ಮಂಡ್ಯ ಲೋಕಸಭಾ ಕ್ಷೇತ್ರದಲ್ಲಿ ಮೈತ್ರಿ ಅಭ್ಯರ್ಥಿಯಾಗಿ ನಿಖಿಲ್ ಕುಮಾರಸ್ವಾಮಿ ಮತ್ತು ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಸ್ಪರ್ಧೆ ಮಾಡುತ್ತಿರುವುದರಿಂದ ಮಂಡ್ಯ ಕ್ಷೇತ್ರದತ್ತ ಇಡೀ ದೇಶದ ಚಿತ್ತ ನೆಟ್ಟಿದೆ.
ನಿಖಿಲ್ ಅವರು ಸಿಎಂ ಕುಮಾರಸ್ವಾಮಿ ಅವರ ಮಗ, ಮಾಜಿ ಪ್ರಧಾನಿ ದೇವೇಗೌಡರ ಮೊಮ್ಮಗ ಆಗಿರುವುದರಿಂದ ಇದು ಅವರಿಗೆ ಪ್ರತಿಷ್ಠೆಯ ಕಣವಾಗಿದೆ. ಸುಮಲತಾ ಪ್ರಬಲ ಎದುರಾಳಿ ಆಗಿದ್ದು, ಅವರಿಗೆ ನಟರಾದ ದರ್ಶನ್ ಮತ್ತು ಯಶ್ ಸಾಥ್ ನೀಡಿದ್ದಾರೆ.
ಜೋಡೆತ್ತುಗಳಾಗಿ ಯಶ್, ದರ್ಶನ್ ಪ್ರಚಾರದ ಹೊಣೆ ಹೊತ್ತಿರುವುದು ಸಿಎಂ ಸೇರಿದಂತೆ ಮೈತ್ರಿ ಪಾಳಯಕ್ಕೆ ಎಲ್ಲೋ ಒಂದು ಕಡೆ ಆತಂಕ ತಂದೊಡ್ಡಿದೆ ಎಂಬ ಮಾತಿದೆ. ಅದಕ್ಕೆ ಸರಿಯಾಗಿ ಸಿಎಂ ತಾಳ್ಮೆ ಕಳೆದುಕೊಂಡು ಈ ಇಬ್ಬರು ಸ್ಟಾರ್ ನಟರ ವಿರುದ್ಧ ಪದೇ ಪದೇ ಹರಿಹಾಯ್ತಾ ಇದ್ದಾರೆ.
ಇಂದು ಕುಮಾರಸ್ವಾಮಿ ಯಶ್ ಅವರ ವಿರುದ್ಧ ಮಾತಾಡಿದ್ದಾರೆ.ಯಾವನೋ ಅವನು ಯಶ್ ಅಂತೆ ಯಶ್ ನನ್ನ ಪಕ್ಷವನ್ನು ಕಳ್ಳರ ಪಕ್ಷ ಎನ್ನುತ್ತಾನೆ. ನಾನು ಸಿನಿಮಾ ಮಾಡಿದ್ದೀನಿ. ನಮ್ಮಂಥಾ ನಿರ್ಮಾಪಕರಿದ್ರೆ ಇವು ಬದುಕುತ್ತವೇ ಎಂದಿರುವ ಸಿಎಂ, ನಮ್ಮ ಕಾರ್ಯಕರ್ತರು ನನಗೆ ತೊಂದರೆ ಆಗ ಬಾರದು ಎಂಬ ಕಾರಣಕ್ಕೆ ಸುಮ್ಮನೆ ಇದ್ದಾರೆ ಎಂದಿದ್ದಾರೆ.
ಸಿಎಂ ಅವರ ಈ ಹೇಳಿಕೆಗೆ ಯಶ್ ಪ್ರತಿಕ್ರಿಯೆ ನೀಡಿದ್ದಾರೆ. ನಾನು ಯಾವಾಗ ಆ ಮಾತು ಹೇಳಿದೆ ಎಂದು ತೋರಿಸಲು. ಅವರು ಹೇಳಿದಂತೆ ಕೇಳುತ್ತೇನೆ. ಹೇಳದೇ ಇರುವುದನ್ನು ಒಪ್ಪಿಕೊಳ್ಳಲು ತಯಾರಿಲ್ಲ. ಕಾರ್ಯಕರ್ತರು ಸುಮ್ಮನೆ ಇದ್ದರೆ ಏನ್ ಅರ್ಥ? ಅವರು ಆರುವರೆ ಕೋಟಿ ಜನ ಆಯ್ಕೆ ಮಾಡಿರುವ ಮುಖ್ಯಮಂತ್ರಿಗಳು. ಅವರು ಬ್ಯುಸಿ ಇದ್ದಾರೆ ಎಲೆಕ್ಷನ್ ಅಲ…ಅಕ್ಕ-ಪಕ್ಕದವರು ತಪ್ಪು ಮಾಹಿತಿ ನೀಡಿರಬೇಕು ಬಿಡುವು ಆದ ಮೇಲೆ ಕ್ಲಾರಿಟಿ ತೆಗೆದುಕೊಂಡು ಮಾತನಾಡಲಿ ಎಂದು ಯಶ್ ಹೇಳಿದ್ದಾರೆ.
ಯಶ್ ಗೆ ಯಾವನೋ ಅಂದ ಸಿಎಂ…! ಯಶ್ ಕೊಟ್ಟೇ ಬಿಟ್ರು ತಿರುಗೇಟು..!
Date: