ಅವಳು ಅವನ ಆತ್ಮದಷ್ಟು ಹತ್ತಿರವಿದ್ದ… ಕಡೆಗೆ.?

Date:

ಇದೊಂದು ಸಹಜ ವಿಷಯ. ಪ್ರೀತಿ,ಜಾತಿ. ಮತ್ತು ಪ್ರಕೃತಿ. ಪ್ರೀತಿ, ಜಾತಿ ಸಾಧಾರಣವೆನ್ನಿಸಿದರೂ, ಪ್ರಕೃತಿ ಎಂಬ ಮೂರು ಮುಕ್ಕಾಲು ಅಕ್ಷರ ಸಾಧಾರಣವಲ್ಲ.

ಪ್ರೇಮಿಗಳ ಮಧ್ಯೆ ಧುತ್ ಅಂತ ಪ್ರತ್ಯಕ್ಷವಾಗುವ ಅಸ್ಪಷ್ಟ ವಿಲಕ್ಷಣ ಪಾತ್ರ “ಜಾತಿ”. ಅದೊಂಥರ unfortunate ಹಿಂಸೆ ಇದ್ದಂಗೆ. ದೈಹಿಕಮಾನಸಿಕಕ್ಕೆ ಹೇವರಿಕೆ ಮೂಡಿಸುತ್ತೆ. ಅದರ ಪ್ರಭಾವಕ್ಕೆ ಕ್ಷೀಣಿಸಿದ ಪ್ರಣಯ ಹಕ್ಕಿಗಳು ಲೆಕ್ಕವಿಲ್ಲದಷ್ಟು..
ಪ್ರೀತಿಯನ್ನು ಪ್ರೀತಿಯಿಂದ ಪ್ರೀತಿಸಿ ಎಂಬುದು ಶುದ್ಧ ವೇದಾಂತ. ಜಾತಿಯಿಂದ ಮನುಷ್ಯನನ್ನು ವ್ಯವಧಾನಿಸಿ ಎಂಬುದು ಶುಷ್ಕ ಸಿದ್ಧಾಂತ. ಜಾತಿಯಿಂದ ಪ್ರೀತಿಯೋ? ಪ್ರೀತಿಯಿಂದ ಜಾತಿಯೋ? ಎಂಬುದರ ಪ್ರಶ್ನೆಗೆ ವಿವಿಧ ಧಾರ್ಮಿಕರ ಉತ್ತರ ಗಣತಿಗೆ ತೆಗೆದುಕೊಳ್ಳುವಂತಿಲ್ಲ. ಪ್ರೀತಿ-ಜಾತಿ ಕಾಡಾಟ ಹೊಸತೇನೂ ಅಲ್ಲ. ತಲೆತಲಾಂತರಗಳಿಂದ ಪಾಲನೆಯಲ್ಲಿರುವ unsolved case ಅಷ್ಟೆ . ಇವಾಗ ಪ್ರೀತಿ ಮತ್ತು ಜಾತಿಯ ಸೈದ್ಧಾಂತಿಕ ಯುದ್ಧಕ್ಕೆ ತಿಲಾಂಜಲಿ ಕೊಡುವುದಕ್ಕೆ ಒಂದು ಸಲಕ್ಷಣ ಪಾತ್ರ “ಪ್ರಕೃತಿ” ಅದರದ್ದು ಪ್ರಯತ್ನವಷ್ಟೆ. ಈ ಕಥೆಯಲ್ಲಿ ನಾಯಕ, ನಾಯಕಿಯ ಪಾತ್ರ ಕಲ್ಪನೆ. ಕೇವಲ ಕಲ್ಪನೆ.

ಬೆಂಗ್ಳೂರ ನಾಗಸಂದ್ರದ ಮಾರುತಿ ಬಡಾವಣೆಯಲ್ಲಿರುವ ಮೂರನೆ ಕ್ರಾಸಿನಲ್ಲಿ ಇರುಕ್ಕು-ಮುರುಕ್ಕು ಮನೆಗಳ ಸಂದಿಯಲ್ಲಿ ವಾಸವಿರುವ ಐದುವರೆ ಅಡಿ, ಗುಂಗರು ಕೂದಲು, ಬೆಕ್ಕಿನ ಕಣ್ಣುಗಳನ್ನ ಹೊಂದಿರುವ, ದೈತ್ಯಗಾತ್ರದ ಶ್ರೀಕಾಂತನ ಬಾಳಿನ ಅಸ್ತಿತ್ವಕ್ಕೆ ಎರಡೂ ಕಾಲನ್ನು ಒಟ್ಟಿಗೆ ಇಟ್ಟು ಬಂದ ಸ್ವಪ್ನ ಎಂಬ ನೀಳಕಾಯದ ಹುಡುಗಿ ಅವನನ್ನು ಕಾಡಿ ಕೂಡಿ ನಖಶಿಕಾಂತವಾಗಿ, ಪುಂಖಾನುಪುಂಖವಾಗಿ, ಎಪಿಸೋಡುಗಟ್ಟಲೆ, ವೀಮುಗಟ್ಟಲೆ ಪ್ರೀತಿಸಿ ಓಲಿಸಿಕೊಂಡ ಛಾಯೆ. ಅವರದ್ದು ವಿಫಲ ಪ್ರೇಮ. ಕಾರಣ ಒಂದು ವಾಕ್ಯ. ‘ಜಾತಿ’

