“ನಿನ್ನ ಪ್ರೀತಿ ಎಷ್ಟೂ ಎತ್ತರವೋ, ನಾನಾ ಪ್ರೀತಿಗೆ ಅಷ್ಟೇ ಹತ್ತಿರ ಕಣೋ” ಗದ್ಗದಿತಳಾಗಿ ಹೇಳಿದಳು ಆ ತರುಣಿ.
ಅವಳ ಮಾತು ಹೀಗೆ ಅವನ ಕಿವಿಯಲ್ಲಿ ಸಿಕ್ಕಿ ಹಾಕಿಕೊಂಡಿತ್ತು. ಆ ಮಾತುಗಳನ್ನು ಹಾಡಿನ ರೀತಿ ಹೆಡ್ ಫೋನ್ ಇಲ್ಲದೆಯೇ ಶತಾಯ ಗತಾಯ ಹೆಚ್ಚು ಬಾರಿ ಸುಖ ಸುಮ್ಮನೆ ಕೇಳಿದುಂಟು. ಆಗೆಲ್ಲ ತಲೆಯನ್ನು ಆ ಕಡೆ ಈ ಕಡೆ ಅಲ್ಲಾಡಿಸುತ್ತ ತೃಪ್ತಿ ಪಡುತ್ತಿದ್ದ. ಅವನ ಕರ್ಚೀಫ್ ತುದಿ ಕಣ್ಣೀರಿನ ಒಗರನ್ನು ನೋಡುತ್ತಿತ್ತು. ಅದರ ತೂಕ ಗ್ರಾಂ ಲೆಕ್ಕಾನ? ಲೀಟರ್ ಲೆಕ್ಕಾನಾ ಎಂದು ಅಳೆದು ನೋಡುವಷ್ಟರಲ್ಲಿ ಕರ್ಚೀಫ್ ಒಗೆಯಲು ಹಾಕುತ್ತಿದ್ದನು. ಹೀಗೆಲ್ಲ ಕರ್ಚೀಫ್ ಬದಲು ಹಾಡುಗಳ ಮೊರೆಹೋಗುವುದನ್ನು ರೂಢಿ ಮಾಡಿಕೊಂಡಿದ್ದಾನೆ. ಎಷ್ಟು ಹಾಡಿದರೇನು, ಕೇಳಿದರೇನು? ಬದುಕಿನ ಮ್ಯೂಸಿಕ್ ಹಾಲ್ ನಲ್ಲಿ ಪ್ರತಿ ಹಾಡು ಯುಗಳ ಗೀತೆಗಳನ್ನೇ ಹಾಡಿಸುತ್ತಿರುತ್ತವ, ಪ್ರಸ್ತಾಪಿಸುತ್ತಿರುತ್ತವಾ? ಯೆಥೆಚ್ಚವಾಗಿ ಹಾಡಿಸಿದ್ದು ಚರಮಗೀತೆಯನ್ನು. ಅದು ಕೂಡ ವಿತ್ ಸ್ಪೆಷಲ್ ಕ್ಲಾಸ್. “ಆದ್ರೆ ನಿನ್ನ ಫೇವರೇಟ್ ಹಾಡು ಯಾವುದಂಥ ಕೇಳಿದರೆ” ಮಾತ್ರ ಉದ್ಗಾರ ಗಂಟಲಾಳದಲ್ಲೇ ಕಣ್ಣೀರನ್ನು ಚಿವುಟಿ ಬಿಸಾಡುತ್ತೆ.
ಅವನ ಮನದ ಕ್ಷಣಭಂಗುರ ಪ್ರೀತಿ ಹುಟ್ಟಿದಂತೆಯೇ ಹುಟ್ಟಿ ಇನ್ನೇನು ಘನಗೊಂಡಿತು ಅಂದುಕೊಳ್ಳುವಷ್ಟರಲ್ಲಿ ಅದೆಲ್ಲಿ ಹೋದಳೋ ಆ ಅನುರೂಪ ಸುಂದರಿ…?
