ಮೇ 13 ರಂದು ಮಾದಕ ತಾರೆ ಸನ್ನಿ ಲಿಯೋನ್ ಹುಟ್ಟುಹಬ್ಬ. ಸನ್ನಿ ಅಭಿಮಾನಿಗಳು ತಮ್ಮ ನೆಚ್ಚಿನ ನಟಿಗೆ ಶುಭಾಶಯ ಮಹಾಪೂರವನ್ನೇ ಕಳುಹಿಸುತ್ತಾರೆ. ಪತಿ ಡೇನಿಯಲ್ ವೆಬರ್ ಮತ್ತು ಮಕ್ಕಳ ಜೊತೆ 38ನೇ ಜನುಮದಿನವನ್ನ ಸನ್ನಿ ಆಚರಿಸಿಕೊಂಡಿದ್ರು. ಈ ವರ್ಷ ಸನ್ನಿ ಲಿಯೋನ್ ಬರ್ತಡೇಯನ್ನ ಮತ್ತಷ್ಟು ಸ್ಪೆಷಲ್ ಆಗಿಸಿದ್ದು ಬಾಲಿವುಡ್ ಸೂಪರ್ ಸ್ಟಾರ್ ಅಮೀರ್ ಖಾನ್. ಸನ್ನಿ ಹುಟ್ಟುಹಬ್ಬಕ್ಕೆ ಮಿಸ್ಟರ್ ಪರ್ಫೆಕ್ಷನಿಸ್ಟ್ ಅಮೀರ್ ಹೃದಯಪೂರ್ವಕವಾಗಿ ಶುಭಕೋರಿದ್ದಾರೆ. ಈ ಬಗ್ಗೆ ಇನ್ಸ್ಟಾಗ್ರಾಮ್, ಟ್ವಿಟ್ಟರ್ ನಲ್ಲಿ ಪೋಸ್ಟ್ ಹಾಕಿದ್ದಾರೆ. ‘ಡಿಯರ್ ಸನ್ನಿ ಲಿಯೋನ್ ಹುಟ್ಟುಹಬ್ಬದ ಶುಭಾಶಯಗಳು. ಈ ದಿನ ನಿನಗೆ ಅದ್ಭುತವಾಗಿರಲಿ.
ಈ ವರ್ಷ ನಿನಗೆ ಒಳ್ಳೆಯದು ತರಲಿ. ಈ ಹುಟ್ಟುಹಬ್ಬ ಈ ದಿನವನ್ನ ಮತ್ತಷ್ಟು ವಿಶೇಷವಾಗಿಸಲಿ” ಎಂದು ಅಮೀರ್ ಖಾನ್ ಟ್ವೀಟ್ ಮಾಡಿದ್ದಾರೆ. ಅಮೀರ್ ಖಾನ್ ಮಾಡಿರುವ ಈ ಟ್ವೀಟ್ ಗೆ ಸನ್ನಿ ಲಿಯೋನ್ ಇನ್ನು ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಆದ್ರೆ, ಸನ್ನಿ ಬಗ್ಗೆ ಅಮೀರ್ ಖಾನ್ ಒಳ್ಳೆಯ ಭಾವನೆ ಹೊಂದಿದ್ದಾರೆ. ಅದೇ ರೀತಿ ಸನ್ನಿ ಕೂಡ ಅಮೀರ್ ಬಗ್ಗೆ ಗೌರವಾನ್ವಿತ ಪ್ರೀತಿ ಹೊಂದಿದ್ದಾರೆ. ಈ ಹಿಂದೆ ಸಂದರ್ಶನವೊಂದರಲ್ಲಿ ಅಮೀರ್ ಖಾನ್ ಗೆ ಸಂದರ್ಶಕರೊಬ್ಬರು ”ಸನ್ನಿ ಲಿಯೋನ್ ಜೊತೆ ನಟಿಸುತ್ತೀರಾ, ಆಕೆ ಈ ಹಿಂದೆ ನೀಲಿತಾರೆಯಾಗಿದ್ದರು” ಎಂದು ಪ್ರಶ್ನಿಸಿದ್ದರು. ಈ ಪ್ರಶ್ನೆ ಕೇಳಿದ್ದಕ್ಕೆ ಆ ಸಂದರ್ಶಕನ ವಿರುದ್ಧ ಹಲವು ಸೆಲೆಬ್ರಿಟಿಗಳು ಕಿಡಿಕಾರಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ್ದ ಅಮೀರ್ ಖಾನ್ ”ಸನ್ನಿ ಲಿಯೋನ್ ನಾನು ನಿನ್ನ ಜೊತೆ ಬಹಳ ಸಂತೋಷದಿಂದ ನಟಿಸುತ್ತೇನೆ. ನನಗೆ ನಿನ್ನ ಹಿಂದಿನ ಬದುಕಿನ ಬಗ್ಗೆ ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದರು. ಅದಕ್ಕೆ ಧನ್ಯವಾದ ಹೇಳಿದ್ದ ಸನ್ನಿ ಲಿಯೋನ್ ”ನಿಮ್ಮ ಈ ಮಾತು ಹೇಳಿ ಹೃದಯ ತುಂಬಿ ಬಂತು. ನನ್ನ ಬೆಂಬಲಿಸಿದ್ದಕ್ಕೆ ಥ್ಯಾಂಕ್ ಯೂ ಸೋ ಮಚ್” ಎಂದಿದ್ದರು ಮಾದಕ ಚೆಲುವೆ ಸನ್ನಿಲಿಯೋನ್