ಸ್ವಪ್ನ : “ಐ ಲವ್ ಯೂ ಬಂಗಾರಿ, ನಿನ್ನ ಬಿಟ್ಟು ಬದುಕೋದಿರಲಿ, ಸಾಯೋದಕ್ಕು ನನ್ನಿಂದ ಸಾಧ್ಯವಿಲ್ಲ. ನಂಗೆ ಮೋಸ ಮಾಡ್ಬೇಡ ಕಣೋ. ನನ್ನ ಬದುಕಿನಲ್ಲಿ ಮದುವೆ ಎಂಬ ಮೂರು ಅಕ್ಷರವಿದ್ದರೆ ಅದು ನಿನ್ನೊಂದಿಗೆ ಮಾತ್ರ. ಇಲ್ಲವೇ ಸಾವಿನೊಂದಿಗೆ ಅಷ್ಟೇ. ”

ಮೂರು ವರ್ಷಗಳ ನಂತರ.

“ಅರೆರೆ! ವಾರೆವಾಹಃ… ಈ ಎಲ್ಲಾ ಸಂದೇಶಗಳ ವಿಲೇವಾರಿಯಲ್ಲಿ ಎಂಥ ಮಾತುಗಾರಿಕೆ, ಸಂಕಲ್ಪ ಶಕ್ತಿ. ಅವನ ಮೇಲೆ ಅವಳಿಗೆ ಎಗ್ಗಿಲ್ಲದ ಪ್ರೀತಿ!! ಯಾವ ಪರಿ ಹುಚ್ಚು ಪ್ರೇಮ?? ಅವನಿಲ್ಲದ ಅವಳ ಮನಸ್ಸು ಶೂನ್ಯವಂತೆ. ಇಂಥ ಮಾಡ್ರನ್ ಕಾಲದ ಹುಡುಗಿಯರಲ್ಲಿ ಹೀಗೂ ಪ್ರೀತಿ ಮಾಡುವವರಿದ್ದಾರ….???

