ಅದೊಂದು ಪುಟ್ಟನಾಯಿ. ಅದು ಸಾವು-ಬದುಕಿನ ನಡುವೆ ಈಜುತ್ತಿತ್ತು…ಅದೂ ಬರೋಬ್ಬರಿ 220 ಕಿಮೀ ದೂರದಲ್ಲಿ..! ಅದು ಹೇಗೋ ಅದೃಷ್ಟವಶಾತ್ ದೂರದಲ್ಲಿ ಕೆಲಸ ಮಾಡುತ್ತಿದ್ದ ಕಾರ್ಮಿಕರ ಕಣ್ಣಿಗೆ ಬಿದ್ದಿದೆ..! ಅದನ್ನು ಕಂಡ ಕಾರ್ಮಿಕರು ತಡ ಮಾಡದೇ ಅದರ ರಕ್ಷಣೆಗೆ ಮುಂದಾಗಿದ್ದಾರೆ..!
ಈ ಘಟನೆ ನಡೆದಿರುವುದು ನಮ್ಮಲ್ಲಿ ಅಲ್ಲ. ಬದಲಾಗಿ ದೂರದ ಥೈಲ್ಯಾಂಡ್ನಲ್ಲಿ. ಅಲ್ಲಿ ಸಮುದ್ರದಲ್ಲಿ ಸುಮಾರು 220 ಕಿಮೀ ದೂರದಲ್ಲಿ ನಾಯಿಯೊಂದು ಈಜುತ್ತಿತ್ತು.. ಅದು ಸಮುದ್ರಕ್ಕೆ ಅಕಸ್ಮಾತ್ ಆಗಿ ಬಿದ್ದಿತೋ ಅಥವಾ ಕಿಡಿಗೇಡಿಗಳು ಅದನ್ನು ಎಸೆದರೋ ಗೊತ್ತಿಲ್ಲ. ಆದರೆ, ಅದು ತನ್ನ ಜೀವ ಉಳಿಸಿಕೊಳ್ಳಲು ಪರದಾಡಿ ಈಜುತ್ತಿತ್ತು. ದೂರದಲ್ಲಿ ಆಯಿಲ್ ವರ್ಕಸ್ ಕೆಲಸ ಮಾಡುತ್ತಿದ್ದ ಸಂದರ್ಭದಲ್ಲಿ ಆ ನಾಯಿ ಅವರ ಕಣ್ಣಿಗೆ ಬಿದ್ದಿದೆ. ಕೂಡಲೇ ಆ ಕಾರ್ಮಿಕರು ಅದರ ರಕ್ಷಣೆಗೆ ಮುಂದಾಗಿದ್ದರು. ಅಲ್ಲಿಗೆ ಕೂಡಲೇ ತೆರಳಿ ಅದನ್ನು ರಕ್ಷಣೆ ಮಾಡಿದ್ದಾರೆ.
ಈ ಘಟನೆ ಬಗ್ಗೆ ವರದಿಯಾಗಿದ್ದು, ವೆಬ್ಸೈಟ್ಗಳಲ್ಲಿ ಭಾರೀ ವೈರಲ್ ಆಗುತ್ತಿದೆ. ನಾಯಿಯ ರಕ್ಷಣೆ ಮಾಡಿದ ಕಾರ್ಮಿಕರ ಬಗ್ಗೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಸಾವು-ಬದುಕಿನ ನಡುವೆ ‘ಈಜುತ್ತಿದ್ದ’ ನಾಯಿಯನ್ನು ರಕ್ಷಿಸಿದ ಯುವಕರು..!
Date: