5ಭಾಷೆಗಳಲ್ಲಿ ರಿಲೀಸ್ ಆಗಿ ಸಖತ್ತಾಗಿ ಅಬ್ಬರಿಸಿ ಬೊಬ್ಬೆರೆದ ಸಿನಿಮಾ ಕೆಜಿಎಫ್. ಇದಕ್ಕು ಮೊದಲು ಉಗ್ರಂ ಎಂಬ ಒಂದೇ ಒಂದು ಸಿನಿಮಾ ಮಾಡಿ ಭರವಸೆ ಮೂಡಿಸಿದ್ದ ಪ್ರಶಾಂತ್ ನೀಲ್ ಈ ಕೆಜಿಎಫ್ ನ ಡೈರೆಕ್ಟರ್. ಮೊದಲ ಚಿತ್ರ ಉಗ್ರಂ ಮೂಲಕ ಕನ್ನಡ ಚಿತ್ರರಂಗಕ್ಕೆ ಮತ್ತು ಒಂದು ಹಂತದ ಮಟ್ಟಿಗೆ ದಕ್ಷಿಣ ಭಾರತದಲ್ಲಿ ಹೆಸರು ಗಳಿಸಿದ ಪ್ರಶಾಂತ್ ನೀಲ್. ಕೆಜಿಎಫ್ ಮೂಲಕ ಭಾರತದಾಚೆಗೂ ಹೆಸರಾದರು. ರಾಕಿಂಗ್ ಸ್ಟಾರ್ ಯಶ್ ನ್ಯಾಷನಲ್ ಸ್ಟಾರ್ ಆಗಲು ಕೆಜಿಎಫ್ ಕಾರಣವಾಯ್ತು.
ಕಳೆದ ಡಿಸೆಂಬರ್ ನಲ್ಲಿ ಕೆಜಿಎಫ್ ರಿಲೀಸ್ ಆದ ಮೇಲೆ ಕೆಜಿಎಫ್ 2 ಯಾವಾಗ ಬರುತ್ತದೆ ಎನ್ನುವ ಕುತೂಹಲ ಜನರದ್ದು. ಇದು ಟ್ರೇಲರ್..ಸಿನಿಮಾ 2 ಸೀಕ್ವೆಲ್ ನಲ್ಲಿದೆ ಎಂದು ಕೆಜಿಎಫ್ ಟೀಮ್ ಹೇಳಿದ್ದು ಈ ಬಗ್ಗೆ ಕುತೂಹಲ ಗರಿಗೆದರಿದೆ.
ಆದರೆ, ಸಿನಿಮಾ ಶೂಟಿಂಗ್ ಶುರುವಾಗಿಲ್ಲ. ಸಿನಿಮಾ ಶೂಟಿಂಗ್ ತಡವಾಗ್ತಾ ಇರುವುದಕ್ಕೆ ಅಸಲಿ ಕಾರಣ ಏನು?
ರಾಕಿಂಗ್ ಸ್ಟಾರ್ ಯಶ್ ಮಂಡ್ಯದಲ್ಲಿ ಸುಮಲತಾ ಪರ ಪ್ರಚಾರದಲ್ಲಿ ಬ್ಯುಸಿ ಇರುವುದು ಎಂದು ಹೇಳಲಾಗಿತ್ತು. ಆದರೆ, ಕಾರಣ ಅದಲ್ಲ ಇನ್ನೂ ಶೂಟಿಂಗ್ ಸೆಟ್ ರೆಡಿ ಆಗುತ್ತಲೇ ಇದೆ ಎಂದು ತಿಳಿದುಬಂದಿದೆ. ಅದ್ಧೂರಿ ಸೆಟ್ ತಡವಾಗುತ್ತಿರುವುದರಿಂದ ಸಿನಿಮಾ ಚಿತ್ರೀಕರಣ ಶುರುವಾಗಿಲ್ಲ. ಆದಷ್ಟು ಬೇಗ ಕೆಜಿಎಫ್ ಧೂಳಲ್ಲಿ ರಾಕೀಭಾಯ್ ಅಬ್ಬರ ಮತ್ತೊಮ್ಮೆ ನಡೆಯುತ್ತದೆ.
ಆದಷ್ಟು ಬೇಗ ರಾಕೀಭಾಯ್ ಆರ್ಭಟ ಶುರುವಾಗಲಿ ಎನ್ನುವುದೇ ಅಭಿಮಾನಿಗಳ ಆಶಯ.