2019ರ ಐಪಿಎಲ್ ಪ್ಲೇಯಿಂಗ್ ಇಲೆವೆನ್ ನಿಂದ ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ ಅವರನ್ನು ಕೈ ಬಿಟ್ಟಿದ್ದಕ್ಕೆ ಭಾರತ ತಂಡದ ಮಾಜಿ ಕೋಚ್ ಅನಿಲ್ ಕುಂಬ್ಳೆ ಇದೀಗ ಕಾರಣವನ್ನು ಬಿಚ್ಚಿಟ್ಟಿದ್ದಾರೆ.
2019ರ ಐಪಿಎಲ್ ಸೀಸನ್ ನಲ್ಲಿ ಡೆಲ್ಲಿ ಕ್ಯಾಪಿಟಲ್ ತಂಡ ಪ್ಲೇ ಆಫ್ ಹಂತವನ್ನು ಪ್ರವೇಶಿಸುವಲ್ಲಿ ತಂಡದಲ್ಲಿ ಪ್ರಮುಖ ಪಾತ್ರವನ್ನು ವಹಿಸಿದ ಶ್ರೇಯಸ್ ಅವರು ನಾಯಕನಾಗಿಯೂ ಉತ್ತಮವಾದ ಪ್ರದರ್ಶನವನ್ನು ನೀಡಿದ್ದಾರೆ ಆದ್ದರಿಂದ ಶ್ರೇಯಸ್ ಅಯ್ಯರ್ ಗೆ ಒನ್ ಡೌನ್ ನಲ್ಲಿ ಚಾನ್ಸ್ ನೀಡಲು ವಿರಾಟ್ ಕೊಹ್ಲಿಗೆ ಕೊಕ್ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.
ಈ ಬಾರಿಯ ಐಪಿಎಲ್ ನಲ್ಲಿ ಶ್ರೇಯಸ್ ಅಯ್ಯರ್ ದೆಹಲಿಯ ಫಿರೋಜ್ ಶಾ ಕೋಟ್ಲಾ ಮೈದಾನ ಹೆಚ್ಚು ಬ್ಯಾಟಿಂಗ್ ಸಹಕಾರಿ ಇಲ್ಲದೆ ಇದ್ದರೂ ಸಹ ಉತ್ತಮವಾಗಿ ಬ್ಯಾಟ್ ಬೀಸಿದ್ದಾರೆ ಅಲ್ಲದೆ ಒತ್ತಡದ ಸಂದರ್ಭದಲ್ಲೂ ತಂಡವನ್ನು ಅದ್ಭುತವಾಗಿ ಮುನ್ನಡೆಸಿದ್ದಾರೆ.
ಒಟ್ಟು 16 ಪಂದ್ಯಗಳಲ್ಲಿ 463 ರನ್ ಗಳಿಸಿರುವ ಶ್ರೇಯಸ್ ಅಯ್ಯರ್ ವಿರಾಟ್ ಕೊಹ್ಲಿ ಅವರಿಗಿಂತಲೂ ಉತ್ತಮ ಆಟಗಾರ ಹೀಗಾಗಿ ಕೊಯ್ಲಿ ಬದಲಾಗಿ ಅಯ್ಯರ್ ಗೆ ನನ್ನ ಐಪಿಎಲ್ 2019 ರ 11 ಆಟಗಾರರ ತಂಡದಲ್ಲಿ ಸ್ಥಾನ ನೀಡಿದ್ದೇನೆ ಎಂದು ಅನಿಲ್ ಕುಂಬ್ಳೆ ಹೇಳಿಕೊಂಡಿದ್ದಾರೆ.