ಆತನ ಜೀವನದಲ್ಲಿ ಮೊಟ್ಟ ಮೊದಲ ಬಾರಿಗೆ ತುಂಬ ನೊಂದುಕೊಂಡ ಘಳಿಗೆ ಅದು. ಹತಾಶನಾಗಿ, ಖಿನ್ನನಾಗಿ ಹೋಗಿದ್ದ. ಮನಸ್ಸನ್ನು ಚಡಪಡಿಕೆಗಳಿಂಡ ಲಾಠಿ ಚಾರ್ಜ ಮಾಡಿ ಮೆತ್ತಗೆ ಮಾಡಿತ್ತು.
ಅಂಥ ಸಂದರ್ಭಗಳಲ್ಲಿ ಮನಸ್ಸನ್ನು ಮಲಗಿಸಬೇಕು ಅಂತ ಅತನಿಗೆ ಅನ್ನಿಸಿತು. ಅದಕ್ಕೊಂದು ಲಾಲಿ ಕೇಳಿಸಬೇಕು ಅಂತಲೂ ಅನ್ನಿಸಿತು. ‘ಸ್ವಾತಿಮುತು’ ಸಿನಿಮಾದ ‘ಶ್ರೀ ಚಕ್ರ ಧಾರೆಗೆ ಶಿರಬಾಗಿ ಲಾಲಿ’ ಹಾಕಿದ. ಹೆಚ್ಚೆಂದರೆ ಮೂರುವರೆ ನಿಮಿಷ. ಮನಸ್ಸಿನ ಒಂದು ಕಾಲನ್ನು ಹೃದಯದ ಮೇಲೆ ಹಾಕಿಕೊಂಡು, ತನ್ನ ಕೈಯಿಂದ ಅವಚಿಕೊಂಡು ಉಮ್ಮಳಿಸಿ ಬಂದ ಕಣ್ಣೀರನ್ನು ಅದುಮಿಟ್ಟು ಹಿತವಾದ ನಿದ್ರೆಗೆ ಜಾರಿಯೇ ಬಿಡುತ್ತಿತ್ತು ಮನಸ್ಸು. ನಿಧಾನವಾಗಿ ಎದ್ದು ಹಾಡು ನಿಲ್ಲಿಸುತ್ತಿದ. ಆ ಕ್ಷಣ ಮನಸ್ಸಿಗೇನೋ ಲಾಲಿ ಹಾಡೇಳಿಸಿ ಮಲಗಿಸಿದ, ಕಣ್ಣುಗಳೇನು ಪಾಪಾ ಮಾಡಿದ್ದವು? ಎಂದನ್ನಿಸಿ ಅವುಗಳನ್ನು ಮಲಗಿಸಬೇಕು ಎಂದು ಅವನು ಮತ್ತು ಅವಳು ಮಾತನಾಡಿದ ಆಡಿಯೋ ಕ್ಲಿಪ್ ಒಂದಿತ್ತು.
“ಮುದ್ದು, ಬಂಗಾರಿ, ಬುಜ್ಜಿ, ಪಾಪು, ಚಿನ್ನ, ಬೆಳ್ಳಿ , ತಗಡು” ಅಂತೆಲ್ಲ ಆರಂಭಿಸಿ, ಏನೇ ಆಗಲಿ ನಾನು ತಲೆ ಕೆಡಿಸಿಕೊಳ್ಳೋದಿಲ್ಲ, ನನಗೆ ನೀನು ಬೇಕು ನಾನು ನಿನ್ನೇ ಮದುವೆ ಆಗೋದು ಅಂತ ಶುದ್ಧವಾಗಿ ತಡವರಿಸದೆ ಸ್ಪುಟವಾಗಿ ಮಾತುಗಳನ್ನು ಆಡಿದಳು, ಜೀವನದ ಭವಿತವ್ಯದ ಕುರಿತಾದ ಮಾತುಗಳನ್ನೂ ಸರಾಗವಾಗಿ, ಲಯಬದ್ಧವಾಗಿ ಹೇಳಿ ಮುಗಿಸುತ್ತಿದ್ದಂತೆ ಮತ್ತೊಂದು ವಿಚಾರದ ಪ್ರಸ್ತಾಪ.
