ಎಳನೀರು ಕುಡಿದ್ರೆ ಕ್ಯಾನ್ಸರ್ ಗುಣವಾಗುತ್ತಾ?

Date:

ಅತೀ ಮಾರಕ ಕಾಯಿಲೆ ಅಂದ್ರೆ ಅದು ಕ್ಯಾನ್ಸರ್ ಅಂತಾ ಎಲ್ಲಾರಿಗೂ ಗೊತ್ತಿರೋ ವಿಷಯವೇ. ಆದ್ರೆ ಕ್ಯಾನ್ಸರ್ ಫೈನಲ್ ಸ್ಟೇಜ್ಗೆ ಹೋದ್ರೆ ಬದುಕುಳಿಯುವುದು ಕಷ್ಟ. ಆದ್ರೆ ಬಿಳಿ ಎಳನೀರು ಕುಡಿದರೆ ಕ್ಯಾನ್ಸರ್ ಗುಣವಾಗುತ್ತದೆ ಎಂಬ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.
ಆ ಸಂದೇಶದಲ್ಲಿ ಹೀಗಿದೆ, ‘ಹಾಟ್ ಕೊಕನಟ್ ವಾಟರ್ ನಿಮ್ಮನ್ನು ಜೀವನಪೂರ್ತಿ ಕಾಪಾಡುತ್ತದೆ. ಎಳನೀರಿನಲ್ಲಿರುವ ತೆಳುಗಂಜಿಗೆ ಬಿಸಿ ನೀರನ್ನು ಹಾಕಿ. ಅದು ‘ಅಲ್ಕೇನ್ ವಾಟರ್’ ಆಗುತ್ತದೆ. ಇದನ್ನು ಪ್ರತಿ ದಿನ ಕುಡಿದಲ್ಲಿ ಕ್ಯಾನ್ಸರ್ ಗುಣಮುಖವಾಗುತ್ತದೆ. ಜೊತೆಗೆ ಆರೋಗ್ಯ ದೃಷ್ಟಿಯಿಂದಲೂ ಒಳ್ಳೆಯದು. ಎಳನೀರು ಇದು ಕ್ಯಾನ್ಸರ್ ಸೆಲ್ಗಳನ್ನು ಕೊಲ್ಲುವುದರ ಜೊತೆಗೆ ಅಧಿಕ ರಕ್ತದೊತ್ತಡವನ್ನೂ ಕಡಿಮೆ ಮಾಡುತ್ತದೆ. ಈ ರೀತಿಯ ಸುದ್ದಿ ಎಲ್ಲೆಡೆ ಸಿಕ್ಕಾಪಟ್ಟೆ ಹರಿದಾಡುತ್ತಿದೆ.
ಇದಕ್ಕಾಗಿ ನಿಜಕ್ಕೂ ಬಿಸಿ ಎಳನೀರಿಗೆ ಕ್ಯಾನ್ಸರ್ ಗುಣಪಡಿಸುವ ಶಕ್ತಿ ನಿಜಕ್ಕೂ ಸಾಬೀತಾಗಿದೆಯೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳು ಸುದ್ದಿ ಎಂದು ತಿಳಿದುಬಂದಿದೆ. ಈ ಬಗ್ಗೆ ಕ್ವಿಂಟ್ ಸುದ್ದಿಸಂಸ್ಥೆಯು ದೆಹಲಿಯ ಅಪೋಲೋ ಆಸ್ಪತ್ರೆ ಕ್ಯಾನ್ಸರ್ ತಜ್ಞರನ್ನು ಸಂಪರ್ಕಿಸಿ ಸ್ಪಷ್ಟನೆ ಪಡೆದಿದ್ದು ಅವರು, ಎಳನೀರಿನಿಂದ ವೈರಸ್ಗಳು, ಬ್ಯಾಕ್ಟೀರಿಯಾಗಳು ಮತ್ತು ಸೋಂಕನ್ನು ತಡೆಗಟ್ಟುವ ಶಕ್ತಿ ಇದೆ ಎಂದು ವೈಜ್ಞಾನಿಕವಾಗಿ ಸಾಬೀತಾಗಿದೆ. ಇದೆಲ್ಲಕ್ಕಿಂತಾ ಹೆಚ್ಚಾಗಿ ಪೌಷ್ಟಿಕಾಂಶವಿರುವ ಉತ್ತರ ಆಹಾರಗಳಲ್ಲಿ ಒಂದು. ಅದರ ಹೊರತಾಗಿ ಎಳನೀರಿನಲ್ಲಿ ಕ್ಯಾನ್ಸರ್ ಅಥವಾ ಟ್ಯೂಮರ್ ಅನ್ನು ಗುಣಪಡಿಸುವ ಅಂಶಗಳಿಲ್ಲ. ಇದು ಸಂಪೂರ್ಣ ಸುಳ್ಳು ಸುದ್ದಿ ಎಂದಿದ್ದಾರೆ.

Share post:

Subscribe

spot_imgspot_img

Popular

More like this
Related

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು

ಆರೋಗ್ಯಕರ ಅಡುಗೆಗೆ ಹಿತ್ತಾಳೆ ಪಾತ್ರೆಗಳು ಸೂಕ್ತವೇ? ತಿಳಿದುಕೊಳ್ಳಿ  ಪ್ರಯೋಜನಗಳು ಉತ್ತಮ ಆರೋಗ್ಯಕ್ಕಾಗಿ ಪೌಷ್ಟಿಕ...

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು ಕಳ್ಳತನ

ನಟ ದರ್ಶನ್ ಪತ್ನಿ ವಿಜಯಲಕ್ಷ್ಮಿ ಮನೆಯಲ್ಲಿ 3 ಲಕ್ಷ ರೂ. ನಗದು...

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ – ಆರ್. ಅಶೋಕ್ ಆಗ್ರಹ

ಹಾಸನ ದುರಂತ: ಮೃತ ಕುಟುಂಬಗಳಿಗೆ 10 ಲಕ್ಷ ಪರಿಹಾರ ನೀಡಲಿ –...

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು!

ಬೆಂಗಳೂರಿನಲ್ಲಿ ಭೀಕರ ಅಪಘಾತ: ಕ್ಯಾಂಟರ್​​ ಡಿಕ್ಕಿಯಾಗಿ ಇಬ್ಬರು ಸಾವು! ಬೆಂಗಳೂರು: ಆಟೋ ಮತ್ತು...