಾರ ಮುಂದುವರೆಸುತ್ತಿದ್ದಾರೆ. ಇಂದು ಪ್ರಚಾರ ಮುಂದುವರೆಸಿರುವ ಯಶ್ ಮದ್ದೂರು ತಾಲೂಕಿನ ಅಣ್ಣಳ್ಳಿ ಗ್ರಾಮಕ್ಕೆ ಹೋದಾಗ ಕೆಂಪಮ್ಮ ಎನ್ನುವ ಅಜ್ಜಿಯೊಬ್ಬರು ತನ್ನ ಮನೆಗೆ ಬರುವಂತೆ ಆಹ್ವಾನಿಸಿದರು. ಅಜ್ಜಿಯ ಪ್ರೀತಿಯ ಆಹ್ವಾನಕ್ಕೆ ಮನಸೋತ ರಾಕೀಭಾಯ್ ಅವರ ಮನೆಗೆ ಹೋಗಿ ಬಾಳೆ ಹಣ್ಣು ಸ್ವೀಕರಿಸಿ, ಸುಮಲತಾ ಅವರ ಪರ ಮತಯಾಚನೆ ಮಾಡಿದರು. ಆಗ ಅಜ್ಜಿ ಸುಮಲತಾ ಅವರಿಗೆ ಮತಹಾಕುತ್ತೇನೆ ಎಂದು ಮಾತುಕೊಟ್ಟು ಪ್ರೀತಿಯಿಂದ ಆಶೀರ್ವದಿಸಿ ಬೀಳ್ಕೊಟ್ಟರು.
ರಾಕಿಂಗ್ ಸ್ಟಾರ್ ಅಜ್ಜಿ ಮನೆಗೆ ಹೋಗಿ ವೋಟ್ ಕೇಳಿದಾಗ ಅಜ್ಜಿ ಏನಂದ್ರು?
Date: