ಇಂದು ಬೆಳಿಗ್ಗೆ ಮೈಸೂರಿನ ಟಿ.ನರಸೀಪುರ ರಸ್ತೆಯಲ್ಲಿರುವ ನಟ ದರ್ಶನ್ ಫಾರ್ಮ್ ಹೌಸ್ ‘ತೂಗುದೀಪ ಫಾರಂ’ ಮೇಲೆ ದಾಳಿ ನಡೆಸಲಾಗಿದೆ. ಕೆಲವು ಕಾಲ ಅಧಿಕಾರಿಗಳು ಪರಿಶೀಲನೆ ನಡೆಸಿ ವಾಪಸ್ ತೆರಳಿದ್ದಾರೆ. ಯಾವ ಕಾರಣಕ್ಕೆ ಫಾರ್ಮ ಹೌಸ್ ಮೇಲೆ ದಾಳಿ ಮಾಡಿದ್ದಾರೆ ಎಂದು ಎಲ್ಲರಲ್ಲು ಕಾಡುವ ಪ್ರಶ್ನೆ .
ಆದರೆ ದರ್ಶನ್ ಅವರು ಮಾತ್ರ ಮಂಡ್ಯದಲ್ಲಿ ಪ್ರಚಾರದಲ್ಲಿ ಬ್ಯುಸಿಯಾಗಿದ್ದಾರೆ , ದಾಳಿ ವಿಚಾರವಾಗಿ ಪ್ರತಿಕ್ರಿಯಿಸಿದ್ದು ಹೀಗೆ ‘ನಾನು ಜಿಎಸ್‌ಟಿ ಸೇರಿ ಎಲ್ಲಾ ತೆರಿಗೆ ಕಟ್ಟಿದ್ದೀನಿ. ಫಾರ್ಮ್ ಹೌಸ್ ಮೇಲೆ ದಾಳಿ ಮಾಡಿದರೆ ಏನು ಸಿಗುತ್ತದೆ?. ಪ್ರಾಣಿ, ಪಕ್ಷಿಗಳನ್ನು ನೋಡಿಕೊಂಡು ಹೋಗಲಿ ಬಿಡಿ’ ಎಂದು ಹೇಳಿದರು.