ಟೀಂ ಇಂಡಿಯಾದ ಪ್ರಮುಖ ಬ್ಯಾಟ್ಸಮನ್, ಟಿ20 ಸ್ಪೆಷಲಿಸ್ಟ್ ಸುರೇಶ್ ರೈನಾ ಇವತ್ತು ವಿಶ್ವಕ್ಕೇ ಗೊತ್ತಿರುವಂತಹ ವ್ಯಕ್ತಿ..!
ಕಷ್ಟದಲ್ಲಿ ಬೆಳೆದವರು, ಅವಮಾನವನ್ನು ಎದುರಿಸಿದವರು ಜೀವನದಲ್ಲಿ ಗೆದ್ದ ಬಹಳಷ್ಟು ಉದಾಹರಾಣೆ ನಮ್ಮ ಮುಂದಿವೆ.! ಅಂತಾ ಉದಾಹರಣೆಗಳಲ್ಲಿ ರೈನಾ ಲೈಫ್ ಸ್ಟೋರಿ ಕೂಡ ಒಂದು..! ಇವತ್ತು ರೈನಾ ಒಬ್ಬ ಜನಪ್ರಿಯ ಆಟಗಾರ..! ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ..! ಆದರೆ, ಒಂದು ಕಾಲದಲ್ಲಿ ರೈನಾ ಕಷ್ಟದ ಬದುಕು ಸವೆಸಿದವರು..! ಈ ಕುರಿತು ಅವರೇ ಮನಬಿಚ್ಚಿ ಮಾತಾಡಿದ್ದಾರೆ..!
ಬಾಲ್ಯದ ದಿನಗಳು ರೈನಾ ಪಾಲಿಗೆ ಮುಳ್ಳಿನ ಹಾಸಿಗೆಯಾಗಿತ್ತು..! ಅವರು ದಾಟಿ ಬಂದಿದ್ದು ಕೂಡ ಮುಳ್ಳಿನ ಹಾದಿಯನ್ನು..!ಲಖನೌನ ಕ್ರೀಡಾ ವಸತಿ ಶಾಲೆಯೊಂದರಲ್ಲಿ ರೈನಾ ಓದ್ತಾ ಇದ್ದರು.! ಆ ಶಾಲೆಯಲ್ಲಿ ಅವರ ಸೀನಿಯರ್ಸ(ಹಿರಿಯ ವಿದ್ಯಾರ್ಥಿಗಳು) ಸಿಕ್ಕಾಪಟ್ಟೆ ಹಿಂಸೆ ಕೊಡ್ತಿದ್ದರು..! ಬೆಳಿಗಿನ ಜಾವ 3ಗಂಟೆಗೆ ಕೊರೆಯುವ ಚಳಿಯಲ್ಲಿ ಮಲಗಿದ್ದಾಗ ಆ ಪುಂಡರು ಬಂದು ತಣ್ಣೀರು ಎರಚುತ್ತಿದ್ದರು..! ಮರು ಮಾತಾಡಿದರೆ ಹೊಡೆಯುತ್ತಿದ್ದರು..! ಹಾಕಿಸ್ಟಿಕ್ ನಲ್ಲಿ ಮನಬಂದಂತೆ ಹೊಡಿತಾ ಇದ್ರು ಪುಂಡ ಸೀನಿಯರ್ಸ್..!
ಇಷ್ಟೇ ಅಲ್ಲ, ರೈಲಿನಲ್ಲಿ ರೈನಾಗೆ ಅವಮಾನ ಆಗಿತ್ತು..! ಆಗ ಅವರಿಗೆ 13ವರ್ಷ ವಯಸ್ಸು ಆಗ್ರಾಗೆ ರೈಲಿನಲ್ಲಿ ಹೋಗ್ತಾ ಇದ್ರು! ಸಿಕ್ಕಾಪಟ್ಟೆ ಚಳಿ ಇದ್ದಿದ್ರಿಂದ ಸ್ವಲ್ಪ ದೂರ ಹೋಗುವಷ್ಟರಲ್ಲಿ ನಿದ್ರೆ ಬಂತು.! ಎಚ್ಚರವಾದಾಗ ನೋಡ್ತಾರೆ ಅವರ ಕೈಗಳನ್ನು ಯಾರೋ ಕಟ್ಟಿಹಾಕಿರ್ತಾರೆ..! ಒಬ್ಬ ಹುಡುಗ ಎದೆಯ ಮೇಲೆ ಕೂತು ಮುಖಕ್ಕೆ ಸೂಸು ಮಾಡ್ತಿರ್ತಾನೆ..!