ಆಶ್ಚರ್ಯವೆನಿಸಿದರೂ ನಂಬಲೆಬೇಕಾದ ಸಂಗತಿ. ಅದೂ ಅಲ್ಲದೆ, ಇದು ನಡೆದು 3 ವರ್ಷ ಕಳೆದರೂ ಈ ಹುಡುಗ ಇನ್ನೂ ಆಕೆ ಕಳಿಸಿರುವ ಸಂದೇಶಗಳನ್ನೆಲ್ಲ ಹಾಗೆ ಇಟ್ಟಿದಾನೆ. ಇವನೆಂಥ ಹುಚ್ಚ…?? ಅವಳ ಅಕ್ಷರಗಳನ್ನು ವೈಭವಿಕರಿಸಿದ್ದು ‘ಪ್ರಕೃತಿ’. ಇದನ್ನು ಅಲ್ಲೇ ಪ್ರಕೃತಿಯ ಬಲ ಭಾಗದಲ್ಲಿ ನಿಂತ ಪ್ರೀತಿಗೆ ಕೇಳಿಸಿತು. ಪ್ರೀತಿಗೆ ಧಾವಂತ ಒತ್ತರಿಸಿಕೊಂಡು ಬಂತು..! ಒಮ್ಮೆಗೆ ಬೇಸರವುಂಟಾಗಿ ಮೌನವಹಿಸಿ ಹೊಂಗೆ ಮರದ ಬುಡದಡಿ ಹೋಗಿ ಸ್ವಲ್ಪ ಮಟ್ಟಿಗೆ ಪವಡಿಸಿತು. ಮಧ್ಯಾಹ್ನದ ಸಮಯ, ಸೂರ್ಯನ ತಾಪ ಮತ್ತಷ್ಟು ಬಿರುಸುಗೊಳ್ಳುತ್ತಿತು, ಹಣೆಯಿಂದ ಬಂದ ಬೆವರನ್ನು ಮರವು ತಂಪರಿಸಿತು. ಪ್ರಕೃತಿಯ ಮಾತನ್ನು ಕೇಳಿ ರೋಸಿಹೋಗಿತ್ತು ಪ್ರೀತಿ. ಹಾಗೆ ಸಣ್ಣಗೆ ಕಣ್ಣು ಮುಚ್ಚಿತು.
“ಅರೇಸ್ಕಿ…..! ಏನಾಯಿತು ಪ್ರೀತಿಗೆ?” ಅದರೆಡೆಗೆ ತನ್ನ ಪುಟ್ಟ ಪುಟ್ಟ ಹೆಜ್ಜೆಗಳನ್ನಿಡುತ ಬಂದ ಪ್ರಕೃತಿಗೆ ಪ್ರೀತಿಯ ಮುಖದಲ್ಲಿರುವ ಅಸಹನೆಯನ್ನು ಸೂಕ್ಷ್ಮವಾಗಿ ಗಮನಿಸಿ ಕೇಳಿತು “ಏನಾಯಿತು ನಿನಗೆ??? ಯಾರಾ ಹುಡುಗ, ಹುಡುಗಿ? ?ಈ ಸಮಯದಲ್ಲಿ ನೀನವರ ಬಳಿ ಇರಬೇಕಿತ್ತಲ್ಲ…? ಇಲ್ಲ್ಯಾಕಿದ್ಯಾ?? ಪ್ರಪಂಚದ ಎಲ್ಲಾ ಸಕಲ ಚರಾಚರ ವಸ್ತುಗಳ ಮಧ್ಯೆ ನೆಲೆಸಿರುವ ನಿನ್ನನ್ನು ಕಂಡರೆ ಎಂತಹವರಿಗು ಅಸೂಹೆ. ನೀನು ಮಾಡುತ್ತಿರುವುದು ಸರಿ ಇಲ್ಲ ಪ್ರೀತಿ. ತಪ್ಪು .. ನನಗೆ ಅವರಿಬ್ಬರನ್ನು ನೋಡಬೇಕಾದ ಪ್ರಸಂಗ ಬಂದಿದೆ, ನಡೆ ತೋರಿಸು” ಎಂದು ಅದನ್ನೊಮ್ಮೆ ಎಬ್ಬಿಸಿತು. ಈ ಎಲ್ಲಾ ಮಾತುಗಳು ಏಕಕಾಲಕ್ಕೆ ಪ್ರೀತಿಯ ಕಿವಿಗೆ ಬಿದ್ದ ಕೂಡಲೆ ಉಕ್ಕಿಬಂದ ಅಳುವನ್ನು ನಿತ್ತರಿಸಿಕೊಂಡು ಹೇಳಿತು. “ಅವರಿಬ್ಬರಿಂದ ನಾನು ದೂರವಾಗಿಲ್ಲ ಪ್ರಕೃತಿ, ಅವರೇ ನನ್ನಿಂದ ದೂರವುಳಿದರು. ಮೊದಲು ಅವಳು ಇವನನ್ನು ಬಿಟ್ಟು ಹೊರಟಳು. ನಂತರದ ದಿನಗಳಲ್ಲಿ ಅವರಿಬ್ಬರನ್ನೂ ಒಂದು ಮಾಡಲು ನಾನು ಶಕ್ತಿ ಮೀರಿ ಇನ್ನಿಲ್ಲದ ಪ್ರಯತ್ನ ಪಟ್ಟರು ಅವಳಲ್ಲಿ ಯಾವ ಬದಲವಣೆಯೂ ಆಗಿಲ್ಲ, ಇನ್ನು ಆತನ ಬಳಿ ಹೋದಾಗ ಹೇಳುವುದೆನೆಂದರೆ. ಅವಳಿಂದ ಬಂದ ಪ್ರೀತಿ ನೀನು ನನಗೆ. ಅವಳೇ ಇಲ್ಲ. ಮತ್ತೆ ನೀನ್ಯಾಕೆ ನನಗೆ. ಹೋಗು ಎಂದ. ಇಂಥ ಸಂಧಿಜ್ಞ ಪರಿಸ್ಥಿತಿ ನನಗೂ ಬಂದಿದೆಯಲ್ಲ” ಎಂದ ಪ್ರೀತಿ ಕಣ್ಣಲ್ಲಿ ನೀರರಿಯಿತು.

