ಕರ್ನಾಟಕ ರಾಜಕಾರಣದಲ್ಲಿ ಟ್ರಬಲ್ ಶೂಟರ್ ಎಂದೇ ಖ್ಯಾತರಾಗಿರುವ ಸಚಿವ ಡಿ,ಕೆ ಶಿವಕುಮಾರ್ ಬಿಜೆಪಿ ಪರ ಮತಯಾಚನೆ ಮಾಡಿದ್ದಾರೆ. ಡಿಕೆಶಿಗೆ ಬಿಜೆಪಿ ಕಂಡ್ರೆ ಆಗಲ್ಲ. ಅವರು ಕಾಂಗ್ರೆಸ್ನ ಪ್ರಭಾವಿ ನಾಯಕ…ಒಳ್ಳೆಯ ಸ್ಥಾನ-ಮಾನ, ಗೌರವ ಎಲ್ಲವೂ ಇದೆ. ಆದ್ದರಿಂದ ಅವರು ಬಿಜೆಪಿಗೆ ಬರುವ ಶಾಕಿಂಗ್ ನ್ಯೂಸ್ ಸಹ ಇಲ್ಲ. ಬಹುಶಃ ಅದು ಸಾಧ್ಯವೂ ಇಲ್ಲ ಎಂದೆನಿಸುತ್ತದೆ.
ಡಿಕೆಶಿ ಕಾಂಗ್ರೆಸ್ ಹೈಕಮಾಂಡ್ ಮಟ್ಟದಲ್ಲೂ ಭಾರೀ ಹೆಸರು ಮಾಡಿದ್ದಾರೆ. ರಾಜ್ಯ ರಾಜಕಾರಣದಲ್ಲಂತೂ ಡಿಕೆಶಿ ಹೆಸರು ಉತ್ತುಂಗದಲ್ಲಿದೆ. ಅವರು ಬಿಜೆಪಿ ಪರ ಮತ ಕೇಳಿದ್ದಾರೆ ಎನ್ನುವುದನ್ನು ಯಾರೂ ನಂಬಲ್ಲ. ಆದರೆ, ಇಂದು ಡಿಕೆಶಿ ಬಿಜೆಪಿಗೆ ಮತಯಾಚಿಸಿದ್ದಾರೆ.
ಉದ್ದೇಶಪೂರ್ವಕವಾಗಿ ಡಿಕೆಶಿ ಬಿಜೆಪಿ ಪರ ವೋಟ್ ಕೇಳಿರುವುದಲ್ಲ. ಭಾಷಣದ ಭರದಲ್ಲಿ ಮೈತ್ರಿಗೆ ಮತ ಕೇಳ ಬೇಕಾದರೆ ಬಾಯಿತಪ್ಪಿನಿಂದ ಬಿಜೆಪಿಗೆ ಮತಯಾಚನೆ ಮಾಡಿದ್ದಾರೆ.
ತುಮಕೂರಿನ ಕುಣಿಗಲ್ನಲ್ಲಿ ಭಾಷಣ ಮಾಡುವಾಗ ಡಿಕೆಶಿ ಮಾತನಾಡುತ್ತಾ ತಪ್ಪಾಗಿ ಬಿಜೆಪಿ ಪರ ಮತ ಹಾಕುವಂತೆ ಕೇಳಿಕೊಂಡರು, ಹೀಗೆ ಟ್ರಬಲ್ ಶೂಟರ್ ಯಡವಟ್ಟು ಮಾಡಿದರು.
ಬಿಜೆಪಿ ಪರ ಮತಯಾಚನೆ ಮಾಡಿದ ಟ್ರಬಲ್ ಶೂಟರ್..!
Date: