ಟಿಕ್ ಟಾಕ್ ನಿಷೇಧಿಸಲು ಈ ಘಟನೆಗಳೆ ಕಾರಣ ವಿಡಿಯೋ ಮಾಡುವ ಮುನ್ನ ಈ ಸುದ್ದಿ ನೊಡಿ !?

Date:

ಮದ್ರಾಸ್ ಹೈಕೋರ್ಟ್ ಟಿಕ್ ಟಾಕ್ ನಿಷೇಧಿಸಲು ಕೇಂದ್ರ ಸರಕಾರಕ್ಕೆ ಆದೇಶ ನೀಡಿದ ಕಾರಣ ಕೇಂದ್ರ ಸರಕಾರ ಟಿಕ್ ಟಾಕನ್ನು ಗೂಗಲ್ ಪ್ಲೆಯಿಂದ ತೆಗೆದು ಗೂಗಲ್ ಮತ್ತು ಆಯಪಲ್ ಸಂಸ್ಥೆಗೆ ನೋಟಿಸ್ ನೀಡಿದೆ. ಮದ್ರಾಸ್ ಹೈ ಕೋರ್ಟ್ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಕೇಂದ್ರ ಸರ್ಕಾರಕ್ಕೆ ಸೂಚಿಸಿತ್ತು. ಈ ಆದೇಶಕ್ಕೆ ಸುಪ್ರೀಂ ಕೋರ್ಟ್ ತಡೆ ನೀಡಲು ನಿರಾಕರಿಸಿದ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರ ಈ ಅಪ್ಲಿಕೇಶನ್ ತೆಗೆದು ಹಾಕುವಂತೆ ಸೂಚನೆ ನೀಡಿದೆ.
ಟಿಕ್ ಟಾಕ್ ಜನಪ್ರಿಯ ವೀಡಿಯೋ ಹಂಚಿಕೆ ಅಪ್ಲಿಕೇಶನ್ ಭಾರತದಾದ್ಯಂತ ಅತಿ ಜನಪ್ರಿಯವಾಗಿದೆ. ಈ ಅಪ್ಲಿಕೇಶನ್ ಅನ್ನು ನಿಷೇಧಿಸಲು ಹಲವಾರು ಕಾರಣಗಳಿವೆ. ಅಶ್ಲೀಲತೆಯನ್ನು ಪ್ರೋತ್ಸಾಹಿಸುತ್ತದೆ. ಟಿಕ್ ಟಾಕ್ ವೀಡಿಯೊಗಳನ್ನು ಚಿತ್ರೀಕರಣ ಮಾಡುವಾಗ ಜನರು ಗಾಯಗೊಂಡ ಹಲವಾರು ಸಂದರ್ಭಗಳಿವೆ.

ದೆಹಲಿಯಲ್ಲಿ ಇತ್ತೀಚೆಗೆ ಅಪ್ಲಿಕೇಶನ್ನಲ್ಲಿ ವೀಡಿಯೊ ಮಾಡುವ ಸಂದರ್ಭದಲ್ಲಿ ತನ್ನ ಸ್ನೇಹಿತನನ್ನು ಗುಂಡಿಕ್ಕಿದ ಘಟನೆ ನಡೆದಿದೆ.ಇದರಿಂದ 19 ವರ್ಷದ ಯುವಕ ದಾರುಣವಾಗಿ ಸಾವನ್ನಪ್ಪಿದ. ಈ ಘಟನೆಯು ಬರಾಖಂಬ ರಸ್ತೆಯಲ್ಲಿ ನಡೆದಿದ್ದು ಸಮಯದಲ್ಲಿ ಮೂರು ಸ್ನೇಹಿತರ ಜೊತೆ ಸಲ್ಮಾನ್ ಎನ್ನುವಾತ ಬಲಿಪಶುವಾಗಿದ್ದ ಎಂದು ಪೊಲೀಸರು ತಿಳಿಸಿದ್ದಾರೆ. ಆತನ ಮೂವರು ಸ್ನೇಹಿತರನ್ನು ಬಂಧಿಸಲಾಗಿದೆ. ಭಾರತೀಯ ಪೀನಲ್ ಕೋಡ್ (ಐಪಿಸಿ) ಮತ್ತು 1959 ಆರ್ಮ್ಸ್ ಆಕ್ಟ್, 25 ಮತ್ತು 27 ರ ಸೆಕ್ಷನ್ 302 ರ ಅಡಿಯಲ್ಲಿ ಆರೋಪಿಗಳ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

Share post:

Subscribe

spot_imgspot_img

Popular

More like this
Related

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು

ಚಳಿಗಾಲದಲ್ಲಿ ಆರೋಗ್ಯ ಕಾಪಾಡಲು ಪಿಸ್ತಾಗಳ ಸೇವನೆ ಒಳ್ಳೆಯದು ಚಳಿಗಾಲದಲ್ಲಿ ಆರೋಗ್ಯದ ಬಗ್ಗೆ ವಿಶೇಷ...

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ

ವಿಧಾನಸಭೆ ಸಭಾಧ್ಯಕ್ಷ ಯು.ಟಿ. ಖಾದರ್ ಅವರಿಗೆ ಸಿಲ್ವರ್ ಎಲಿಫೆಂಟ್ ಪ್ರಶಸ್ತಿ ಭಾರತ್ ಸ್ಕೌಟ್ಸ್...

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು: ನಿಖಿಲ್ ಕುಮಾರಸ್ವಾಮಿ

ಕಾಂಗ್ರೆಸ್ ರಾಷ್ಟ್ರೀಯ ಪಕ್ಷ ಅಂತ ಇರೋ ಬೋರ್ಡ್ ಬದಲಾವಣೆ ಮಾಡೋದು ಒಳ್ಳೆಯದು:...

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…

ಉದ್ಯಮಿ ಅರವಿಂದ್ ವೆಂಕಟೇಶ್ ರೆಡ್ಡಿ ಮನದಾಳದ ಮಾತು…. ಬೆಂಗಳೂರು: ಅರವಿಂದ ವೆಂಕಟೇಶ ರೆಡ್ಡಿ...