“ಕಾರಣವೇನು ” ಪ್ರಕೃತಿ ಕೇಳಿತು “ನನ್ನೇನ್ ಕೇಳ್ತೀಯಾ, ಅದೋ. ಅಲ್ ನೋಡು ಬ್ರಹ್ಮಣರ ಮನೆ ದಿಸೆಯಿಂದ ಕ್ರೈಸ್ತರ ಮನೆಕಡೆಗೆ ಬಾಡೂಟಕ್ಕೆ ಹೋಗುತ್ತಿರುವ ಆ ಜಾತಿಯನ್ನು ಕೇಳು. ತನ್ನ ಸ್ವಾರ್ಥಕ್ಕಾಗಿ ಎಷ್ಟೋ ಪ್ರೇಮಿಗಳ ಸಾವಿಗೆ ಕಾರಣಕರ್ತನಾಗಿ, ಅವನ ಹುಚ್ಚಾಟದಿಂದ ಮಾನಸಿಕವಾಗಿ ಕುಗ್ಗಿ ಖಿನ್ನತೆಗೊಳಗಾಗಿ, ಸಾಯಲು ಆಗದೆ ಬದುಕಲು ಆಗದೆ ನರಳಿಸಿ, ಅವರ ಮನೆಯ ದೀಪಗಳನಾರಿಸಿ, ಹೆತ್ತವರ ಕಣ್ಣಿರಿಂದ ತನ್ನ ಬಾಯಾರಿಕೆ ನೀಗಿಸಿಕೊಂಡು ನಾನೇ ಸರಿ ಎಂದು ಬೀಗುತ್ತಾ ಹೋಗ್ತಾ ಇದ್ದೆಯಲ್ಲ. ಪ್ರೇಮಿಗಳ ದೃಷ್ಟಿಯ ಪರಮವೈರಿ ‘ಜಾತಿ’ ಅವನನ್ನು ಕೇಳು…” ಪ್ರೀತಿ ಅಬ್ಬರದಿಂದ ಹೇಳಿ ಮಾತನ್ನು ತುಂಡರಿಸಿ ಹೊರಟಿತು.

ಇತ್ತ ಪರಾಕಾಷ್ಠೆ ಗೊಂಡ ಪ್ರಕೃತಿ “ಹೇ ಜಾತಿ ಬಾ ಇಲ್ಲಿ” ಎಂದು ಗಂಟಲರಿಯುವಂತೆ ಅರಚಿತು. ಪ್ರಕೃತಿಯ ಕೂಗಳತೆಯಲ್ಲಿದ ಜಾತಿ ಹುಬ್ಬೇರಿಸಿ ಹೆಬ್ಬೆಟ್ಟಿನ ಉಗುರು ಕಡಿಯುತ್ತ ಯೋಚಿಸಿತು. “ಪ್ರಕೃತಿ ಯಾಕ್ ನನ್ನ ಕರಿತಾಇದೆ..?? ಸರಿ ಹೋಗಿ ಕೇಳೋಣ ಎಂದು ಅವನತ್ತಿರ ಬಂದು “ಏನ್ ಕೇಳು” ಅಂದಿತು. “ನಾ ವಕ್ಕಲಿಗ, ನಾ ಬ್ರಾಹ್ಮಣ, ನಾ ಕ್ಷತ್ರಿಯ, ನಾ ದಲಿತ, ನಾ ಲಿಂಗಾಯಿತ, ನಾ ಗಾಣಿಗ, ನಾ ಸಮಗಾರ. ಹೀಗೆ ಸಾಕಷ್ಟು ಹೆಸರೊಂದಿರೊ ನಿನಗೆ ಎಲ್ಲರನ್ನೂ ಒಗ್ಗಟಿನಲ್ಲಿ ಇರಿಸಲು ಸಾಧ್ಯವಿಲ್ವಾ?? ” ಅತ್ತ ನಿನಗಾಗಿ ಹೊಡೆದಾಡಿಕೊಂಡೇ ಸಾಯುತ್ತಾರೆ. ನೀನಿರೋದೆ ಹೀಗಾ?? ಅವತ್ತು ಪೂರ್ವಜರು ಬಿತ್ತಿಹೋದ ವಿಷಕಾರಿ ಬೀಜ ನೀನೇ ಜಾತಿ. ಇವತ್ತು ಹೆಮ್ಮರವಾಗಿ ಬೆಳೆದಿರುವೆ. ಯಕಃಶ್ಚಿತ್ ಸರಿ ತಪ್ಪು ವಿವೇಚಿಸೋ ವ್ಯವಧಾನ ನಿನಗಿಲ್ವಾ??” ಆ ಹುಡುಗಿ ಸ್ವಪ್ನಾಳಿಗೆ ಶ್ರೀಕಾಂತ್ ಓರ್ವ ಅತ್ಯಂತ ಸಮರ್ಥ ಹುಡುಗ. ಉಪ ಖಂಡದ ಪ್ರೇಮ ಇತಿಹಾಸ ಕಂಡ ನಿಶ್ಚಲವಾದ ಮನಸ್ಸು ಹೊಂದಿರುವ ಆಕಾರ. ಆದರೆ ಅವರ ವಿರೋಧಿ ನೀ. ಮತ್ಸರವಿಲ್ಲದ ಶ್ರೀಕಾಂತ ಅತ್ಯಂತ ಜಾತ್ಯಾತೀತ ಮನೋಭಾವದ ಹುಡುಗ ಎಂಬ ಸತ್ಯ ತಿಳಿದೂ ಯಾಕೆ ಅವರಿಬ್ಬರ ನಡುವೆ ತೂರಿದೆ??? ಅವನ ಪ್ರೀತಿ ಹುತಾತ್ಮವಾಗಿ ಮೂರು ವರ್ಷ ಕಳೆದಿದೆ.. ಇನ್ನಾದರೂ ಅವರಿಂದ ದೂರವಿದ್ದು ಅವರು ಒಂದಾಗುವುದಕ್ಕೆ ಮಾರ್ಗ ಹುಡುಕು” ಪ್ರಕೃತಿ ಕಣ್ಣಲ್ಲಿ ರಕ್ತ ಕೊತ ಕೊತ ಕುದಿಯುತ್ತಿತ್ತು.. ಪ್ರಕೃತಿಯ ಮಾತನ್ನು ಕೇಳಿದ ಜಾತಿ ದಢಕ್ಕನೆ ಕುಸಿದು ಬಿತ್ತು…. “ಕಣ್ಣಲ್ಲಿ ಎರಡು ಬೆರಳು ಒರೆಸುವಷ್ಟು ನೀರಿತ್ತು.