ಆ ಆಡಿಯೋ ದರ ವಯಸ್ಸು ಅಜಮಾಸು ಹನ್ನೆರಡು ವರುಷ. ಅದರ ಡ್ಯೂರೇಷನ್ ಸರಿ ಸುಮಾರು ಅರ್ಧ ಗಂಟೆಯಷ್ಟು! ಅದನ್ನು ಪ್ಲೇ ಮಾಡಿ ಇಯರ್ ಫೋನ್ ಹಾಕಿಕೊಂಡು ‘ನೆನಪುಗಳ ಸುತ್ತ ಓಡಾಡಿ ಬಾ’ ಎಂದು ಮಲಗಿಸಿದ. ಕಿವಿಗಳಿಂದ ಆ ಆಡಿಯೋ ಕ್ಲಿಪ್ಅನ್ನು ದೂರವಿರಿಸಲು ಅವನ ಮನಸ್ಸು ಸಿದ್ಧವಾಗಲಿಲ್ಲ. ಅವಳ ದ್ವನಿಯಲ್ಲಿದ್ದ ಪುಟ್ಟ ದಿವ್ಯ ಸನ್ನಿಧಿಯ ಗಂಟೆಯ ಉನ್ಮಾದ ನಡುಗುವಂತೆ ಮಾಡುತ್ತಿತ್ತು. ಒಮ್ಮೆ ರಿವೈಂಡ್ ಮಾಡೋಣವೆನ್ನಿಸಿದರೂ ಕಣ್ಣು, ಮನಸ್ಸು ಹಾಡಿನೊಂದಿಗೆ ಮಲಗಿದ್ದನ್ನು ಖಾತ್ರಿ ಪಡಿಸಿ ಆಡಿಯೋವನ್ನು ಮರು ಪ್ಲೇ ಮಾಡುತ್ತಿದ್ದ. ಛಟ್ಟನೆ ಕಣ್ಣು ತೆರೆಯಿತು, ಮನಸ್ಸು ಕಂಪಿಸಿತು. “ಜಗತ್ತಿನ ಯಾವ ದುಬಾರಿ ಮ್ಯೂಸಿಕ್ ಗೆ ಇದೆ ಆ ತಾಕತ್ತು?” ಎಂದು ಸ್ವಗತ ಹೇಳಿಕೊಂಡು ಕಣ್ಣೀರಾಗುತ್ತಿದ್ದ.
ಅವಳಂತು ಇಲ್ಲ. ಅವಳ ಪ್ರೀತಿ ಇದೆಯಲ್ಲಾ? ಅದರೊಂದಿಗೆ ಇಡೀ ಜೀವನ ತೂಗೋಣವೆನ್ನಿಸಿತ್ತು. ಜೂಕುಯ್ಯಾಲೆ ರೆಡಿಯಾಗಿದೆ. ಮೆಲ್ಲಗೆ ಪ್ರೀತಿಯನ್ನು ಎದೆಯ ಮೇಲೆ ಮಲಗಿಸಿದ. ಎಲ್ಲ ಬಟ್ಟೆ ತೆಗೆದು, ಆಲಿವ್ ಆಯಿಲ್ ಇಡೀ ದೇಹಕ್ಕೆ ಹಿತವಾಗಿ ಸವರಿ, ಅದಗೊಂಚೂರೂ ನೋವಾಗದ ಹಾಗೆ ಮಸಾಜ್ ಮಾಡುತ್ತಿದ್ದ. ಪ್ರೀತಿಯ ನೀಳವಾದ ಕೈ ಕಾಲುಗಳಿಗೆ ಎಣ್ಣೆ ಸವರಿ ಹಿತವಾಗಿ ಎಳೆಯುತ್ತಿದ್ದರೆ ಕೂಸಿನಂಥ ಪ್ರೀತಿ ತುಂಬ ರಿಲ್ಯಾಕ್ಸ್ ಆಗುತ್ತಿತ್ತು. ಅರ್ಥಾತ್ ಮಗುವಿನಂತೆ ಜೋಪಾನ ಮಾಡುತ್ತಿದ್ದ. “ನೀನೊಳ್ಳೆ ತಿಕ್ಕಲ್ ನನ್ಮಗ ಕಣೋ” ಅಂತ ಗೆಳೆಯರು ಅಣಕಿಸುತ್ತಿದ್ದರು.