ಇಷ್ಟೆಲ್ಲಾ ಅವಮಾನ ಆಗಿದ್ರೂ ರೈನಾ ಎಲ್ಲವನ್ನೂ ಸಹಿಸಿಕೊಂಡು ತರಬೇತುದಾರ ಇಷ್ಟಪಡುವಂತೆ ಕ್ರಿಕೆಟ್ ಆಡಿ, ಸಭ್ಯನಾಗಿ ಬೆಳೆದರು..! ಅವರ ಬೆಳವಣಿಗೆ ಕಂಡು ಸಹಿಸಲಾಗದವರು ಎಷ್ಟೇ ಕಾಲೆಳೆದರೂ ರೈನಾ ತಮ್ಮಷ್ಟಕ್ಕೆ ತಾವು ಬೆಳೆಯುತ್ತಾ ಬಂದರು..! ಆದರೆ ಇಷ್ಟೆಲ್ಲಾ ಅವಮಾನ ಆಗುತ್ತಿದ್ದಾಗ ಒಮ್ಮೆ ಆತ್ಮಹತ್ಯೆ ಮಾಡಿಕೊಳ್ಳಲು ಯೋಚಿಸಿದ್ರಂತೆ..!
ಇವೆಲ್ಲವನ್ನು ಅವರೇ ಟಿ20ವಿಶ್ವಕಪ್ ಹಿನ್ನೆಲೆಯಲ್ಲಿ ವಿಶೇಷ ಸಂದರ್ಶನವೊಂದರಲ್ಲಿ ಹೇಳಿದ್ದಾರೆ..!
ಕಷ್ಟಗಳು ಇರುವುದೇ ಎದುರಿಸಲು..ಅವಮಾನ ಮೆಟ್ಟಿನಿಂತು ಯಶಸ್ಸನ್ನು ಪಡೆದರೆ ಅವಮಾನಿಸಿದ್ದವರು ತಲೆತಗ್ಗಿಸಿತ್ತಾರೆ..! ಇವತ್ತು ನಮ್ಮ ರೈನಾ ಗೆದ್ದಿದ್ದಾರೆ, ಅವರನ್ನು ಅವಮಾನಿಸಿದವರು ಹಾಗೇ ಯಾರಿಗೂ ಬೇಡದವರಾಗಿ ಬದುಕಿದ್ದು ಸತ್ತಂತಿದ್ದಾರೆ..!
POPULAR STORIES :
ಟಿ ಎಸ್ ಯು – ಸೋಷಿಯಲ್ ಮೀಡಿಯಾ ನೀವೂ ಉಪಯೋಗಿಸುವುದಕ್ಕೆ ಪ್ರೋತ್ಸಾಹ ಧನದ ರೂಪದಲ್ಲಿ ನಿಮಗೆ ದುಡ್ಡನ್ನೂ ಕೊಡ್ತಾರೆ..!
ಪ್ರತಿಯೊಬ್ಬರಿಗೂ ಈ ಅನುಭವ ಆಗಿರುತ್ತೆ..! ಆದ್ರೆ ಹೇಳ್ಕಳಕ್ಕಾಗಲ್ಲ, ಬಿಡಕ್ಕಾಗಲ್ಲ..!
ಅವತ್ತು ಗದ್ದೆ ಕೆಲಸ ಮಾಡ್ತಿದ್ದವರು…ಇವತ್ತು ಅಮೆರಿಕದಲ್ಲಿ ಕಂಪನಿ ಸಿಇಓ…!
ಗಂಡ ಸತ್ತರೂ ಅವನ ಮೇಲೆ “ವರದಕ್ಷಿಣೆ ಕಿರುಕುಳದ” ಆರೋಪ..! ಐಪಿಸಿ ಸೆಕ್ಷನ್ 498ಎ ಮಿಸ್ ಯೂಸ್ ಆಗ್ತಿದೆಯೇ..?
ಆ ಸಿನಿಮಾ ರಿಲೀಸ್ ಆಗಿ ಇವತ್ತಿಗೆ 20 ವರ್ಷ..! ಇಪ್ಪತ್ತು ವರ್ಷದ ನಂತರ ಶಾರುಖ್-ಕಾಜೋಲ್ ಮಾತುಕತೆ..
ಭಿಕ್ಷೆ ಹಾಕದ ಆ ಹುಡುಗ ಅದೆಂಥಾ ಕಷ್ಟದಲ್ಲಿದ್ದ ಗೊತ್ತಾ..?! ಪ್ರತ್ಯಕ್ಷವಾಗಿ ಕಂಡರೂ ಪ್ರಮಾಣಿಸಿ ನೋಡ್ಬೇಕು..!
ನಮ್ಮನೆ ಒಂದು ದೇಶ, ಎದುರುಮನೆ ಮತ್ತೊಂದು ದೇಶ..! ಬೆರಗುಗೊಳಿಸುವ ಅಂತರರಾಷ್ಟ್ರೀಯ ಗಡಿಗಳು..
ಇಂಥಾ ಆನೆಯನ್ನೆಲ್ಲಾದರೂ ನೋಡಿದ್ದೀರಾ..? ಚಿಕ್ಕ ವೀಡೀಯೋ ದೊಡ್ಡ ಮೆಸೇಜ್..!