“ಅಲ್ಲಾ ಪ್ರಕೃತಿ, ಎಲ್ಲಾ ತಪ್ಪಿಗೆ ನಾನಾ ಹೊಣೆ? ಜಗತ್ತಿನಲ್ಲಿ ಧರ್ಮಗಳ ಝೇಂಕಾರ, ಧರ್ಮಗಳಲ್ಲಿ ಜಾತಿಗಳ ಝೇಂಕಾರ, ಜಾತಿಗಳಿಗೆ ಕೆಟ್ಟ ಹೆಸರು. ನನ್ನ ಹೆಸರಿಟ್ಟುಕೊಂಡು ಜನ ಎಲ್ಲಾ ತರ ನೀಚ ಕೆಲಸಗಳನ್ನು ಮಾಡುತ್ತ, ಮನುಷ್ಯತ್ವವನ್ನು ಮರೆತು, ಅವರವರಲ್ಲೆ ವೈರತ್ವ ಹುಟ್ಟಿಹಾಕುತ್ತ ಇಷ್ಟು ಅನಾಗರಿಕರಾಗಿದ್ದಾರಲ್ಲ. ಇದನ್ನು ಕೇಳುವವರಾರು ಪ್ರಕೃತಿ…? ಮಾಡದ ತಪ್ಪಿಗೆ ನನ್ನನ್ನು ಹುಡುಕಿಕೊಡು ಎಂದು ಆ ಶ್ರೀಕಾಂತ್ ಪ್ರೀತಿ ಹಿಂದೆ ಬಿದ್ದ. ನಾನು ಭಯಗೊಂಡು ಹಾಗೇ ಜಾರುತ್ತ ಉತ್ತರ ದಿಕ್ಕಿಗೆ ಬಂದೆ. ಆದರೂ ಸಹಜ ಯೋಚನೆ. ಇನ್ನೂ ಶ್ರೀಕಾಂತ ಸ್ವಪ್ನಾಳ ಪ್ರೀತಿಯನ್ನು ಹವಣಿಸುತ್ತಿರುವನೇ…??? ಎಂಥ ಹುಚ್ಚ ಮಾರ್ರೆ ಆತ… ಪ್ರಪಂಚ ಮತ್ತು ಕಾಲ ತುಂಬಾನೇ ವಿಶಲವಾಗಿದೆ, ಅವಳಿಗಿಂತ ಒಳ್ಳೆಯ ಹುಡುಗಿಯರು ಇದ್ದರು, ಕಾಯಬಹುದಿತ್ತು, ಪ್ರೀತಿ ಮಾಡಲಿಕ್ಕೆ ಜೀವಿತ ಕಾಲವೇ ಬಿದ್ದಿದೆಯಲ್ಲ.” ಎಂದು ವ್ಯಂಗ್ಯವಾಗಿ ನುಡಿಯಿತು.

