23 ವರ್ಷ ವಯಸ್ಸಿನ ಯುವತಿಯ ದೇಹ ನೇಣು ಬಿಗಿದ ಸ್ಥಿತಿಯಲ್ಲಿ ರಾಯಚೂರಿನ ಮಾಣಿಕ್ ಪ್ರಭು ದೇವಾಲಯದ ಗುಡ್ಡದ ಮರವೊಂದರಲ್ಲಿ ಏಪ್ರಿಲ್ 16 ರಂದು ಪತ್ತೆಯಾಗಿದೆ. ಇದು ರಾಯಚೂರು ಜಿಲ್ಲೆಯ ಇಂಜಿನಿಯರಿಂಗ್ ವಿದ್ಯಾರ್ಥಿನಿ ಎಂದು ತಿಳಿದುಬಂದಿದೆ, ಆ ಯುವತಿಯ ದೇಹದಲ್ಲಿ ಸಂಪೂರ್ಣ ಸುಟ್ಟ ಗಾಯಗಳೂ ಪತ್ತೆಯಾಗಿದ್ದು, ಅತ್ಯಾಚಾರ ಎಸಗಿ, ಆಕೆಯನ್ನು ಹಿಂಸಿಸಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬರುತ್ತಿದೆ. ನಿನ್ನೆ ಚುನಾವಣೆ ಇದ್ದ ಕಾರಣ ರಾತ್ರಿಯ ನಂತರ ಈ ಘಟನೆ ಸಾಮಾಜಿಕ ಜಾಲತಾಣದ ಮೂಲಕ ಬೆಳಕಿಗೆ ಬಂದಿದೆ.
ಇದೀಗ ಈ ಘಟನೆಗೆ ಸಂಭಂಧಿಸಿದಂತೆ ಸ್ಯಾಂಡಲ್ ವುಡ್ ನಟಿಯರು ಒಂದಾಗಿದ್ದು ನ್ಯಾಯಕ್ಕಾಗಿ ಧ್ವನಿ ಎತ್ತುತ್ತಿದ್ದಾರೆ.
ರಶ್ಮಿಕಾ ಮಂದಣ್ಣ..
”ಮಾನವೀಯತೆ ಎಲ್ಲಿದೆ? ಮೂಲದ ಪ್ರಕಾರ ರಾಯಚೂರು ಎಂಜಿನಿಯರಿಂಗ್ ವಿದ್ಯಾರ್ಥಿ ಅತ್ಯಾಚಾರಕ್ಕೊಳಗಾದ ಮತ್ತು ಕೊಲೆಯಾಗಿದೆ ಎಂದು ಹೇಳಲಾಗುತ್ತಿದೆ. ಇದು ನಿಜವಾಗಿಯೂ ನನ್ನ ಹೃದಯವನ್ನು ಒಡೆಯುವಂತೆ ಮಾಡಿದೆ. ಇದು ನಿಲ್ಲಲು ಈ ರೀತಿಯ ಎಷ್ಟು ಘಟನೆ ನಡೆಯಬೇಕು. ನ್ಯಾಯ ಸಿಗುತ್ತದೆ ಎಂಬ ಭರವಸೆ ಇರಲಿ ಮತ್ತು ಇದು ಇಲ್ಲಿಗೆ ಕೊನೆಯಾಗಲಿ.”
ರಕ್ಷಿತಾ ಪ್ರೇಮ್..
”ಈ ಬಾರಿಯಾದರೂ ನ್ಯಾಯ ಸಿಗಲಿ. ಈ ಘಟನೆ ನಡೆದಿದೆ ಎನ್ನುವುದನ್ನು ಕೇಳಿಯೇ ನನಗೆ ಕೋಪ, ಬೇಸರ, ನೋವು ಉಂಟಾಗಿದೆ. ನಿಮಗೂ ಕೂಡ ಈ ಘಟನೆ ಇದೇ ರೀತಿ ಆಗಿರುತ್ತದೆ.”
ಹರ್ಷಿಕಾ ಪೂಣಚ್ಚ..
”ಈ ಹೆಣ್ಣು ಮಗಳಿಗೆ ನ್ಯಾಯ ಸಿಗಬೇಕು. ಇಂಥ ಘೋರ ಕೃತ್ಯ ಎಸಗಿದವರಿಗೆ ಈಗಲೇ ಶಿಕ್ಷೆಯಾಗಬೇಕು. ರಾಯಚೂರಿನ ಜನರೊಂದಿಗೆ ನಾನಿದ್ದೇನೆ”