ಜಗತ್ತಿನ ಪ್ರಕಾರ, ಹುಡುಗ ಅಂದರೆ, ಹುಡುಗಿಯನ್ನು ಪ್ರೀತಿಸಿ, ಮದುವೆಯ ಮುಂಚೆಯೇ ಹೆರಿಗೆಗೆ ರೆಡಿ ಮಾಡಿ ಕೈ ಬಿಡುವಂಥ ಧೀರನಾ? ಅಂಥ ಅವರನ್ನು ನಿಲೆ ಹಾಕಿ ಕೇಳಬೇಕೆನ್ನಿಸುತ್ತಿತಂತೆ. ಅವರು ಅದಕ್ಕೆ ಅರ್ಹರಲ್ಲ ಅಂದುಕೊಂಡು ಸುಮ್ಮನಾಗುತ್ತಿದ್ದ. ಅವನ ಲೆಕ್ಕ ಪ್ರೀತಿ ಅಂದರೆ ಮಗು. ಅದಕ್ಕೆ ಮಸಾಜ್ ಮಾಡೋದು, ಸ್ನಾನ ಮಾಡಿಸೋದು, ಮೈ ಒರೆಸೋದು, ಚೂರು ಸಾಂಬ್ರಾಣಿ ಹಾಕೋದು, ಮನಸ್ಸಿನ ಜೋಕುಯ್ಯಾಲೆಯಲ್ಲಿ ಆಡಿಸಿ, ಎತ್ತಿಕೊಂಡು ತಿರುಗಾಡೋದು, ತೊಟ್ಟಿಲು ತೂಗೋದು ಮುಂತಾದ ಕೆಲಸಗಳಲ್ಲಿ ಪಾರ್ಟಿಸಿಪೇಟ್ ಮಾಡಿ ನೋಡ್ರೋ, ಅದೊಂದು ಅದ್ಭುತ ಅನುಭವ ಅಂತ ಹೇಳುತ್ತಿದ್ದ. ಆ ಮಗುವಿಗೆ ವಯಸ್ಸು ಅಂತೇನಿಲ್ಲ. ಎಷ್ಟಾದರೇನು? ಮಗು ಅಷ್ಟೆ. ಅದು ಆಳೆತ್ತರ ಬೆಳೆದು ಎದುರಿಗೆ ನಿಂತಾಗ ಸುಮ್ಮನೆ ಪ್ರಯತ್ನಿಸಿ ನೋಡಿ? ಬೇರೆ ಯಾರ ಮಾತು ಕೇಳದೆ ತನ್ನಿಚ್ಛೆ ಯಂತೆ ಸಿಕ್ಕ ಸಿಕ್ಕವರೊಂದಿಗೆ ತಿರುಗುತ್ತಿರುತ್ತದೆ. ವೇಶ್ಯೆ ಎಂದು ಕರಾರುವಾಕ್ಕಾಗಿ ಹೇಳಲಾರೆ. ಅವನ ಈ ಮಾತಿಗೆ, ಅನುಭವಕ್ಕೆ ಅವನಲ್ಲಿ ಯಾವುದೇ ಮಹಾನ್ ಸೈಂಟಿಫಿಕ್ ಸಾಕ್ಷ್ಯವಿಲ್ಲ. ಆದರೆ ಅನುಭವ? ಅವನ ಪ್ರೀತಿ ಈಗ ಹನ್ನೆರಡರ ವರ್ಷದ ಆಸುಪಾಸಿನಲ್ಲಿದೆ. ಅದರೊಂದಿಗೆ ಅವನ ಸಂಬಂಧ ವಂಡರ್ ಫುಲ್ ಬಿಯಾಂಡ್ ಸೈನ್ಸ್ ಅದು ಅವನಿಂದ ಏನೇನೂ ಮುಚ್ಚಿಡುವುದಿಲ್ಲ. ಯಾವುದಕ್ಕೂ ಹಿಂಜರಿಯುವುದಿಲ್ಲ ಅವರಿಬ್ಬರು ಅನ್ನ್ಯೂನ್ಯ ಗೆಳೆಯರು.. ಮೊನ್ನೆ ಕೂಡ ಪ್ರೇಮಿಗಳ ದಿನಾಚರಣೆ ಇತ್ತು. ಅವಳ ಕುರಿತಾದ, ಪ್ರೀತಿ ಕುರಿತಾದ ಒಂದು ಹಾಡು ಪ್ಲೇ ಮಾಡು ಅನ್ನುತ್ತಿತ್ತು.
