ಈಗ ಪ್ರಪಂಚವೇ ಮೊಬೈಲ್ . ಯಂಗ್ ಜನರೇಷನ್ ಸಿಕ್ಕಾಪಟ್ಟೆ ಯಾವುದಕ್ಕೆ ಅಡಿಕ್ಟ್ ಆಗಿದೆ ಅಂತ ಕೇಳಿದ್ರೆ, ಥಟ್ಟಂತ ಬರೋ ಉತ್ತರ, ಎಲೆಕ್ಟ್ರಾನಿಕ್ ಗ್ಯಾಜೆಟ್ಸ್. ಅದರಲ್ಲೂ ಮೊಬೈಲ್ಗೆ ಇಂದಿನ ಜನ ಊಟ ತಿಂಡಿ ಬಿಟ್ರು ಮೊಬೈಲ್ ಒಂದು ಕ್ಷಣವೂ ಬಿಟ್ಟು ಇರೋದಿಲ್ಲ. ಸಿಕ್ಕಾಪಟ್ಟೆ ಅಡಿಕ್ಟ್ ಆಗಿದ್ದಾರೆ.
ಕೈಯಲ್ಲಿ ಮೊಬೈಲ್ ಒಂದಿದ್ರೆ, ಸುತ್ತಮುತ್ತಲ ಜಗತ್ತಿನ ಬಗ್ಗೆಯೂ ಜನರಿಗೆ ಅರಿವಿರೋದೆ ಇಲ್ಲ. ಇದು ಕೇವಲ ಇಂದಿನ ಯಂಗ್ ಜನರೇಷನ್ ಅಷ್ಟೇ ಅಲ್ಲ, ಹಿರಿಯರು, ಮಕ್ಕಳ ಪರಿಸ್ಥಿತಿಯೂ ಹೌದು.ಅತೀ ಹೆಚ್ಚು ಮೊಬೈಲ್, ಟಿವಿ, ಕಂಪ್ಯೂಟರ್ ಸ್ಕ್ರೀನ್ಗಳನ್ನ ನೋಡೋದ್ರಿಂದ ಕಣ್ಣಿನ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಇದೇ ಕಾರಣಕ್ಕೆ ಸಾಕಷ್ಟು ಮೊಬೈಲ್ಗಳಲ್ಲಿ ಡಾರ್ಕ್ ಮೋಡ್ ಆಪ್ಶನ್ ಕೂಡ ಇತ್ತೀಚಿಗೆ ನೀಡಲಾಗ್ತಿದೆ. ಇಲ್ಲದಿದ್ರೆ, ಡಾರ್ಕ್ ಮೋಡ್ ಆಪ್ ಕೂಡ ಲಭ್ಯವಿದೆ. ಆದ್ರೆ, ಈ ಡಾರ್ಕ್ ಮೋಡ್ ಕೂಡ ಮನುಷ್ಯನ ಕಣ್ಣಿಗೆ ಸಂಪೂರ್ಣ ಸುರಕ್ಷಿತವಲ್ಲ.
ಹೌದು.. ಡಾರ್ಕ್ ಮೋಡ್ನಿಂದ ಕಣ್ಣಿಗೆ ಸಮಸ್ಯೆಯಾಗೋದಿಲ್ವಾ..? ವಿಡಿಯೋ ನೋಡೋದು, ಓದೋದನ್ನ ಡಾರ್ಕ್ ಮೋಡ್ ಮೂಲಕ ಮಾಡಿದ್ರೆ ಏನೂ ಸಮಸ್ಯೆ ಇಲ್ವಾ ಅನ್ನೋ ಚರ್ಚೆ ಎಲ್ಲೆಡೆ ಶುರುವಾಗಿದೆ. ಇದಕ್ಕೆ ಉತ್ತರವೂ ಸಿಗುತ್ತಿದ್ದು, ಸದ್ಯ ಡಾರ್ಕ್ ಮೋಡ್ನಲ್ಲಿ ಮೊಬೈಲ್ ಯೂಸ್ ಮಾಡೋದ್ರಿಂದ ಶೇಕಡಾ 26ರಷ್ಟು ಮನುಷ್ಯರ ಕಣ್ಣುಗಳಿಗೆ ದೋಷವುಂಟಾಗುತ್ತಿರುವುದು ಕಂಡು ಬರುತ್ತಿದೆ. ಹಾಗಂತ ಡಾರ್ಕ್ ಮೋಡ್ ಬಳಸಬೇಡಿ ಅಂತ ಅಲ್ಲ. ಚೆಡ್ಡಾರ್ ಸಂಸ್ಥೆಯ ವರದಿಯ ಪ್ರಕಾರ ವಿಡಿಯೋ ನೋಡಲು ಡಾರ್ಕ್ ಮೋಡ್ ಬಳಸಿದ್ರೆ ಸಮಸ್ಯೆ ಹೆಚ್ಚಿಗೇನೂ ಇಲ್ಲ. ಆದ್ರೆ, ಟೆಕ್ಸ್ಟ್ಗಳನ್ನ ಓದೋಕೆ ಡಾರ್ಕ್ ಮೋಡ್ನಲ್ಲಿ ಪ್ರಯತ್ನಿಸಿದ್ರೆ, ಅದು ಕಣ್ಣಿನ ಮೇಲೆ ಹೆಚ್ಚು ಪರಿಣಾಮ ಬೀರುತ್ತೆ. ಓದುವುದಕ್ಕೆ, ಡಾರ್ಕ್ ಮೋಡ್ಗಿಂತಲೂ ಲೈಟ್ ಮೋಡ್ ಉತ್ತಮ ಅಂತ ವರದಿ ಹೇಳುತ್ತಿದೆ.