ಇದ್ದನು ಕೇಳಿಸಿಕೊಂಡ ಪ್ರೀತಿ ಅದೆಲ್ಲಿತೋ ಏನೊ, ಓಡಿ ಬಂದಿತ್ತೇ “ಬೋಳಿಮಗನೆ, ನಿನಗೆ ಅವರಿಬ್ಬರನ್ನೂ ಒಂದು ಮಾಡಿ, ಅವರಿಂದ ದೂರಾಗು ಅಂತ ಪ್ರಕೃತಿ ಹೇಳಿತೆ ವಿನಃ ಅವರನ್ನೇ ದೂರ ಮಾಡುವ ಪ್ರಯತ್ನ ದಲ್ಲಿದಿಯ…?? ನಾನು ಪ್ರೀತಿ .ನನಗೆ ಸಾವಿಲ್ಲ, ನೀನು ಜಾತಿ ನಿನಗೆ ಖಂಡಿತ ಸಾವಿದೆ. ಹೋಗು ಪ್ರಕೃತಿಯ ವಿಕೋಪಕ್ಕೆ ನೀನು ಬಲಿಯಾಗಲು ಹೆಚ್ಚು ಸಮಯ ಬೇಕಿಲ್ಲ… ” ಜಾತಿ ಹೆದರಿ ಸ್ತಬ್ಧವಾದಂತೆ ನಿರುತ್ತರವಾಯಿತು. ಪ್ರಕೃತಿ ಪ್ರೀತಿಯನ್ನು “ಹೋಗಲಿ ಬಿಡು ಇದರಲ್ಲಿ ಅದರ ತಪ್ಪೇನು ಇಲ್ಲ. ಹಾಃ ಇಷ್ಟಕ್ಕು ಎಲ್ಲಿ ಆ ಹುಡುಗ, ಹಾಗು ಹುಡುಗಿ ನಾನವರನ್ನು ನೋಡಲೇ ಬೇಕು. ಕೆರದುಕೊಂಡು ನಡೆ ಎಂದಿತು” ಅಲ್ಲಿಂದ ಜಾತಿ, ಪ್ರೀತಿ, ಪ್ರಕೃತಿ ಹೊರಟು ಶ್ರೀಕಾಂತನಿದ್ದ ಫ್ರೀಡಂ ಪಾರ್ಕನ ಒಳ ಬಂದು ನೋಡಿದರು. ಆತ ಯಾರೊಟ್ಟಿಗು ಮಾತನಾಡದೆ ಸುಮ್ಮನಿದ್ದ. ಪ್ರಕೃತಿ ಅವನ ಸ್ಥಿತಿ ಗತಿಯನ್ನು ಆಲಿಸಿ ಅವನ ಜತೆ ಮಾತನಾಡಲು ಗಾಳಿಯನ್ನು ಕಳಿಸಿತ್ತು. ಸೂಯ್….. ಎಂದು ಬೇವಿನ ಮರದಿಂದ ಬೀಸಿ ಬಂದ ಗಾಳಿ ಅವನ ಬುಜ ತಾಕಿ ಅವನ ಸುತ್ತುವರೆದು ಕೇಳಿದ ಪ್ರಶ್ನೆ “ಶ್ರೀಕಾಂತ, ಏನೋ ಒಬ್ಬನೇ ಇದ್ಯ, ಸ್ವಪ್ನ ಎಲ್ಲಿ??
ಶ್ರೀಕಾಂತ ತಣ್ಣಗಿನ ದನಿಯಲ್ಲಿ ಹೇಳಿದ “ತಂಗಾಳಿಯಲ್ಲಿ ಅವಳನ್ನು ನನ್ನೆದುರಿಗೆ ತಂದು ನಿಲ್ಲಿಸಿ, ಕ್ಷಣಕಾಲ ಕಣ್ಣರಳಿಸಿ ನೋಡುವಷ್ಟರಲ್ಲಿ ಬಿರುಗಾಳಿಯಾಗಿ ಅವಳನ್ನು ಕರೆದುಕೊಂಡು ಹೋದ ನೀನು ನನ್ನ ಈ ಪ್ರಶ್ನೆ ಕೇಳಕೂಡದು.”
ಗಾಳಿ ಮರುತ್ತರ ಕೊಡದೇ ಹಾಗೇ ಹೊರಟಿತು. ಪ್ರಕೃತಿ ಕೇಳಿತು “ಸ್ವಪ್ನ ಎಲ್ಲಿ ನಡಿ ,ಅವಳನ್ನು ತೋರಿಸು” ಎಂದು ಪ್ರೀತಿಯನ್ನು ಕೇಳಿತು. “ಅವಳ ಬಳಿ ನನಗೆ ನಿರ್ಬಂಧವಿದೆ. ನಾನು ಬರಲು ಸಾಧ್ಯವಿಲ್ಲ. ನೀನು ಜಾತಿ ಇಬ್ಬರೇ ಹೋಗಿ. ” ಪ್ರೀತಿ ಎಂದಿತು. ಜಾತಿ ಕೂಡ ಒಲ್ಲೆ ಎಂದಿತು. ಪ್ರಕೃತಿಯ ಮನಸ್ಸಿನಲ್ಲಿ ತುಮುಲಗಳ ಅಲೆಗಳು ಹರಿದಾಡುತ್ತಿತು. ಹೋಗಲಿ ಬಿಡಿ, ಅವಳೆಂಥ ಹುಡುಗಿ. ಪ್ರೀತಿ ಹೇಳಿತು, “ಸ್ವಪ್ನ. ಮುದ್ದು ಮುಖದ ಛಾಯೆ. ಬಂಗಾರದ ಹುಡುಗಿ. ವಿಶಾಲವಾದ ಮನಸ್ಸಿನಲ್ಲಿ ವಿವೇಕನೇ ಶಾಶ್ವತವಾಗಿ ಇರಲು ಅನುವುಮಾಡಿದ್ದಳು. ಅವಳ ತೀಡಿದ ಮುಖಕ್ಕೆ ಮೇಕಪ್ ಬೇಡ, ಒಮ್ಮೆ ನೋಡಿದ ಮೇಲು ಕದ್ದು ನೋಡೋಣ ಅನಿಸುವ ಸಹಜ ಸುಂದರಿ, ಅವಳು ಇಬ್ಬನಿಯ ಹಾಗೆ. ಕಾಲ ಉರುಳಿದರು ಅವಳು ಮಾತ್ರ ವಿವೇಕನ ಮನದಲ್ಲಿ ಹರಿಯುತ್ತಲೇ ಇದ್ದಾಳೆ. ಅಹಂಕಾರ, ಗತ್ತು, ದರ್ಪ, ಇದ್ಯಾವುದೂ ಇಲ್ಲದ ಕೃತಿ ಆಕೆ. ಅದೋ ನೋಡು. ಅಲ್ಲಿ ಬಂದಳು” ಜಾತಿ ಮರೆಯಾಯಿತು, ಪ್ರೀತಿ ಹಾರಿಹೋಯಿತು.

