ಮಕ್ಕಳಿಗೆ ತಂದೆ-ತಾಯಿ ಬೈಯುವುದು, ತುಂಬಾ ಚಿಕ್ಕ ಮಕ್ಕಳು ಎಂದಾದರೆ ಹೊಡೆಯುವುದು ಸಹ ಸಾಮಾನ್ಯವೇ. ಆದರೆ, ಇಲ್ಲೊಬ್ಬ ಮಗ ತನ್ನ ತಂದೆ ತನಗೆ ಬೈತಾರೆ ಎಂದು ಪೀಸ್ ಪೀಸ್ ಮಾಡಿದ್ದಾನೆ.
ಅಮನ್ ಎನ್ನುವ 22 ವರ್ಷದ ಯುವಕ ತಂದೆಯನ್ನು ಕೊಲೈಗೈದ ಆಸಾಮಿ. ನನಗೆ ತಂದೆ ದಿನ ನಿತ್ಯ ಬೈಯುತ್ತಾರೆ ಎಂದು ಕೊಲೆ ಮಾಡಿ 25 ಪೀಸ್ ಮಾಡಿ ಬ್ಯಾಗಿನಲ್ಲಿ ತುಂಬಿಸಿದ್ದಾರೆ. ಇದು ನಡೆದಿರುವುದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ.
ಅಮನ್ ತಂದೆ 48 ವರ್ಷದ ಸಂದೇಶ್ ಅಗರ್ ವಾಲ್ ಅವರು ಮಗನಿಂದಲೇ ಕೊಲೆಯಾದ ಮೃತ ದುರ್ದೈವಿ ತಂದೆ. ಅಮನ್ ಅಪ್ಪ ಬೈಯುತ್ತಾರೆ ಎಂದು ಕೊಲೆ ಮಾಡಿದ್ದಾನೆ ಎನ್ನಲಾಗುತ್ತಿದ್ದು, ವಿಷಯ ತಿಳಿಯುತ್ತಿದ್ದಂತೆ ಪೂರ್ವ ದೆಹಲಿಯ ಪೊಲೀಸರು ಶಾದಾರಾದಲ್ಲಿ ಅಮನನ್ನು ಅರೆಸ್ಟ್ ಮಾಡಿದ್ದಾರೆ. ಅಮನ್ ತಾನು ತಂದೆಯನ್ನು ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ದೇಹವನ್ನು 25 ಪೀಸ್ ಮಾಡಿದ್ದೆ ಬ್ಯಾಗ್ನಲ್ಲಿ ತುಂಬಿ ಬೇರೆ ಕಡೆ ಎಸೆಯಲು ಪ್ಲಾನ್ ಮಾಡಿದ್ದೆ ಎಂದೂ ಸಹ ಅಮನ್ ಹೇಳಿಕೊಂಡಿದ್ದಾನೆ. ಆದರೆ ಅಮನ್ ಅವರ ಸಹೋದರ, ಸಂದೇಶ್ ಕುಮಾರ್ ಅವರ ಸಹೋದರನ ಆರೋಪವೇ ಬೇರೆ. ಅಮನ್ ಆಸ್ತಿಗಾಗಿ ಸಂದೇಶ್ ಕುಮಾರ್ ಅವರನ್ನು ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ. ಕೊಲೆಯಲ್ಲಿ ಅಮನ್ ತಾಯಿ ಮತ್ತು ಒಡಹುಟ್ಟಿದವರು ಭಾಗಿಯಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸ್ ತನಿಖೆಯಿಂದಷ್ಟೇ ಎಲ್ಲವೂ ಬಯಲಾಗಬೇಕಿದೆ.