“ಈ ಪ್ರೀ…ತಿ ಯಾಕೆ… ಭೂ….ಮಿ ಮ್ಯಾಲೆ…
ಮಣ್ಣಾ….ದರೆ.. ಈ ಪ್ರೀತಿ ಇಲ್ಲೆ..”
ಎಂಬ ಹಾಡನ್ನು ಹಾಕುತ್ತಿದ್ದ.
ಅದಕ್ಕಿಂತ ಮುಂಚೆಯೇ ಒಂದು ಹಾಡನ್ನು ಸ್ವತಃ ತಾನೇ ಹಾಡಿದ್ದ. ಅವು ಅಷ್ಟೇನೂ ‘ಓಹೋಃ’ ಎನ್ನುವಂತಿಲ್ಲ. “ಇಷ್ಟೇನಾ ನಿನ್ನ ಯೋಗ್ಯತೆ ‘ಎಂಬಂತೆ ಆ ಪ್ರೀತಿ ನೋಡಿತು. ನಂತರ ಕೊಂಚ ರಿಫ್ರೆಶ್ ಆಗಿ ಈ ಹಾಡನ್ನು ಹಾಕಿದೆ ಇಟ್ ಫೆಲ್ಟ್ ವೆರಿ ಹ್ಯಾಪಿ. ನೀವು ಒಮ್ಮೆ ಅವನಂತೆ ಪ್ರಯತ್ನಿಸಿ ನೋಡಿ. ಮನಸ್ಸನ್ನು ಶಾಂತವಾಗಿರಿಸಿ.
- ವಿವೇಕ್ ಮಂಡ್ಯ
Download Android App Now Click Here
Like us on Facebook The New India Times
www.facebook.com/thenewindiantimes
TNIT Whats App No : 97316 23333
Send Your Stories to : tnitkannada@gmail.com
ಬೆಂಗಳೂರಿನಲ್ಲಿ ಇನ್ಮುಂದೆ ಓಲಾ ಬೈಕ್ ಟ್ಯಾಕ್ಸಿ..! ಪ್ರತಿ ಕಿ.ಮೀ.ಗೆ 2ರೂ ಮಾತ್ರ.. !
ವಾಟ್ಸ್ ಆಪ್ ನಲ್ಲಿ ನಗ್ನ ಫೋಟೋ ಶೇರ್ ಮಾಡಿದ ಅಧಿಕಾರಿ ಬಂಧನ.!
Job ಆಫರ್! 70 ದಿನ ಮಲಗಿದ್ದರೆ 12.17ಲಕ್ಷ!
ಕುಡುಕರು ಹಾಡಿದ ಪರಮಾತ್ಮನ ಮಹಿಮೆ..! ಈ ವೀಡಿಯೋ ನೋಡಿದ್ರೆ ನಗದೇ ಇರೋಕೆ ಸಾಧ್ಯನೇ ಇಲ್ಲ.!