ಪ್ರಕೃತಿ ಅವಳನ್ನು ಸಂದರ್ಶಿಸಲು ಮಳೆಯನ್ನು ಕಳಿಸಿತು. ತುಂತುರು ಮಳೆಯ ಸಿಂಚನ ಅವಳ ಕೊರಳ ಇಳಿಜಾರಿನಲ್ಲಿ ಸುರಿದು ಕೇಳಿತು, “ಸ್ವಪ್ನ, ಎಲ್ಲಿ ಶ್ರೀಕಾಂತ? ಒಬ್ಬಳೇ ಮಳೆಯಲ್ಲಿ ನೆನಿತಾಇದ್ಯ, ಎಲ್ಲಿದ್ದಾನೆ ಅವನು” ಮಳೆಯ ಪ್ರಶ್ನೆಗೆ ಸ್ವಪ್ನಾಳ ಉತ್ತರ “ಅವನು ನನ್ನ ನೆನಪಿನಲ್ಲಿದಾನೆ” ಎಂದು ಹೊರಟುಬಿಟ್ಟಳು… ಪ್ರಕೃತಿಯ ಮುಖದಲ್ಲಿ ಹೇಳಲಾರದ ಅಸಂತುಷ್ಟ … ಕಡೆಗೆ ಪ್ರಕೃತಿ “ಶ್ರೀಕಾಂತನನ್ನು ಒಮ್ಮೆ ಮಾತನಾಡಿಸಿ ಬರುವೆ ಎಂದು ” ಅವನಿದ್ದ ಸ್ಥಳಕ್ಕೆ ಬಂದು. “ಮುಂದೇನು ಶ್ರೀಕಾಂತ್? ಅವಳನ್ನು ಆ ಪರಿ ಪ್ರೀತಿ ಮಾಡಿದ್ದೆಯಲ್ಲ, ಈಗೇನಾಯ್ತು?? ನಿನ್ನ ಅವಳ ಕುರಿತಂತೆ ನಾನು ಜಾತಿ ಮತ್ತು ಪ್ರೀತಿ ಗಾಢವಾಗಿ ಚರ್ಚಿಸಿದೆವು. ನಮ್ಮ ಮನದಲ್ಲಿ ತುಮುಲಗಳೆದ್ದವು. ಒಂದೇ ಪ್ರಶ್ನೆ ಕೇಳ್ತೀನಿ ಶ್ರೀಕಾಂತ್. ನಿಜವಾಗಿಯೂ ಅವಳನ್ನು ಪ್ರೀತಿ ಮಾಡಿದೇಯಾ?? ನಿನ್ನ ಪ್ರೀತಿ ಸಡಿಲವಾಗಿಸಲು ಇನ್ನಿಲ್ಲದ ಪ್ರಯತ್ನ ಪಟ್ಟರು ಯಾವುದೇ ಸಮಾಧಾನದ ಫಲಿತಾಂಶ ಸಿಕ್ಕಿಲ್ಲ. ಇನ್ನೂ ಅವಳ ಬರುವಿಕೆಯನ್ನೆ ಹಾತೊರೆದು ಕಾಯ್ತಾ ಇದ್ದೀಯಾ ಅಲ್ಲ, ಇದು ಹುಚ್ಚುತನವೊ, ಹಾದರವೊ ಹುಡುಗಾಟವೊ, ಪ್ರೇಮದ ಬಂಧನವೊ….? ಶ್ರೀಕಾಂತನಿಂದ ಒಂದು ಸಣ್ಣ ಪ್ರತಿರೋಧವು ಬರುವುದಿಲ್ಲ . ಕಣ್ಣು ಮುಚ್ಚಿ ತಲೆ ಕೆಳಗೆ ಮಾಡಿ ಮುಖ ಸಣ್ಣಗೆ ಮಾಡುತ್ತ ಪ್ರೀತಿಯ ಕಡೆ ತಿರುಗಿ ಕಣ್ಣೀರಿಟ್ಟ. ಅವನ ಕಣ್ಣೀರಲೇ ಉತ್ತರ ಕಾಣುತ್ತಿತ್ತು . ಮುಗಿದ ಅಧ್ಯಾಯವೆಂದು ..

  • ವಿವೇಕ್ ಮಂಡ್ಯ

Download Android App Now Click Here 

Like us on Facebook  The New India Times

www.facebook.com/thenewindiantimes

TNIT Whats App No : 97316 23333

Send Your Stories to : tnitkannada@gmail.com

ಪಾಲಕ್ಕಾಡ್‌ನಲ್ಲಿ ಮದಗಜದ ರಂಪಾಟ..! ವಿಡಿಯೋ ವೈರಲ್

Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!

ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!

ಬೆಂಗಳೂರಲ್ಲಿ ಕನ್ನಡ ಮಾತನಾಡೋರು 34% ಮಾತ್ರ..! ಕನ್ನಡ ಮಾಯವಾಗ್ತಿದೆ…ರಾಜಧಾನಿಯಲ್ಲಿ ಕನ್ನಡ ನಶಿಸಿ ಹೋಗ್ತಿದೆ..!

ತಣ್ಣಗಿದ್ದ ಬೆಂಗಳೂರು ಯಾಕೆ ಹೀಗೆ ಉರೀತಿದೆ..?! ಬೆಂಗಳೂರಿನಲ್ಲಿ ದಾಖಲೆಯ ತಾಪಮಾನ ಏರಿಕೆ..!

Share post:

Subscribe

spot_imgspot_img

Popular

More like this
Related

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..?

ಸಿಎಂ ಬದಲಾವಣೆಯ ಕುರಿತು ರಣದೀಪ್ ಸುರ್ಜೇವಾಲ ಹೇಳಿದ್ದೇನು..? ಬೆಂಗಳೂರು: ಕರ್ನಾಟಕ ಸಿಎಂ ಬದಲಾವಣೆಯ...

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ

ಕರ್ನಾಟಕದಾದ್ಯಂತ ಮಳೆ ಚುರುಕು: ಅಕ್ಟೋಬರ್ 9ರವರೆಗೂ ಮುನ್ಸೂಚನೆ ಕರ್ನಾಟಕದಾದ್ಯಂತ ಮತ್ತೆ ಮಳೆ ಚುರುಕುಗೊಂಡಿದ್ದು,...

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ

ಸ್ವರ್ಣಪ್ರಿಯರಿಗೆ ಕೊಂಚ ನಿರಾಳ: ಚಿನ್ನದ ದರದಲ್ಲಿ ಇಂದು ಇಳಿಕೆ ನಾಡಿನ ದೊಡ್ಡ ಹಬ್ಬಗಳಾದ...

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ

ಮೈಸೂರು ದಸರಾ ಜಂಬೂಸವಾರಿಗೆ ಸಿದ್ದರಾಮಯ್ಯ ಚಾಲನೆ ಮೈಸೂರು: ಜಗತ್ ಪ್ರಸಿದ್ಧ ಮೈಸೂರು ದಸರಾ...